Vehicle Rules : HSRP ಗಿಂತೂ ಬಹು ಮುಖ್ಯ ಈ ಒಂದು ದಾಖಲೆ – ಇಲ್ಲದಿದ್ರೆ ವಾಹನ ಸೀಜ್ !!

Vehicle Rules : ಸಾರಿಗೆ ಇಲಾಖೆಯು HRSP ನಂಬರ್ ಪ್ಲೇಟ್ ಅಳವಡಿಕೆ ಮಾಡಲು ದಿನಾಂಕ ನಿಗದಿ ಮಾಡಿದೆ. ಇದು ವಾಹನಗಳಿಗೆ ಮುಂದೆ ಮುಖ್ಯವಾದ ದಾಖಲೆಯಾಗಲಿದೆ. ಆದರೆ ಸದ್ಯ ವಾಹನಗಳಿಗೆ ಇದಕ್ಕಿಂತಲೂ ಮುಖ್ಯವಾದ ದಾಖಲೆಯೊಂದಿದೆ. ಇದು ಏನಾದರೂ ನಿಮ್ಮೊಂದಿಗೆ ಇರದೇ ಇದ್ದರೆ ಭಾರೀ ಸಮಸ್ಯೆ ಉಂಟಾಗತ್ತದೆ.

ಇದನ್ನೂ ಓದಿ: Kerala: ಫೋನಲ್ಲಿ ಮಾತಾಡುತ್ತಾ ಕಣಗಿಲೆ ಹೂ ತಿಂದು ಯುವತಿ ಸಾವು !!

ಟ್ರಾಫಿಕ್ ಕಾನೂನುಗಳು (Traffic Rules) ಮತ್ತು ನಿಬಂಧನೆಗಳನ್ನು ತೀವ್ರ ಗೊಳಿಸಿದ್ದು ವಾಹನ ಸವಾರರ ಮೇಲೆ ಟ್ರಾಫಿಕ್ ಪೊಲೀಸರು ಕಣ್ಣಿಟ್ಟಿದ್ದಾರೆ. ಹೀಗಾಗಿ ನೀವು ನಿಮ್ಮ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಹೊಂದಿರಬೇಕು. ಇಲ್ಲದಿದ್ದರೆ ಇನ್ನು ಮುಂದೆ ಪೆಟ್ರೋಲ್ ಬಂಕ್ ಗಳಲ್ಲಿ ಸ್ವಯಂ ಚಾಲಿತ ಫೈನ್ ಹಾಕಲಾಗುತ್ತದೆಯಂತೆ !!

ಇದನ್ನೂ ಓದಿ: Mysore: ಸಂತ್ರಸ್ತೆ ಹುಣಸೂರಿನ ತೋಟದ ಮನೆಯಲ್ಲಿ ಸಿಕ್ಕಿದ್ದು ಎಂದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ: ಸಾ.ರಾ.ಮಹೇಶ್

ಹೌದು, ಒಂದು ವೇಳೆ ಮಾಲಿನ್ಯ ಪ್ರಮಾಣಪತ್ರವಿಲ್ಲದೆ (Pollution Certificate) ವಾಹನ ಚಲಾಯಿಸಿದರೆ 10,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ನಕಲಿ ಮಾಲಿನ್ಯ ಪ್ರಮಾಣ ಪತ್ರ (Fake Pollution Certificate) ಬಳಕೆ ಮಾಡಿಕೊಂಡಲ್ಲಿ 10,000 ರೂ. ದಂಡ ಬೀಳುತ್ತದೆ.

ದೆಹಲಿ ಸರ್ಕಾರದಿಂದ ಖಡಕ್ ಆದೇಶ:

ಎಲ್ಲಾ ವಾಹನ ಸವಾರರು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರಗಳನ್ನು (ಪಿಯುಸಿ) ಹೊಂದಿರುವುದನ್ನು ದೆಹಲಿ ಸರ್ಕಾರವು ಕಡ್ಡಾಯಗೊಳಿಸಿದೆ. ತಮ್ಮ ವಾಹನಗಳಿಗೆ ಪಿಯುಸಿ ಹೊಂದಿರದ ವಾಹನ ಸವಾರರಿಗೆ ರೂ. 10,000 ದಂಡ ವಿಧಿಸಲಾಗುವುದು ಎಂದು ದೆಹಲಿ ಸರ್ಕಾರವು ತಿಳಿಸಿದೆ. ಅಲ್ಲದೆ ಈ ನಿಯಮ ಉಲ್ಲಂಘಿಸುವವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ದೆಹಲಿ ರಾಜ್ಯ ಸಾರಿಗೆ ಇಲಾಖೆಯು ಎಚ್ಚರಿಕೆ ನೀಡಿದೆ.

Leave A Reply

Your email address will not be published.