Sandalwood Me too : ಚಂದನವನದಲ್ಲಿ “ಮೀ ಟೂ” ಇನ್ನೂ ಜೀವಂತ | ನಟಿ ಆಶಿತಾ ಗಂಭೀರ ಆರೋಪ

ಸಿನಿಜಗತ್ತಿನಲ್ಲಿ ಭಾರೀ ಸೌಂಡ್ ಮಾಡುತ್ತಿದ್ದ ವಿಷಯವೆಂದರೆ ಅದುವೇ ” ಮೀ ಟೂ”. ಸ್ವಲ್ಪ ಮಟ್ಟಿಗೆ ತಣ್ಣಗಿದ್ದ ಈ ಸುದ್ದಿ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸಿನಿಮಾ ಸೆಟ್ ನಲ್ಲಿ ಉತ್ತಮ ವಾತಾವರಣ ಇರಲಿಲ್ಲ ಎಂಬ ಹೊಸ ಬಾಂಬೊಂದನ್ನು ಹಾಕಿರುವ ಸ್ಯಾಂಡಲ್‌ವುಡ್ ನಟಿ ಆಶಿತಾ( Actress Ashita) ಮೀಟೂ ಆರೋಪ ಮಾಡಿದ್ದಾರೆ.


Ad Widget

Ad Widget

Ad Widget

Ad Widget
Ad Widget

Ad Widget

‘ಸಿನಿಮಾಗಳಲ್ಲಿ ನಟನೆಗೆ ಅವಕಾಶ ನೀಡಲು ನೀವು ಇದನ್ನು ಮಾಡಿದರೆ ಮಾತ್ರ ಅವಕಾಶ ಕೊಡ್ತೀವಿ. ಇದನ್ನು ಮಾಡಿದ್ರೆ ಮಾತ್ರ ಎಕ್ಸ್ಟ್ರಾ ಅಮೌಂಟ್ ಕೊಡ್ತೀವಿ ಅಂತ ಹೇಳ್ತಾ ಇದ್ದರು’ ಎಂದು ಆಶಿತಾ ಹೇಳಿಕೊಂಡಿದ್ದಾರೆ.
ಖಾಸಗಿ ಸಂದರ್ಶನದಲ್ಲಿ ನಿರ್ದೇಶ ರಘುರಾಮ್ ಅವರೊಂದಿಗೆ ಮಾತನಾಡುವಾಗ ನಟಿ ಆಶಿತಾ ಅವರು ಗಂಭೀರ ಆರೋಪ ಮಾಡಿದ್ದಾರೆ. ನಿರ್ದೇಶಕ ರಘುರಾಮ್ ಅಶಿತಾ ಸಂದರ್ಶನದ ವೇಳೆ ಸಿನಿಮಾದಿಂದ ದೂರ ಉಳಿಯಲು ಕಾರಣ ಕೇಳಿದ ಸಂದರ್ಭದಲ್ಲಿ ಅಶಿತಾ ಈ ಮೀಟೂ ಆರೋಪವನ್ನು ಮಾಡಿದ್ದಾರೆ. ಆಶಿತಾ ಹೇಳಿದ ಈ ಹೇಳಿಕೆ ಅನಂತರ ಸಾಕಷ್ಟು ಚರ್ಚೆಗೆ ಕಾರಣವಾಯಿತು.


Ad Widget

ತಾವು ಸಿನಿಮಾ ಇಂಡಸ್ಟ್ರಿಯಿಂದ ದೂರವಾಗಲು ಇದೇ ಕಾರಣವೆಂದು ನಟಿ ಹೇಳಿದ್ದಾರೆ. ಸ್ಯಾಂಡಲ್‌ವುಡ್‌ನ ಸಾಕಷ್ಟು ಸೆಟ್‌ನಲ್ಲಿ ಆರೋಗ್ಯಕರ ವಾತಾವರಣ ಇರಲಿಲ್ಲ. ತಮಗೂ ತೊಂದರೆಯಾಗಿದೆ ಎಂದು ಹೇಳಿದ್ದಾರೆ.

ಯಾವ ಸಿನಿಮಾ? ಯಾವ ನಿರ್ದೇಶಕರಿಂದ? ಯಾವ ನಟರಿಂದ? ತಮ್ಮೊಂದಿಗೆ ಮುಜುಗರ ತರುವಂತ ಘಟನೆ ನಡೆದಿದೆ ಎಂದು ಆಶಿತಾ ಹೇಳಿಲ್ಲ. ಆದರೆ ಆ ರೀತಿ ತಮಗೆ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. ಈ ಕಾರಣದಿಂದ ಅವರು ಸಿನಿಮಾದಿಂದ ದೂರ ಸರಿದಿರುವುದಾಗಿ ಹೇಳಿಕೊಂಡಿದ್ದಾರೆ.

ನಟಿ ಆಶಿತಾ ನೀಡಿರುವ ಹೇಳಿಕೆ ಕೊಂಚ ವೈರಲ್ ಆಗುತ್ತಿದ್ದಂತೆ ನಟಿ ಸ್ಪಷ್ಟನೆ ನೀಡಿ, ಕನ್ನಡ ಚಿತ್ರದಲ್ಲಿ ಮೀಟೂ ಇನ್ನೂ ಜೀವಂತವಾಗಿದೆ. ಆದರೆ ಖುದ್ದು ಅನುಭವವಾಗಿಲ್ಲ. ಆಗಿರೋದನ್ನು ನಾನು ನೋಡಿದ್ದೇನೆ. ನನಗೆ ಅದು ಓದುತ್ತಿದ್ದೆ ಹಾಗಾಗಿ ಎಷ್ಟೋ ಸಿನಿಮಾ ಅವಕಾಶ ಬಂದರೂ ನನಗೆ ಸಿನಿಮಾ ಮಾಡಲು ಆಗಲಿಲ್ಲ ಎಂದು ಹೇಳಿದ್ದಾರೆ. ನನಗೆ ಅದು ಆಗಿದೆ ಎಂದು ನಾನು ಹೇಳಿಲ್ಲ. ಆದರೆ ಇದಕ್ಕೆ ನೀನು ಒಪ್ಪಿಕೊಂಡರೆ ನಿಮಗೆ ಹೆಚ್ಚು ಸಂಬಳ ಎಂದು ನೇರವಾಗಿ ಕೇಳೋರು ಇದ್ದಾರೆ. ನನಗೂ ಕೇಳಿದ್ದಾರೆ. ಅದನ್ನು ನಾನು ನಿರಾಕರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಆಶಿತಾ ರೋಡ್ ರೋಮಿಯೋ, ಹಾರ್ಟ್ ಬೀಟ್, ತವರಿನ ಸಿರಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

error: Content is protected !!
Scroll to Top
%d bloggers like this: