ದಿನನಿತ್ಯದಲ್ಲಿ ಮೊಬೈಲ್ ಬಳಕೆ ಹೆಚ್ಚಾದಂತೆ ಸಾಮಾಜಿಕ ಜಾಲತಾಣಗಳ ಬಳಕೆ ಕೂಡ ಗಣನೀಯವಾಗಿ ಏರಿಕೆಯಾಗಿದೆ. ಜನರ ಬಳಕೆಯಲ್ಲಿ ವಾಟ್ಸಪ್ ತನ್ನ ಪಾರುಪತ್ಯ ಕಾಯ್ದುಕೊಂಡರೆ, ಫೇಸ್ಬುಕ್ ಅನ್ನು ಕೂಡ ಹೆಚ್ಚು ಮಂದಿ ಬಳಸುತ್ತಿದ್ದಾರೆ ಎಂದರೆ ತಪ್ಪಾಗದು.
ಇತ್ತೀಚೆಗೆ ಫೇಸ್‌ಬುಕ್, ವಾಟ್ಸಪ್ ಸೇರಿದಂತೆ ಪ್ರಮುಖ ಸಾಮಾಜಿಕ ತಾಣಗಳಲ್ಲಿ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆಯ ಸುದ್ದಿಗಳು ಹೆಚ್ಚಾಗಿ ಕೇಳಿಬಂದಿವೆ. ಈ ನಿಟ್ಟಿನಲ್ಲಿ ಫೇಸ್‌ಬುಕ್ ಮತ್ತು ವಾಟ್ಸಪ್ ಸಾಕಷ್ಟು ನೂತನ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿವೆ.
ಆದರೂ ಬಳಕೆದಾರರು ತಮ್ಮ ಖಾಸಗಿ ಮಾಹಿತಿ ರಕ್ಷಿಸಲು ಕೆಲವು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗಿರುವುದು ಅವಶ್ಯ. ಬಳಕೆದಾರರು ತಿಳಿಯದೆ ಮಾಡುವ ಕೆಲವೊಂದು ಸಣ್ಣ ತಪ್ಪಿನಿಂದ ಖಾತೆಯ ವಿವರಗಳನ್ನೂ ಹ್ಯಾಕರ್ ಗಳು ಸುಲಭವಾಗಿ ಪಡೆಯಬಹುದಾಗಿದೆ.
ಫೇಸ್ಬುಕ್ ಖಾತೆ ಹೊಂದಿದ್ದವರು ಅಕೌಂಟ್ ಸುರಕ್ಷಿತವಾಗಿಡುವ 5 ಬೆಸ್ಟ್ ಟಿಪ್ಸ್ಗಳು ಇಲ್ಲಿವೆ
ಖಾತೆದಾರರು ಲಾಗಿನ್ ಅಲರ್ಟ್ ಬಳಸಿಕೊಂಡರೆ ಪಾಸ್ವರ್ಡ್ ಬೇರೆಯವರಿಗೆ ದೊರೆತರೂ ಕೂಡ ಖಾತೆದಾರರ ಅಕೌಂಟ್ ಅನುಮತಿ ಸಿಗದೆ ಲಾಗಿನ್ ಮಾಡಲು ಸಾಧ್ಯವಿಲ್ಲ. ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಸರಿಯಾಗಿ ನಮೂದಿಸಿದರೂ ಕೂಡ ಮೊಬೈಲ್ಗೆ ಬರುವ ಕೋಡ್ ದೊರಕಿದರೆ ಮಾತ್ರ ಅಕೌಂಟಿಗೆ ಲಾಗಿನ್ ಆಗಬಹುದು.ಈ ಕೋಡ್ ಇಲ್ಲದೆ ಖಾತೆದಾರರು ಕೂಡಾ ಸ್ವಂತ ಅಕೌಂಟ್ ಬಳಸಲಾಗದು.
ಫೇಸ್ಬುಕ್ಗೆ ಖಾತೆದಾರ ಲಾಗಿನ್ ಆದ ಸಮಯವನ್ನು ಗಮನಿಸಬೇಕು. ಸಾಮಾನ್ಯವಾಗಿ ರಿಕ್ವೆಸ್ಟ್ ಲಾಗಿನ್ ಅಪ್ರೂವಲ್ ಮೂಲಕ ಖಾತೆದಾರರಿಗೆ ಕೋಡ್ ಸಿಗುತ್ತದೆ. ಈ ಕೋಡ್ ಮೂಲಕವೇ ಅನಾಮಿಕ ಬ್ರೌಸರ್ ಗಳಲ್ಲಿ ಅಕೌಂಟ್ ಬಳಸಬಹುದಾಗಿದೆ. ಹಾಗಾಗಿ ಖಾತೆದಾರರು ಅಕೌಂಟ್ ಬಳಸುವಾಗ ಕೋಡ್ ಅನ್ನು ಶೇರ್ ಮಾಡಬಾರದು.
ಬಳಕೆದಾರರು ಖಾಸಗಿತನದ ಮಾಹಿತಿ ರಕ್ಷಣೆಗೆ ಫೇಸ್‌ಬುಕ್‌ನಲ್ಲಿ ‘ಆಫ್‌ಫೇಸ್‌ಬುಕ್ ಆಕ್ಟಿವಿಟಿ’ – ಆಯ್ಕೆಯನ್ನು ಆಫ್ ಮಾಡಿಕೊಳ್ಳಬೇಕು. ಈ ಆಯ್ಕೆಯನ್ನು ಆಫ್ ಮಾಡುವುದರಿಂದ ಬಳಕೆದಾರರು ವೆಬ್‌ಬ್ರೌಸರ್‌ನಲ್ಲಿ ಸರ್ಚ್ ಮಾಡಿರುವ ಅಂಶಗಳು ಫೇಸ್‌ಬುಕ್‌ನಲ್ಲಿ ಬರದಂತೆ ತತಡೆಯಬಹುದಾಗಿದೆ
ಫೇಸ್ಬುಕ್ ನೀಡುವ 10 ನಂಬರಿನ ಕೋಡ್ಗಳನ್ನು ಬಳಸಬೇಕು. ಇದಕ್ಕಾಗಿ ಫೇಸ್ಬುಕ್ ಅಕೌಂಟ್ನ ಸೆಕ್ಯುರಿಟಿ ಸೆಟ್ಟಿಂಗ್ಸ್ಗೆ ಹೋಗಿ, Get codes to use when you don’t have your phone ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಈ ಕೋಡ್ ಫೋನ್ ಖಾತೆದಾರರ ಬಳಿ ಇಲ್ಲದೆ ಇದ್ದಾಗ , ಮೊಬೈಲ್ಗೆ ಕಳುಹಿಸಿದ ಕೋಡ್ ಸಹ ಸಿಗದೆ ಇದ್ದಾಗ ಬಳಸಿಕೊಳ್ಳಬಹುದು.
ಖಾತೆದಾರರು ಅಕೌಂಟ್ ಗೆ ಲಾಗಿನ್ ಆದಾಗ ಯಾವ ಸ್ಥಳದಿಂದ ಲಾಗಿನ್ ಆಗಿದೆ ಎಂಬುವುದನ್ನು ನೋಡಿಕೊಳ್ಳಬೇಕು. ಸ್ನೇಹಿತರು, ಪರಿಚಿತರೊಂದಿಗೆ ಪಾಸ್ವರ್ಡ್ ಹಂಚಿಕೊಳ್ಳುವ ಅಭ್ಯಾಸವಿದ್ದರೆ, ಬೇರೆ ಸ್ಥಳದಿಂದ ಸ್ನೇಹಿತರು ಕೂಡ ಲಾಗಿನ್ ಆಗಿ ಮಾಹಿತಿ ಕಲೆ ಹಾಕುವ ಸಾಧ್ಯತೆ ಇದೆ. ಹೀಗಿರುವಾಗ ಫೇಸ್ಬುಕ್ ಸೆಟ್ಟಿಂಗ್ಸ್ಗೆ ಹೋಗಿ “Where you’re logged in ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಲಾಗಿನ್ಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಪಡೆದುಕೊಳ್ಳಬಹುದು.
ಯಾವುದೋ ಕಾರಣದಿಂದ ಮೊಬೈಲ್ ಖಾತೆದಾರರ ಬಳಿ ಫೋನ್ ಇಲ್ಲದೆ, ಮೇಲ್ ಕೂಡಾ ಬಳಸಲು ಆಗದಿದ್ದಾಗ ಫೇಸ್‌ಬುಕ್‌ನಲ್ಲಿ ಸೇರಿಸಿಕೊಂಡ ನಂಬಿಕಸ್ಥ ಮಿತ್ರರ ನೆರವಿನಿಂದ ಲಾಗಿನ್ ಆಗಬಹುದು.
ಖಾತೆದಾರರು ಪಾಸ್ವರ್ಡ್ ಮಾಹಿತಿ, ಇಮೇಲ್ ವಿಳಾಸಗಳನ್ನೂ ಇತರರಿಗೆ ಹೇಳುವ ಅಭ್ಯಾಸವಿದ್ದರೆ ಬಿಡಬೇಕು. ಜೊತೆಗೆ ಖಾತೆದಾರರ ಸಣ್ಣ ತಪ್ಪುಗಳು ಹ್ಯಾಕರ್ ಗೆ ವಿವರಗಳನ್ನೂ ಪಡೆಯಲು ರಹದಾರಿ ಕೊಟ್ಟಂತೆ ಆಗುತ್ತದೆ.