ಏನೇ ಆದ್ರೂ ಫುಲ್ ಸ್ಟಡಿ ಈತ | ಹಾವಲ್ಲ ಇನ್ನೊಂದು ಬಂದ್ರೂ ನಾನು ಹೆದರಲ್ಲ ಅಂತಾನೆ ಇವನು

ಹಾವು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಭಯ ಇದ್ದೇ ಇರುತ್ತೆ. ಆದರೆ ಇಲ್ಲೊಬ್ಬ ಕುಡಿದ ಮತ್ತಿನಲ್ಲಿ ಹಾವನ್ನು ಹೇಗೆ ಆಟ ಆಡಿಸ್ತಿದ್ದಾನೆ ಗೊತ್ತಾ? ಈ ಫೋಟೋ ಫುಲ್ ವೈರಲ್ ಆಗಿದೆ.


ಇದು ಬೆಳಗಾವಿಯಲ್ಲಿ ನಡೆದ ಒಂದು ಘಟನೆಯಾಗಿದ್ದು, ನಾಲ್ಕು ಬಾರಿ ಹಾವು ಕಚ್ಚಿದ್ರೂ ವ್ಯಕ್ತಿ ಒಬ್ಬ ಆರಾಮವಾಗಿದ್ದಾನೆ. ಯಾವ ವೈದ್ಯರಿಗೂ ತೋರಿಸಿಲ್ಲ. ಮೈಯಲ್ಲಿ ವಿಷವು ಕೆಲಸ ಮಾಡಿಲ್ಲ. ಅದು ಹಾವು ಕಚ್ಚಿದಾಗ ಆತ ವಿಪರೀತ ಕುಡಿದಿದ್ದ ಅದೇ ಆಮೇಲೆ ಹಾವು ಕಚ್ಚಿದ್ರು ಕ್ಯಾರೆ ಮಾಡ್ಲಿಲ್ಲ. ಕೊನೆಗೂ ಹಾವನ್ನು ಹಿಡಿದೆ ಬಿಟ್ಟಬಿಡಿ.

ಈತನ ಹೆಸರು ಸುರೇಶ್ ಬಾಗಡೆ.
ನಡು ರಸ್ತೆಯಲ್ಲಿ ಗಲಾಟೆಗೆ ಪೊಲೀಸರೇ ಸುಸ್ತಾದರು. ಸುರೇಶ್ ಬಾಗಡೆ ಮಧ್ಯದ ಅಮಲಿನಲ್ಲಿಯೇ ಹಾವನ್ನ ಹಿಡಿದು ಪ್ರಾಣಾಪಯದಿಂದ ಪಾರಾಗಿದ್ದಾರೆ. ಯಾವುದೇ ಮುಂಜಾಗ್ರತಾ ಕ್ರಮ ಅನುಸರಿಸದೆ ಇರುವುದರಿಂದ ರಮೇಶ್ ಗೆ ಮುಖ, ಗಲ್ಲ,ತುಟಿಗೆ ಮತ್ತು ಕಾಲಿಗೆ ಸತತ 4 ಬಾರಿ ಹಾವು ಕಚ್ಚಿದೆ.

ಅದೃಷ್ಟವಶಾತ್ ರಮೇಶ್ ಗೆ ಯಾವುದೇ ಪರಿಣಾಮವಾಗಿಲ್ಲ. ಕಳೆದ 20 ವರ್ಷಗಳಿಂದ ಹಾವುಗಳನ್ನು ಹಿಡಿಯುತ್ತೇನೆ ಎಂದು ಹೇಳಿದ್ದಲ್ಲದೆ, ಬೆಳ್ಳುಳ್ಳಿ ಹಾಗೂ ನೀರನ್ನು ಸೇವಿಸುತ್ತೇನೆ. ಇದರಿಂದ ನನಗೆ ಹಾವು ಕಚ್ಚಿದರೂ ಏನು ಆಗುವುದಿಲ್ಲವೆಂದು ತಿಳಿಸಿದ್ದಾರೆ. ಇವರ ಧೈರ್ಯವನ್ನು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ ಅರಣ್ಯ ಇಲಾಖೆ ವತಿಯಿಂದ ರಮೇಶ್ ಗೆ ಪುರಸ್ಕಾರ ನೀಡಬೇಕೆಂದು ಕೋರಿದ್ದಾರೆ.
ಇದನ್ನು ಹುಚ್ಚು ಎನ್ನಬೇಕು ಅಥವಾ ಧೈರ್ಯ ಎನ್ನಬೇಕು ಒಂದು ತಿಳಿಯುವುದಿಲ್ಲ. ನೀವು ಇಂತಹವುಗಳನ್ನು ದಯವಿಟ್ಟು ಟ್ರೈ ಮಾಡಲೇಬೇಡಿ.

Leave A Reply

Your email address will not be published.