ಪ್ರೀತಿಸಿದಾಕೆಯ ಜೊತೆ ಗಂಡನ ಮದುವೆ ಮಾಡಿಸಿದ ಪತ್ನಿ | ಈ ಅದೃಷ್ಟ ನನಗಿಲ್ವೇ ಅನ್ನುತ್ತಿರುವ ನೊಂದ ಗಂಡಂದಿರು

ಸಾಮಾನ್ಯವಾಗಿ ಹುಡುಗಿಯರಿಗೆ ತನ್ನದು ಅನ್ನೋ ಭಾವ ಜಾಸ್ತಿ. ಅದು ವಸ್ತುವೇ ಆಗಿರಲಿ ಮಾನವರೇ ಆಗಿರಲಿ, ತನ್ನೊಂದಿಗೆ ಹೆಚ್ಚು ಆತ್ಮೀಯತೆಯಿಂದ ಇದ್ದರೆ ಎಂದೂ ಬಿಟ್ಟು ಕೊಡುವುದಿಲ್ಲ. ಅದರಲ್ಲೂ ಗಂಡ ಅಥವಾ ಬಾಯ್ ಫ್ರೆಂಡ್ ಅಂದ್ರೆ ತುಸು ಹೆಚ್ಚೆ. ಹೀಗಾಗಿ, ಅವರು ಯಾರೊಂದಿಗೂ ಬೆರೆಯೋದು ಇಷ್ಟ ಪಡೋದಿಲ್ಲ.


Ad Widget

ಹೌದು. ತನ್ನ ಗಂಡ ಯಾರೊಂದಿಗಾದರೂ ಸಲುಗೆ ಬೆಳೆಸಿದರೆ ಕೇಳೋದೇ ಬೇಡ. ದೊಡ್ಡ ರಂಪಾಟನೇ ನಡೆಯುತ್ತೆ. ಚೂರು ಆತ್ಮೀಯವಾಗಿ ಮಾತಾಡಿದರೂ ಕೋಪ ಬರುತ್ತದೆ. ಅಂತದರಲ್ಲಿ ಇಲ್ಲೊಂದು ಮಹಿಳೆ ತನ್ನ ಗಂಡನ ಪ್ರೀತಿ ವಿಚಾರ ತಿಳಿದು ಏನೂ ಮಾಡಿದ್ದಾಳೆ ಗೊತ್ತಾ?

ಬಹುಶಃ ಈ ಘಟನೆ ಕೇಳಿದ ಮೇಲಂತೂ ಗಂಡಸರು ನನಗೆ ಇಂತಹ ಭಾಗ್ಯ ಸಿಕ್ಕಿಲ್ವೇ ಅನ್ನದೆ ಇರರು. ಅಷ್ಟಕ್ಕೂ ಧರ್ಮ ಪತ್ನಿ ಮಾಡಿದ್ದೇನೆಂದು ಹೇಳ್ತೇವೆ ನೋಡಿ. ಹೌದು. ಈಕೆ ಮದುವೆಗೆ ಮೊದಲು ತನ್ನ ಗಂಡ ಪ್ರೀತಿಸಿದ್ದ ಯುವತಿಯ ಜೊತೆ ಗಂಡನ ಮದುವೆ ಮಾಡಿದ್ದಾಳೆ. ಈ ವಿಚಿತ್ರ ಘಟನೆ ನಡೆದಿದ್ದು, ಆಂಧ್ರಪ್ರದೇಶದ ತಿರುಪತಿಯಲ್ಲಿ.


Ad Widget

ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ದಕ್ಕಿಲ್ ಮಂಡಲದ ಅಂಬೇಡ್ಕರ್ ನಗರದ ಯುವಕನೋರ್ವ ಡಿಗ್ರಿ ಓದಿದ್ದು, ಈತನಿಗೆ ಟಿಕ್ ಟಾಕ್ ಹುಚ್ಚು ಅಧಿಕವಾಗಿತ್ತು. ಹಾಗಾಗಿ, ಜಾಲತಾಣದಲ್ಲಿ (Social Media) ಅದು ಇದು ವಿಡಿಯೋ ಮಾಡಿಕೊಂಡಿದ್ದ. ಆದ್ರೆ, ಅದು ಕೋವಿಡ್ ಸಮಯ. ಈಗ ಬ್ಯಾನ್ ಆಗಿರುವ ಸಾಮಾಜಿಕ ಜಾಲತಾಣ ಟಿಕ್‌ಟಾಕ್‌ನಲ್ಲಿ ಓರ್ವ ಯುವತಿಯ ಮೇಲೆ ಪ್ರೀತಿಯಾಗಿತ್ತು. ಆಕೆ ಆಂಧ್ರದ ವಿಶಾಖಪಟ್ಟಣಂ ನಿವಾಸಿ. ಪರಿಚಯವಾಗಿ ಎರಡು ವರ್ಷಗಳ ಕಾಲ ಅವರು ಡೇಟಿಂಗ್ (Dating) ಮಾಡಿದ್ದಾರೆ. ಆದರೆ ಮುಂದೆ ಏನಾಯಿತೋ ಏನೂ.. ಇಬ್ಬರು ಪರಸ್ಪರ ದೂರವಾಗಿದ್ದರು.


Ad Widget

ಇದಾದ ಬಳಿಕ ಆ ಯುವಕನಿಗೆ ಅದೇ ಟಿಕ್‌ಟಾಕ್‌ನಲ್ಲಿ (Tiktok) ಮತ್ತೊರ್ವ ಯುವತಿಯೊಂದಿಗೆ ಪ್ರೀತಿಯಾಗಿದ್ದು, ಮದುವೆಯೂ ಆಗಿದೆ. ಆಕೆ ಆಂಧ್ರಪ್ರದೇಶದ ಕಡಪಾ ಮೂಲದವಳು, ಆದರೆ ವರ್ಷಗಳ ನಂತರ ಯುವಕನ ಮೊದಲ ಪ್ರೇಮಿಯಾಗಿದ್ದ ಯುವತಿ ಈತನನ್ನು ಹುಡುಕಿಕೊಂಡು ಬಂದಿದ್ದಾಳೆ. ಈ ವೇಳೆ ಆತನಿಗೆ ಮದುವೆಯಾಗಿರುವುದು ಆಕೆಗೆ ತಿಳಿದಿದೆ. ಆದರೆ ಆತನ ಮದುವೆಯ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳದ ಆಕೆ, ದೊಡ್ಡ ಹಂತದ ನಿರ್ಧಾರವನ್ನೇ ಮಾಡಿದ್ದಾಳೆ.

ಹೌದು. ಆಕೆ ಆತನ ಪತ್ನಿಯ ಜೊತೆ ಮಾತನಾಡಿದ್ದು, ತಾನು ಆತನನ್ನು ಈಗಲೂ ಪ್ರೀತಿಸುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೇ ನಾವು ಮೂವರು ಜೊತೆಯಾಗಿಯೇ ಬದುಕುವ ಎಂದು ಆಕೆಯ ಮುಂದೆಯೇ ತನ್ನ ಪ್ರೇಮ ಪ್ರಸ್ತಾಪವನ್ನಿಟ್ಟಿದ್ದಾಳೆ. ಈ ವೇಳೆ ಮೊದಲಿಗೆ ಒಪ್ಪದ ಯುವಕನ ಪತ್ನಿ ನಂತರ ಆಕೆಯ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾಳೆ. ನಂತರ ಆಕೆಯೇ ಮುಂದೆ ನಿಂತು ಗಂಡನಿಗೂ ಆತನ ಮೊದಲ ಪ್ರೇಮಿಗೂ ಮದುವೆ ಮಾಡಿಸಿದ್ದಾಳೆ. ಒಟ್ಟಾರೆ ಈ ಸ್ಟೋರಿಯೆ ರೋಚಕವಾಗಿದ್ದು, ಆತನ ಮೊದಲ ಪತಿಯ ವಿಶಾಲವಾದ ಹೃದಯ ಇತರ ಗಂಡಸರ ಮನಸ್ಸನ್ನು ಕಲ್ಲಾಗಿಸಿದೆ ಅನ್ನಬೇಕಷ್ಟೆ ….

Ad Widget

Ad Widget

Ad Widget
error: Content is protected !!
Scroll to Top
%d bloggers like this: