ತಮ್ಮ ನೆಚ್ಚಿನ ಮನೆಯನ್ನು ಖಾಲಿ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್ | ಕಾರಣ?

ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್, ರಸಿಕರ ರಾಜ ರವಿಚಂದ್ರನ್ ಅವರು ಈಗ ಸಿನಿಮಾ ವಿಷಯಕ್ಕೆ ಅಲ್ಲ ಅವರ ಮನೆ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಅಂದ ಹಾಗೆ ರವಿಚಂದ್ರನ್ ಅವರಿಗೆ ಸಿನಿಮಾ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಸಿನಿಮಾನೇ ಉಸಿರು ಎಂದು ನಂಬಿದ ಸ್ಟಾರ್ ನಟ ರವಿಚಂದ್ರನ್. ಆದರೆ ರವಿಚಂದ್ರನ್ ಅವರು ತಮ್ಮ ಮೆಚ್ಚಿನ ಮನೆಯನ್ನು ಬಿಟ್ಟು ಮತ್ತೊಂದು ಮನೆಗೆ ಬಂದಿದ್ದಾರೆ.


Ad Widget

Ad Widget

Ad Widget

Ad Widget
Ad Widget

Ad Widget

ಹೌದು! ರಾಜಾಜಿನಗರದಲ್ಲಿರೋ ಮನೆಯನ್ನು ಬಿಟ್ಟು ಹೊಸಕೆರೆ ಹಳ್ಳಿಯಲ್ಲಿರೋ ಮತ್ತೊಂದು ಮನೆಗೆ ರವಿಚಂದ್ರನ್ ಕುಟುಂಬ ತೆರಳಿದ್ದಾರೆ.


Ad Widget

ಸಸ್ಪೆನ್ಸ್ ಏನೆಂದರೆ ಮನೆ ಖಾಲಿ ಮಾಡಲು ಕಾರಣ ಏನೆಂದು ತಿಳಿದಿಲ್ಲ. ಆದರೆ ಮನೆ ಖಾಲಿ ಮಾಡಿದ್ದು, ರಿನೋವೇಷನ್ ಮಾಡಿಸೋಕೆ ಎಂದು ಆಪ್ತ ಮೂಲಗಳು ಹೇಳಿವೆ. ರವಿಚಂದ್ರನ್ ಮೊದಲ ಪುತ್ರ ಮನೋರಂಜನ್ ಮದುವೆ ಇತ್ತೀಚೆಗಷ್ಟೆ ಆಗಿದೆ. ಈ ಕಾರಣದಿಂದ ಮನೆ ರೂಂಗಳನ್ನು ರಿನೋವೇಷನ್ ಮಾಡೋ ಕೆಲಸ ಆಗ್ತಾ ಇರೋದರಿಂದ, ಮನೆ ಬದಲಾಯಿಸಿದ್ದಾರಂತೆ. ಮಾತ್ರವಲ್ಲದೇ ಇದರ ಜೊತೆ ರಾಜಾಜಿನಗರ ಮನೆಯಲ್ಲಿ ವಾಸ್ತು ಸರಿ ಇಲ್ಲ ಹೀಗಾಗಿ ಸ್ವಲ್ಪ ದಿನದ ಮಟ್ಟಿಗೆ ಮನೆ ಬಿಡಿ ಎಂದು ಆಪ್ತರು ಹೇಳಿದ್ದಾರಂತೆ. ಈ ಎಲ್ಲಾ ಕಾರಣದಿಂದ ಸದ್ಯದ ಮಟ್ಟಿಗೆ ರಾಜಾಜಿನಗರದ ಮನೆಯನ್ನು ರವಿಚಂದ್ರನ್ ಖಾಲಿ ಮಾಡಿದ್ದಾರೆ.

ರಾಜಾಜಿನಗರದಲ್ಲಿರೋ ಮನೆಯಲ್ಲಿ ಗೆಲುವಿನ ಜೊತೆ ಫೈಲ್ಯೂರ್ ನ್ನು ಕಂಡಿದ್ದಾರೆ ರವಿಚಂದ್ರನ್. ಹಾಗೆನೇ ಇತ್ತೀಚಿನ ಸಿನಿಮಾ ಯಾಕೋ ಸಕ್ಸಸ್ ಆಗುತ್ತಿಲ್ಲ. ಹಾಗೂ ಸಿನಿಮಾಗಳ ಶೂಟಿಂಗ್ ಅನ್ನು ರಾಜಾಜಿನಗರದ ಮನೆಯಲ್ಲೇ ರವಿಚಂದ್ರನ್ ಮಾಡುತ್ತಿದ್ದರು. ಆದರೆ ಈಗ ದಿಢೀರ್ ಅಂತ ಮನೆ ಖಾಲಿ ಮಾಡಿ ಹೊಸಕೆರೆ ಹಳ್ಳಿಯಲ್ಲಿ ಮನೆ ಮಾಡಿದ್ದಾರೆ.

2019 ಮೇ ತಿಂಗಳಲ್ಲಿ ರವಿಚಂದ್ರನ್ ಅವರು ಪುತ್ರಿ ಗೀತಾಂಜಲಿ ಮದುವೆ ಆಯಿತು. ನಂತರ ಮೊದಲ ಮಗ ಮನೋರಂಜನ್ ಮದುವೆ ಕೂಡಾ ಮಾಡಿದ್ದಾರೆ. ರವಿಚಂದ್ರನ್ ಅವರ ಇಬ್ಬರು ಗಂಡು ಮಕ್ಕಳು ಚಲನಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

error: Content is protected !!
Scroll to Top
%d bloggers like this: