ದುಬಾರಿ ಬೆಲೆಯ ಕಾರಿಗೆ ಬೆಂಕಿ ಇಟ್ಟ ಗಾರೆ ಕೆಲಸದವ! ; ಯಾಕಾಗಿ ಗೊತ್ತೇ?

ಒಂದು ಕಾರು ಖರೀದಿಸಬೇಕಾದರೆ ಅದಕ್ಕೆ ಪಡಬೇಕಾದ ಶ್ರಮ ಖರೀದಿದಾರನಿಗೆ ಮಾತ್ರ ತಿಳಿದಿರುತ್ತದೆ. ಅಂತದರಲ್ಲಿ ಇಲ್ಲೊಬ್ಬ ಗಾರೆ ಕೆಲಸದವ ದುಬಾರಿ ಬೆಲೆಯ ಮರ್ಸಿಡೆಸ್​ ಕಾರಿಗೆ ಬೆಂಕಿ ಇಟ್ಟಿದ್ದಾನೆ. ಅಷ್ಟಕ್ಕೂ ಈತನ ಈ ವರ್ತನೆಗೆ ಕಾರಣವೇನು? ಎಂಬುದನ್ನು ಮುಂದೆ ಓದಿ..

ಈ ಘಟನೆ ನೋಯ್ಡಾದ ಸೆಕ್ಟರ್​ 45ರಲ್ಲಿ ನಡೆದಿದ್ದು, ಮನೆ ಮಾಲೀಕ ಅಳವಡಿಸಿರುವ ಸಿಸಿಟಿವಿಯಲ್ಲಿ ಕಾರಿಗೆ ಬೆಂಕಿ ಇಡುವ ದೃಶ್ಯ ಸೆರೆಯಾಗಿದೆ. ಆರೋಪಿಯನ್ನು ರಣವೀರ್​ ಎಂದು ಗುರುತಿಸಲಾಗಿದ್ದು, ನೋಯ್ಡಾ ಪೊಲೀಸರು ಬುಧವಾರ (ಸೆ. 14) ಬಂಧಿಸಿದ್ದಾರೆ.

ಹೆಲ್ಮೆಟ್​ ಧರಿಸಿ ಬೈಕ್​ ಸಮೀಪ ನಿಂತಿದ್ದ ರಣವೀರ್​, ಆ ಪ್ರದೇಶದಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು, ಕಾರಿನ ಬಳಿಕ ತೆರೆಳಿ ಕಾರಿನ ಮುಂಭಾಗಕ್ಕೆ ಬೆಂಕಿ ಹಚ್ಚಿ, ಬೈಕ್​ ಏರಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗಾರೆ ಕೆಲಸದ ಮೇಸ್ತ್ರಿ ಹಾಗೂ ಟೈಲ್ಸ್​ ಪೂರೈಕೆದಾರನಾಗಿ ಕೆಲಸ ಮಾಡುತ್ತಿದ್ದ ರಣವೀರ್,​ ಕಾರು ಮಾಲೀಕನ ಮನೆಗೆ ಟೈಲ್ಸ್​ ತಂದು ಅಳವಡಿಸಿದ. ಆದರೆ, ಸ್ವಲ್ಪ ಹಣವನ್ನು ನೀಡಿದ್ದ ಮಾಲೀಕ 2 ಲಕ್ಷ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿದ್ದ. ಸಾಕಷ್ಟು ಬಾರಿ ಕೇಳಿದರು ಬಾಕಿ ಹಣ ಕೊಡದೇ ಸತಾಯಿಸಿದ್ದರಿಂದ ರೋಸಿ ಹೋದ ರಣವೀರ್​, ಮನೆ ಮಾಲೀಕನ 1 ಕೋಟಿ ಮೌಲ್ಯದ ಮರ್ಸಿಡೆಸ್​ ಕಾರಿಗೆ ಬೆಂಕಿಯಿಟ್ಟಿದ್ದಾಗಿ ಪೊಲೀಸರ ಬಳಿ ಹೇಳಿದ್ದಾರೆ.

ಆದರೆ, ಮನೆ ಮಾಲೀಕ ಹೇಳುವ ಪ್ರಕಾರ, ಈ ವಿವಾದ ಹೊಸದಲ್ಲ. 2019-2020ರಲ್ಲಿ ರಣವೀರ್​, ಮಾಲೀಕನ ಮನೆಯಲ್ಲಿ ತನ್ನ ಮುಂದಾಳತ್ವದಲ್ಲಿ ಕೆಲಸ ಮಾಡಿಸಿದ್ದ. ಎರಡು ವರ್ಷಗಳ ಹಿಂದೆ ಮತ್ತೊಬ್ಬ ಮೇಸ್ತ್ರಿಯನ್ನು ನೇಮಿಸಿದ್ದರಿಂದ ಅವರು ಕೋಪಗೊಂಡಿದ್ದಾರೆ ಎಂದು ಆರೋಪಿಸಿದೆ. ಕೋವಿಡ್-19 ಸಮಯದಲ್ಲಿ ರಣವೀರ್ ಅವರ ಮನೆಯಲ್ಲಿದ್ದ ವೇಳೆ ನಾವು ಇತರೆ ಕೆಲಸಗಳನ್ನು ಮಾಡಲು ಬೇರೆ ಕೆಲಸಗಾರರನ್ನು ನೇಮಿಸಿಕೊಂಡೆವು. ಇದು ರಣವೀರ್ ಕೋಪಕ್ಕೆ ಕಾರಣವಾಗಿ, ಆತ ಹೊಸ ಕೆಲಸಗಾರನಿಗೆ ಬೆದರಿಕೆ ಹಾಕಿದ್ದನು ಎಂದು ತಿಳಿಸಿದ್ದಾರೆ.

ಕಳೆದ 10-12 ವರ್ಷಗಳಿಂದ ರಣವೀರ್ ಅವರ ಬಗ್ಗೆ ನಮಗೆ ತಿಳಿದಿದಿದೆ. ಅವರು ನಮ್ಮ ಕುಟುಂಬದ ಸದಸ್ಯರಂತೆ ಇದ್ದರು. ಕರೊನಾ ಲಾಕ್‌ಡೌನ್ ಸಮಯದಲ್ಲಿ ಹೊಸ ಮನೆಗೆ ಹೋದಾಗ ನಾವು ಎಲ್ಲ ಬಾಕಿಗಳನ್ನು ಪಾವತಿಸಿದ್ದೇವೆ. ನಾವು ಯಾವಾಗಲೂ ಒಂದೇ ದಿನದಲ್ಲಿ ಪಾವತಿಗಳನ್ನು ಮಾಡಿ ವ್ಯವಹಾರ ಮುಗಿಸುತ್ತೇವೆ. ಇದೀಗ ರಣವೀರ್​ ಕೊಡುತ್ತಿರುವ ಹೇಳಿಕೆ ಹಾಸ್ಯಸ್ಪದವಾಗಿದೆ ಎಂದು ಕುಟುಂಬದ ಸದಸ್ಯರಲ್ಲೊಬ್ಬರಾದ ಆಯುಷ್ ಚೌಹಾಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Leave A Reply

Your email address will not be published.