ರೂಪೇಶ್ ಶೆಟ್ಟಿ – ಸಾನ್ಯಾ ಮಧ್ಯೆ ಹೆಚ್ಚಿದೆ ಮನಸ್ತಾಪ | ಆಟದಿಂದ ವಿಚಲಿತರಾಗುತ್ತಿದ್ದಾರಾ ಕುಡ್ಲದ ನಟ!!!

ಬಿಗ್ ಬಾಸ್ ಕೊನೆಯ ಹಂತದಲ್ಲಿದೆ. ಹಾಗೂ ಈ ಶೋನಲ್ಲಿ ರೂಪೇಶ್ ಶೆಟ್ಟಿ (Roopesh Shetty) ಹಾಗೂ
ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಅಲ್ಲದೇ ಶೋ ಕೊನೆಯ ಹಂತಕ್ಕೆ ಬಂದಿದ್ದು, ಇಬ್ಬರೂ ಸಾಕಷ್ಟು ಸಮಯವನ್ನು ಒಟ್ಟಾಗಿ ಕಳೆಯುತ್ತಿದ್ದಾರೆ. ಆರಂಭದಿಂದಲೂ ಇವರ ಮಧ್ಯೆ ಒಳ್ಳೆಯ ಕನೆಕ್ಷನ್ ಬೆಳೆದಿದೆ. ಇಬ್ಬರೂ ಕ್ಲೋಸ್ ಆಗಿದ್ದಾರೆ. ಆದರೆ, ಕೊನೆಯ ವಾರ ಸಮೀಪಿಸುತ್ತಿದ್ದಂತೆ ಇವರ ಮಧ್ಯೆ ಮನಸ್ತಾಪ ಹೆಚ್ಚಾಗಿದೆ ಎಂದೇ ಹೇಳಬಹುದು. ಒಂದು ಹಂತದಲ್ಲಿ ಇವರಿಬ್ಬರ ಮಧ್ಯೆ ನಡೆತಿರುವುದಾದರೂ ಏನು ಎಂಬ ಗುಮಾನಿ ನಿಜಕ್ಕೂ ಮೂಡದೇ ಇರದು. ಇವರಿಬ್ಬರ ಮಧ್ಯೆ ಪದೇಪದೇ ಜಗಳ ಆಗುತ್ತಿದೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ. ಇದು ಸಾನ್ಯಾ-ರೂಪೇಶ್ ಪರ್ಫಾರ್ಮೆನ್ಸ್ ಮೇಲೆ ನೇರ ಪರಿಣಾಮ ಬೀರುವ ಸೂಚನೆ ಸಿಕ್ಕಿದೆ.

ಸಾನ್ಯಾಗೆ ಕಿರುತೆರೆ ಹಿನ್ನೆಲೆ ಇದೆ. ರೂಪೇಶ್ ತುಳು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದವರು. ಆರ್‌ಜೆ ಆಗಿಯೂ ಅವರು ಕೆಲಸ ಮಾಡುತ್ತಿದ್ದರು. ಇಬ್ಬರೂ ಕೆಲಸ ಮಾಡುವ ಇಂಡಸ್ಟ್ರಿಗೆ ಸಾಮ್ಯತೆ ಇದ್ದಿದ್ದರಿಂದ ಹಾಗೂ ಆಲೋಚನೆಗಳು ಹೊಂದಾಣಿಕೆ ಆದ ಕಾರಣ ಇಬ್ಬರ ಮಧ್ಯೆ ಬಾಂಧವ್ಯ ಬೆಳೆಯುವುದು ಸಾಮಾನ್ಯ.

ಸೋಮಣ್ಣ ಮಾಚಿಮಾಡ ಅವರು ಅನೇಕ ಬಾರಿ ರೂಪೇಶ್ ಹಾಗೂ ಸಾನ್ಯಾ ಜತೆ ಇವರಿಬ್ಬರ ಕ್ಲೋಸ್ ನೆಸ್ ಬಗ್ಗೆ ಜಗಳ ಮಾಡಿದ್ದರು. ನಮ್ಮ ಮಧ್ಯೆ ಇರೋದು ಕೇವಲ ಫ್ರೆಂಡ್‌ಶಿಪ್ ಎಂದು ಹೇಳಿಕೊಳ್ಳುತ್ತಾ ಬರುತ್ತಿದ್ದಾರೆ. ಆದರೆ, ಇತ್ತೀಚೆಗೆ ರೂಪೇಶ್ ಬೇರೆಯದೇ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ರೂಪೇಶ್ ಆಟಕ್ಕಿಂತ ಜಾಸ್ತಿ ಸಾನ್ಯಾ ಮೇಲೆ ಇಂಟರೆಸ್ಟ್ ತೋರಿಸ್ತಾ ಇದ್ದಾರೆ ಎಂದನಿಸುತ್ತದೆ. ಯಾಕೆಂದರೆ ಸಾನ್ಯಾಳ ಸಣ್ಣ ಸಣ್ಣ ವಿಚಾರಕ್ಕೆ ಜತೆ ಜಗಳ ಆಡುತ್ತಿದ್ದಾರೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ.

‘ಇನ್ಮುಂದೆ ನಾನು ನಿನ್ನ ಜತೆ ಮಾತನಾಡಲ್ಲ’ ಎಂದು ರೂಪೇಶ್ ಹೇಳಿದರು. ಇದನ್ನು ಕೇಳಿ ಸಾನ್ಯಾ ಬೇಸರ ಹೊರಹಾಕಿದ್ದಾರೆ. ಇಬ್ಬರ ನಡುವೆ ಮನಸ್ತಾಪ ಮುಂದುವರಿದೇ ಇದೆ. ಒಂದು ಹಂತದಲ್ಲಿ ‘ನೀನು ಉದಯ್ ರೀತಿಯ ಆಡ್ತಾ ಇದ್ದೀಯಾ’ ಎಂದು ರೂಪೇಶ್‌ಗೆ ಸಾನ್ಯಾ ಹೇಳಿದರು. ಇದನ್ನು ಕೇಳಿ ರೂಪೇಶ್ ಮತ್ತೆ ಸಿಟ್ಟಾದರು. ನನಗೆ ಹೋಲಿಕೆ ಮಾಡಬೇಡ. ಸಿಟ್ಟು ಬಂದಿದೆ ಎಂದು ಅವನಿಗೆಲ್ಲ ನನ್ನನ್ನು ಹೋಲಿಕೆ ಮಾಡಿದರೆ? ಇದು ನಿಜಕ್ಕೂ ಬೇಸರ ಮೂಡಿಸಿತು’ ಎಂದು ರೂಪೇಶ್ ಬೇಸರ ಹೊರಹಾಕಿದ್ದಾರೆ.

ಏನೇ ಆಗಲಿ ಬಿಗ್ ಬಾಸ್ ಒಟಿಟಿ ಮುಗಿತಾ ಬಂತು. ಇನ್ನೇನಿದ್ದರೂ ಟಿವಿ ಮೇಲೆ ಮಾತ್ರ ಬಿಗ್ ಬಾಸ್ ಕಾಣೋಕೆ ಸಿಗುತ್ತೆ. ಇಲ್ಲಿ ಕೇವಲ ನಾಲ್ಕು ಮಂದಿಗೆ ಮಾತ್ರ ಟಿವಿಗೆ ಹೋಗಲು ಅವಕಾಶ ನೀಡಲಾಗಿದೆ.

Leave A Reply

Your email address will not be published.