ಶಾಲಾ ಬಾಲಕಿಯರಿಗೆ ಬ್ಲೂಫಿಲಂ ತೋರಿಸಿ ಮೈಮುಟ್ಟಿದ ಶಿಕ್ಷಕ | ಕಾಮಿ ಶಿಕ್ಷಕನಿಗೆ ತಕ್ಕ ಶಿಕ್ಷೆ ಕೊಟ್ಟ ಗ್ರಾಮಸ್ಥರು!!!

ಶಾಲೆಯಲ್ಲಿರುವ ವಿದ್ಯಾರ್ಥಿನಿಯರಿಗೆ ಶಾಲಾ ಶಿಕ್ಷಕನೇ ಪೋರ್ನ್ ವೀಡಿಯೊ ತೋರಿಸಿ ಮೈಮುಟ್ಟಿದ ಹೀನ ಕೃತ್ಯವೊಂದು ನಡೆದಿದೆ. ಜಾರ್ಖಂಡ್​ನ ಪಶ್ಚಿಮ ಸಿಂಗ್​ಭೂಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಘಟನೆ ನಡೆದಿದೆ.


Ad Widget

Ad Widget

Ad Widget

Ad Widget
Ad Widget

Ad Widget

ಶಾಲೆಯ ತರಗತಿ ಕೊಠಡಿಯೊಳಗೆ ಬಾಲಕಿಯರಿಗೆ ಪೋರ್ನ್ ವೀಡಿಯೊ ತೋರಿಸಿ, ಅಶ್ಲೀಲ ರೀತಿಯಲ್ಲಿ ಅವರ ಮೈಮುಟ್ಟಿದ ಶಿಕ್ಷಕನ ಮುಖಕ್ಕೆ ‌ಗ್ರಾಮಸ್ಥರೇ ತಕ್ಕಶಾಸ್ತಿ ಮಾಡಿದ್ದಾರೆ.


Ad Widget

ಹೌದು, ಈ ಕಾಮುಕ ಶಿಕ್ಷಕನಿಗೆ ಊರವರೇ, ಮಸಿ ಬಳಿದು, ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಗ್ರಾಮಸ್ಥರಿಂದ ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಈ ಮಧ್ಯೆ ಆರೋಪಿಯನ್ನು ತಕ್ಷಣ ಜೈಲಿಗಟ್ಟುವಂತೆ ಆಗ್ರಹಿಸಿ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.

ಶಾಲಾ ಶಿಕ್ಷಕರು ತಮಗೆ ಅಶ್ಲೀಲ ವಿಡಿಯೋ ತೋರಿಸಿ ನಮ್ಮ ಮೈ ಮುಟ್ಟಿದ್ದಾರೆ ಎಂದು ನೋವಾಮುಂಡಿ ಬ್ಲಾಕ್​ನ ಮಿಡ್ಲ್​ ಸ್ಕೂಲ್​ನಲ್ಲಿ ಕಲಿಯುತ್ತಿರುವ ಆರು ಬಾಲಕಿಯರು ಪೋಷಕರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಆರೋಪಿಯ ವಿರುದ್ಧ ಬುಧವಾರ ದೂರು ದಾಖಲಿಸಿದ್ದಾರೆ. ದೂರು ನೀಡಿದ ನಂತರವೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ತಾವೇ ಸಭೆ ನಡೆಸಿ ಆರೋಪಿಯ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ.

ಭಾರೀ ಸಂಖ್ಯೆಯಲ್ಲಿದ್ದ ಮಹಿಳೆಯರು ಆರೋಪಿಯನ್ನು ಹಿಡಿದು ಗುರುವಾರ ಮುಖಕ್ಕೆ ಮಸಿ ಬಳಿದು ಚಪ್ಪಲಿ ಹಾರ ಹಾಕಿದ್ದಾರೆ. ಬಡಜಮಡಾ ಪ್ರದೇಶದಲ್ಲಿ ಮೆರವಣಿಗೆ ಮಾಡಿ ಸಮೀಪದ ರೈಲ್ವೆ ನಿಲ್ದಾಣದ ಕಡೆಗೆ ಕರೆದುಕೊಂಡು ಹೋಗುತ್ತಿದ್ದಾಗ ಪೊಲೀಸರು ಸ್ಥಳಕ್ಕೆ ಧಾವಿಸಿ ಆತನನ್ನು ರಕ್ಷಿಸಿದ್ದಾರೆ. ಈ ಘಟನೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಬಡಜಮಡಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಬಸುದೇವ್ ಟೊಪ್ಪೊ ತಿಳಿಸಿದ್ದಾರೆ.

error: Content is protected !!
Scroll to Top
%d bloggers like this: