APPLE: ಇನ್ಮುಂದೆ ಆಲೋಚನೆಯಿಂದಲೇ ನಿಯಂತ್ರಿಸೋ ಐಫೋನ್ ಬರಲಿದೆ!

Share the Article

APPLE: ಆಪಲ್ (APPLE) ಕಂಪನಿ ಬಳಕೆದಾರರಿಗೆ ಆಲೋಚನೆಯಿಂದಲೇ ನಿಯಂತ್ರಿಸಬಹುದಾದ ಫೀಚ‌ರ್ ಉಳ್ಳ ಐಫೋನ್ ತಯಾರಿಸಲು ಮುಂದಾಗಿದೆ. ಐಫೋನ್‌ನ ಈ ಅಭಿವೃದ್ಧಿಯಿಂದ ಬಳಕೆದಾರರು ಟ್ಯಾಪಿಂಗ್ ಅಥವಾ ಟೈಪಿಂಗ್ ಮಾಡದೇ ಫೋನ್ ಅನ್ನು ಕೇವಲ ಆಲೋಚನೆಯಿಂದಲೇ ನಿಯಂತ್ರಿಸಬಹುದಾಗಿದೆ.

ಮೆದುಳಿನ ಇಂಪ್ಲಾಂಟ್‌ಗಳನ್ನು ಬಳಸಿಕೊಂಡು ನಿಯಂತ್ರಿಸಲ್ಪಡುವ ಐಫೋನ್‌ಗಳು ಮತ್ತು ಐಪ್ಯಾಡ್‌ಗಳು ಸೇರಿದಂತೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಆಪಲ್ ನರ ತಂತ್ರಜ್ಞಾನ ಕಂಪನಿ ಸಿಂಕ್ರೋನ್‌ನೊಂದಿಗೆ ಪಾರ್ಟ್‌ನರ್‌ಶಿಪ್ ಮಾಡಿಕೊಂಡಿದೆ.

ದೈಹಿಕ ಅಂಗವೈಕಲ್ಯ ಹೊಂದಿರುವ ಬಳಕೆದಾರರು ತಮ್ಮ ಸಾಧನಗಳನ್ನು ಕೇವಲ ಯೋಚಿಸುವ ಮೂಲಕ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವಂತೆ ವಿನ್ಯಾಸಗೊಳಿಸಲಾದ ಈ ಸಾಫ್ಟ್‌ವೇ‌ರ್, ಆಪಲ್‌ ಸಾಧನಗಳನ್ನು ಮೆದುಳಿನ ಮೋಟಾ‌ರ್ ಕಾರ್ಟೆಕ್ಸ್‌ನ ಮೇಲೆ ಇರಿಸಲಾದ ಸಿಂಕ್ರೋನ್‌ ಸ್ಟೆಂಟ್ ತರಹದ ಇಂಪ್ಲಾಂಟ್‌ನಿಂದ ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ.

Comments are closed.