ಟೆನಿಸ್‌ಗೆ ವಿದಾಯ ಹೇಳಿದ ಫೆಡರರ್ | ಸ್ನೇಹಿತನ ಕಣ್ಣೀರೇ ಕ್ರೀಡೆಯಲ್ಲಿ ಕಳೆದ ದಿನಗಳಿಗೆ ಸಿಕ್ಕ ದೊಡ್ಡ ಗೌರವ – ವಿರಾಟ್ ಕೊಹ್ಲಿ

ಟೆನಿಸ್ ಅಂಗಳದಲ್ಲಿ ತನ್ನದೇ ಛಾಪು ಮೂಡಿಸಿದ್ದ ಟೆನಿಸ್ ಗ್ರ್ಯಾಂಡ್ ಸ್ಲಾಮ್ ಗೆದ್ದಿದ್ದ ಸ್ವೀಡನ್‍ನ ರೋಜರ್ ಫೆಡರರ್ ತಮ್ಮ ಆಟಕ್ಕೆ ನಾಂದಿ ಹಾಡಿ, ವೃತ್ತಿ ಬದುಕಿಗೆ ಕಣ್ಣೀರ ವಿದಾಯ ಹೇಳಿದ್ದಾರೆ.

2022ರ ಲೆವೆರ್ ಕಪ್ ಟೆನಿಸ್ ಟೂರ್ನಿಯ ಡಬಲ್ಸ್ ಪಂದ್ಯದಲ್ಲಿ ಅಮೆರಿಕದ ಜ್ಯಾಕ್ ಸಾಕ್ ಮತ್ತು ಫ್ರಾನ್ಸಿಸ್ ಟಿಯಾಫೋ ಅವರ ಜೋಡಿಯ ವಿರುದ್ಧ 4-6, 7-6(2), 11-9 ಸೆಟ್‍ಗಳಿಂದ ಸೋತರು. ಇದರೊಂದಿಗೆ ಫೆಡರಲ್‍ಗೆ ಸೋಲಿನ ವಿದಾಯ ಸಿಕ್ಕಂತಾಗಿದೆ.

ಈ ವೇಳೆ ಜೊತೆಗಿದ್ದ ನಡಾಲ್ ಕೂಡ ಅಳಲು ಪ್ರಾರಂಭಿಸಿದರು. ಇದೀಗ ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇವರೊಂದಿಗೆ ದಶಕಗಳ ಕಾಲ ಟೆನಿಸ್ ಕೋರ್ಟ್‍ನಲ್ಲಿ ಬದ್ಧ ಶತ್ರುಗಳಂತೆ ಕಾದಾಡಿದ್ದ ರಫೇಲ್ ನಡಾಲ್ ಕೂಡ ಕಣ್ಣೀರು ಹಾಕಿದರು. ಇದೀಗ ಪ್ರೇಕ್ಷಕರತ್ತ ಕೈಬೀಸಿ ಧನ್ಯವಾದ ಹೇಳಿದ ಫೆಡರಲ್ ವಿದಾಯ ಒಂದು ಸಂಚಲನವೇ ಸೃಷ್ಟಿಮಾಡಿದೆ. ಪ್ರೇಕ್ಷಕರನ್ನನೇ ಕಣ್ಣೀರು ಬರುವಂತೆ ಮಾಡಿದ ಪಂದ್ಯವಾಗಿದೆ. ಈ ಸಮಯದಲ್ಲಿ ಮೈದಾನದಲ್ಲೇ ಫೆಡರಲ್ ಮನನೊಂದು ಅತ್ತರು.

ಫೆಡರಲ್ ವಿದಾಯಕ್ಕೆ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಮಾಡಿರುವ ಟ್ವೀಟ್ ಕೂಡ ಗಮನಸೆಳೆಯುತ್ತಿದ್ದು, ಪ್ರತಿಸ್ಪರ್ಧಿಗಳು ಕೊನೆಯ ಬಾರಿ ಈ ರೀತಿ ಕಾಣಿಸಿಕೊಳ್ಳಬಹುದೆಂದು ಯಾರು ಭಾವಿಸಿದ್ದರು. ಟೆನಿಸ್ ಕ್ರೀಡೆಯು ಅದ್ಭುತ ಕ್ರೀಡೆಯಾಗಿದ್ದು . ಇದು ನನ್ನ ಪಾಲಿಗೆ ಅತ್ಯಂತ ಸುಂದರವಾದ ಕ್ರೀಡಾ ಚಿತ್ರವಾಗಿದ್ದು, ನಿಮ್ಮ ಸಹ ಆಟಗಾರರು ನಿಮಗಾಗಿ ಅತ್ತಾಗ, ನೀವು ಈವರೆಗೆ ಕ್ರೀಡೆಯಲ್ಲಿ ಕಳೆದ ದಿನಗಳಿಗೆ ಸಿಕ್ಕ ದೊಡ್ಡ ಗೌರವವಾಗಿರುತ್ತದೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

ಫೆಡರರ್ 2003ರಲ್ಲಿ ಮೊದಲ ಬಾರಿಗೆ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದಿದ್ದರು. ಅದಾದ ಬಳಿಕ 8 ವಿಂಬಲ್ಡನ್, 6 ಆಸ್ಟ್ರೇಲಿಯನ್ ಓಪನ್, 1 ಫ್ರೆಂಚ್ ಓಪನ್ ಮತ್ತು 5 ಯುಎಸ್ ಓಪನ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 1,526 ಪಂದ್ಯಗಳನ್ನು ಆಡಿರುವ ರೋಜರ್, 1,251 ಪಂದ್ಯ ಗೆದ್ದಿದ್ದಾರೆ. 103 ಟ್ರೋಫಿ, 31 ಗ್ರ್ಯಾಂಡ್ ಸ್ಲಾಮ್ ಫೈನಲ್ ಆಡಿದ್ದಾರೆ. 20 ಗ್ರ್ಯಾಂಡ್ ಸ್ಲಾಮ್ ಮುಡಿಗೇರಿಸಿಕೊಂಡಿದ್ದಾರೆ. 5 ಬಾರಿ ನಂಬರ್ 1 ಆಟಗಾರನಾಗಿ ಕಾಣಿಸಿಕೊಂಡಿದ್ದರು.

Leave A Reply

Your email address will not be published.