ಮೋದಿ ಹುಟ್ಟಿದ ಹಬ್ಬದಂದು ವಿಶೇಷತೆಗಳ ಮಹಾಪೂರ | ಈ ವಿಶೇಷ ‘ ಥಾಲಿ’ 40 ನಿಮಿಷದಲ್ಲಿ ತಿಂದರೆ ದೊರಕಲಿದೆ 8.5 ಲಕ್ಷ

ದೇಶದ ಭವ್ಯ ನಾಯಕ,ಅಭಿಮಾನಿಗಳ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯ ಸೆಪ್ಟೆಂಬರ್ 17ರಂದು ಜನ್ಮದಿನವಾಗಿದ್ದು, ವಿಶ್ವದಾದಂತ್ಯ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಹಲವೆಡೆ ಒಂದಿಲ್ಲೊಂದು ವಿಶೇಷತೆಗಳು ನಡೆಯುತ್ತಲೇ ಇವೆ. ಇದೀಗ ದೆಹಲಿಯ ಹೊಟೇಲೊಂದು ಆಹಾರ ಪ್ರಿಯರಿಗೆ ಮೋದಿ ಹುಟ್ಟು ಹಬ್ಬಕ್ಕೆ ವಿಶೇಷ ಚಾಲೆಂಜ್ ಅನ್ನು ನೀಡಿದೆ. 40 ನಿಮಿಷದ ಒಳಗೆ ವಿವಿಧ ರುಚಿಯ 56 ಬಗೆಗೆಳಿರುವ ವಿಶೇಷ ‘ಥಾಲಿ’ಯನ್ನು ತಿಂದು ಮುಗಿಸಿದರೆ ಬರೋಬ್ಬರಿ 8.5 ಲಕ್ಷ ರೂಪಾಯಿ ಬಹುಮಾನ ನೀಡಲಿದೆ.

ದೆಹಲಿಯ ಕನ್ನಾಟ್ ಪ್ರದೇಶದಲ್ಲಿರುವ ARDOR 2.0 ರೆಸ್ಟೋರೆಂಟ್ ಈ ಆಫರ್ ಅನ್ನು ಗ್ರಾಹಕರಿಗೆ ನೀಡಿ ವಿಶಿಷ್ಟ ರೀತಿಯಲ್ಲಿ ಜನಮನ ಸೆಳೆಯುವ ಕಾರ್ಯಕ್ಕೆ ಮುಂದಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಮೋದಿಯ ಅಪ್ಪಟ ಅಭಿಮಾನಿಯಾಗಿರುವ ರೆಸ್ಟೋರೆಂಟ್​ನ್ ಮಾಲೀಕ ಸುಮಿತ್ ಕಲಾರ, ಪ್ರಧಾನಿಯವರ ಮೇಲೆ ಅಪಾರ ಗೌರವ ಹೊಂದಿರುವ ಸುಮಿತ್ ಮೋದಿಯವರ ಈ ಬಾರಿಯ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲು ಮೋದಿ ಹೆಸರಿನಲ್ಲಿ ವಿಶೇಷ ತಿನಿಸುಗಳ ಥಾಲಿ ಮಾಡಲು ತೀರ್ಮಾನಿಸಿದ್ದಾರೆ.
ಮೋದಿ ಜನ್ಮದಿನದ ಅಂಗವಾಗಿ ದೊಡ್ಡ ಗಾತ್ರದ 56 ಬಗೆಯ ವಿಶೇಷ ಥಾಲಿಯನ್ನು ಆಹಾರಪ್ರಿಯರಿಗೆ ಪರಿಚಯಿಸುತ್ತಿದ್ದು,ಈ ಥಾಲಿಗೆ ’56 inch ಮೋದಿ ಜಿ’ ಎಂದು ನಾಮಕರಣ ಮಾಡಿದ್ದಾರೆ.

ಈ ವಿಶೇಷ ಥಾಲಿಯನ್ನು ಮೋದಿಯವರಿಗೆ ಉಡುಗೊರೆಯಾಗಿ ನೀಡಲು ಸಾಧ್ಯವಾಗದೆ ಇರುವುದರಿಂದ ಗ್ರಾಹಕರಿಗೆ ಪರಿಚಯಿಸಲು ತೀರ್ಮಾನಿಸಿದ್ದಾರೆ. ಸೆ. 17 – ಸೆ. 26ರ ವರೆಗೆ ಮೋದಿ ಜನ್ಮದಿನಕ್ಕೆ ಸಿದ್ಧಪಡಿಸಿರುವ ವಿಶೇಷ ಥಾಲಿಯ ರುಚಿಯನ್ನು ಆಸ್ವಾದಿಸಬಹುದು. ಅಷ್ಟೆ ಅಲ್ಲದೆ ಅದೃಷ್ಟಶಾಲಿ ಗ್ರಾಹಕರಿಗೆ ಮೋದಿಯವರ ನೆಚ್ಚಿನ ತಾಣ ಕೇಧಾರನಾಥಕ್ಕೆ ತೆರಳುವ ಬಂಪರ್ ಅವಕಾಶ ಕೂಡ ಕಲ್ಪಿಸಲಾಗಿದೆ.

ಅಷ್ಟು ಮಾತ್ರವಲ್ಲದೇ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಹೊಸ ಘೋಷಣೆಯೊಂದನ್ನು ಮಾಡಿದೆ.

ಸೆ.17 ರಂದು ಹುಟ್ಟುವ ಮಕ್ಕಳಿಗೆ ಎರಡು ಗ್ರಾಂ ತೂಕದ ಚಿನ್ನದ ಉಂಗುರ ನೀಡಲಾಗುತ್ತದೆ. ಚೆನ್ನೈನ ಸರ್ಕಾರಿ ಆರ್‌ಎಸ್‌ಆರ್‌ಂ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಿಗೆ ಚಿನ್ನದ ಉಂಗುರ ನೀಡಲಾಗುತ್ತದೆ ಎಂದು ಮೀನುಗಾರಿಕೆ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಲ್. ಮುರುಗನ್ ಹೇಳಿದ್ದಾರೆ. ಸೆ.17ರಂದು ಈ ಆಸ್ಪತ್ರೆಯಲ್ಲಿ 10-15 ಮಕ್ಕಳು ಜನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

error: Content is protected !!
Scroll to Top
%d bloggers like this: