Phonepe ಕಂಪನಿಯ ಪ್ರಧಾನ ಕಚೇರಿ ಕರ್ನಾಟಕದಲ್ಲಿ !!!

ಆನ್ಲೈನ್ ನಲ್ಲಿ ಪೇಮೆಂಟ್ ಮಾಡಬೇಕು ಎಂದ ತಕ್ಷಣ ನೆನಪಾಗುವುದು ಗೂಗಲ್ ಪೇ ಹಾಗೂ ಫೋನ್ ಪೇ ಎಂಬ ಫ್ಲ್ಯಾಟ್ ಫಾರಂಗಳು. ಜನರಿಗೆ ಮನೆಯಲ್ಲೇ ಕುಳಿತು ಕ್ಷಣ ಮಾತ್ರದಲ್ಲೇ ಪಾವತಿಸಲು ನೆರವಾಗುತ್ತಿದ್ದು, ಹೆಚ್ಚು ಅಲೆದಾಡುವುದನ್ನು ತಪ್ಪಿಸಿ ಗ್ರಾಹಕನಿಗೆ ನೆರವಾಗಿದೆ ಎಂದರೂ ತಪ್ಪಾಗದು.

ಆನ್ಲೈನ್ ಪಾವತಿಯಲ್ಲಿ ತನ್ನದೇ ಟ್ರೆಂಡ್ ಹೊಂದಿರುವ ಫೋನ್ ಪೇ ಕಂಪನಿಯ ಆಡಳಿತ ಮಂಡಳಿಯು ಕಂಪನಿಯ ಮುಖ್ಯ ಕಚೇರಿಯನ್ನು ಮುಂಬೈನಿಂದ ಕರ್ನಾಟಕಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದು, ಜಾಹೀರಾತಿನ ಮೂಲಕ ತನ್ನ ಮುಂಬೈ ಕಚೇರಿಯನ್ನು ಕರ್ನಾಟಕಕ್ಕೆ ಸ್ಥಳಾಂತರಿಸುವ ಬಗ್ಗೆ ಪ್ರಕಟಿಸಿದೆ.

2013 ರ ಸೆಕ್ಷನ್ 13 ರ ಕಂಪನಿ ಕಾಯಿದೆ ಅಡಿಯಲ್ಲಿ, ಫೋನ್ ಪೇ , ಕಂಪನಿಯು ತನ್ನ ನೋಂದಾಯಿತ ಕಚೇರಿಯನ್ನು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸ್ಥಳಾಂತರಿಸಲು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ. ಕಂಪನಿಯ ಮೆಮೊರಾಂಡಮ್ ಆಫ್ ಅಸೋಸಿಯೇಷನ್‌ನಲ್ಲಿ ತಿದ್ದುಪಡಿಯನ್ನು ಅನುಮೋದಿಸಲು 16 ಆಗಸ್ಟ್ 2022 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಸಂಸ್ಥೆಯ ಕಚೇರಿಯನ್ನು ಕರ್ನಾಟಕ ರಾಜ್ಯಕ್ಕೆ ಸ್ಥಳಾಂತರಿಸುವ ವಿಷಯ ಪ್ರಸ್ತಾಪಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.

Leave A Reply