IOCL Recruitment 2022 | ಒಟ್ಟು ಹುದ್ದೆ-56, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-ಅ.10

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಇಂಜಿನಿಯರಿಂಗ್ ಸಹಾಯಕ ಮತ್ತು ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಐಒಸಿಎಲ್‌ನ ಪೈಪ್‌ಲೈನ್ ವಿಭಾಗದಲ್ಲಿ ಈ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


Ad Widget

Ad Widget

Ad Widget

Ad Widget
Ad Widget

Ad Widget

ಹುದ್ದೆಗಳ ವಿವರಗಳು:
ಒಟ್ಟು ಹುದ್ದೆಗಳ ಸಂಖ್ಯೆ- 56


Ad Widget

ಶೈಕ್ಷಣಿಕ ಅರ್ಹತೆ:
*ಇಂಜಿನಿಯರಿಂಗ್ ಸಹಾಯಕ (ಮೆಕ್ಯಾನಿಕಲ್): ಮೂರು ವರ್ಷಗಳ ಪೂರ್ಣ ಸಮಯದ ಡಿಪ್ಲೊಮಾ (ಅಥವಾ ಕನಿಷ್ಠ ಒಂದು ವರ್ಷದ ಅವಧಿಯ ITI ನಂತರ ಲ್ಯಾಟರಲ್ ಪ್ರವೇಶದ ಮೂಲಕ ಎರಡು ವರ್ಷಗಳು) ಪದವಿ ಹೊಂದಿರಬೇಕು. ಜೊತೆಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಥವಾ ಆಟೋಮೊಬೈಲ್ ಎಂಜಿನಿಯರಿಂಗ್​ನಲ್ಲಿ ಕನಿಷ್ಠ 55% ಹೊಂದಿರಬೇಕು.
*ಇಂಜಿನಿಯರಿಂಗ್ ಸಹಾಯಕ (ಎಲೆಕ್ಟ್ರಿಕ್)- ಅಭ್ಯರ್ಥಿಗಳು ಇಂಜಿನಿಯರಿಂಗ್ ಸಂಬಂಧಿತ ವಿಷಯದಲ್ಲಿ ಮೂರು ವರ್ಷಗಳ ಪೂರ್ಣ ಸಮಯದ ಡಿಪ್ಲೊಮಾ ಅಥವಾ ಐಟಿಐ ನಂತರ ಎರಡು ವರ್ಷಗಳ ಲ್ಯಾಟರಲ್ ಎಂಟ್ರಿ ಡಿಪ್ಲೋಮಾ ಮಾಡಿರಬೇಕು.

ವಯೋಮಿತಿ:
ಈ ಹುದ್ದೆಗಳಿಗೆ 18 ರಿಂದ 26 ವರ್ಷಗಳವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವೇತನ:
ಇಂಜಿನಿಯರಿಂಗ್ ಸಹಾಯಕ (ಮೆಕ್ಯಾನಿಕಲ್): — 25000 ರಿಂದ 105000 ರೂ.
ಇಂಜಿನಿಯರಿಂಗ್ ಸಹಾಯಕ (ಎಲೆಕ್ಟ್ರಿಕ್)- –23000 ರಿಂದ 78000 ರೂ.

ಅರ್ಜಿ ಶುಲ್ಕ:
*ಸಾಮಾನ್ಯ, OBC, EWS ಅಭ್ಯರ್ಥಿಗಳಿಗೆ – ರೂ. 100
*SC, ST ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ – ಯಾವುದೇ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ:
*ಲಿಖಿತ ಪರೀಕ್ಷೆ
ಕೌಶಲ್ಯ / ಪ್ರಾವೀಣ್ಯತೆ / ದೈಹಿಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 10, 2022
ಪರೀಕ್ಷೆಯ ದಿನಾಂಕ – ನವೆಂಬರ್ 6, 2022

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂಡಿಯನ್​ ಆಯಿಲ್ ಕಾರ್ಪೊರೇಷನ್​ನ ಅಧಿಕೃತ ವೆಬ್‌ಸೈಟ್ iocl.com ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

error: Content is protected !!
Scroll to Top
%d bloggers like this: