WhatsApp ಬಳಕೆದಾರರಿಗೆ ಬಿಗ್ ಶಾಕ್ : ಇನ್ಮುಂದೆ ಆನ್ಲೈನ್ ಕರೆ ಮಾಡಲು ನೀವು ಹಣ ತೆರಬೇಕು !

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ದಿನಚರಿ ಮೊಬೈಲ್ ನಿಂದಲೆ ಆರಂಭವಾಗುತ್ತಿದೆ. ಮೊಬೈಲ್ ಬಳಕೆ ಮಾಡದ ಜನರೇ ಇರಲಿಕ್ಕಿಲ್ಲ ಎಂದರೂ ತಪ್ಪಾಗದು. ಲ್ಯಾಂಡ್ ಲೈನ್ ಫೋನ್ ಗಳಿಗೆ ಗುಡ್ ಬೈ ಹೇಳಿ, ಟಚ್ ಸ್ಕ್ರೀನ್ ಇರುವ ಮೊಬೈಲ್ ಗಳೆ ಎಲ್ಲೆಡೆ ರಾರಾಜಿಸುತ್ತಿವೆ. ಅದರಲ್ಲಿಯೂ ದಿನದಿಂದ ದಿನಕ್ಕೆ ಬದಲಾಗುತ್ತಿರುವ ಲೇಟೆಸ್ಟ್ ವರ್ಷನ್ ಗಳ ನಡುವೆ ಬೇಸಿಕ್ ಸೆಟ್ ಮನೆಯ ಮೂಲೆಯಲ್ಲಿ ಜಾಗ ಪಡೆದುಕೊಂಡಿವೆ.

ಅರೆಕ್ಷಣವೂ ಬಿಟ್ಟಿರಲಾಗದಷ್ಟು, ಮೊಬೈಲ್ ಎಂಬ ಸಾಧನಕ್ಕೆ ನಾವು ಒಗ್ಗಿ ಹೋಗಿದ್ದೇವೆ. ಸಾಲದ್ದಕ್ಕೆ ಎಲ್ಲಾದರೂ ಬಿಟ್ಟರೂ ಏನೋ ಕಳೆದುಕೊಂಡ ಭಾವ ಕಾಡುವುದಂತು ಕಟು ಸತ್ಯ. ಮಾರು ದೂರದಲ್ಲಿರುವ ನಮ್ಮ ಆತ್ಮೀಯರು, ಸಂಬಂಧಿಕರನ್ನು ಸಂಪರ್ಕಿಸಲು ಮೊಬೈಲಿನ ಬಳಕೆ ಅವಶ್ಯಕವಾಗಿದೆ. ಅದರಲ್ಲೂ ವಾಟ್ಸಪ್ ಅತಿ ಹೆಚ್ಚು ಬಳಕೆಯಾಗುವ ಅಪ್ಲಿಕೇಶನ್ ಆಗಿದ್ದು ವಿಡಿಯೋ ಕಾಲ್, ಆಡಿಯೋ ರೆಕಾರ್ಡ್ ಮೊದಲಾದ ಫೀಚರ್ ಗೆ ಜನಮನದಲ್ಲಿ ತನ್ನದೇ ಟ್ರೇಡ್ ಮಾರ್ಕ್ ರೂಪಿಸಿಕೊಂಡಿದೆ.

ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹೆಚ್ಚು ಬಳಸಲಾಗುವ ಮತ್ತು ಜನಪ್ರಿಯವಾದ ಸಂದೇಶ ಅಪ್ಲಿಕೇಶನ್ ಆಗಿದೆ. ಫೇಸ್‌ಬುಕ್, ವಾಟ್ಸಪ್ ಮಾಲೀಕತ್ವ ಹೊಂದಿರುವ ಕಂಪನಿ ಆಪ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಲೇ ಇದೆ. ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್‌ ಒಂದು ನೀಡಲಾಗಿದೆ. ಹೌದು, ಉಚಿತ ಕರೆಗೆ ಶೀಘ್ರದಲ್ಲೇ ಶುಲ್ಕ ವಿಧಿಸಲಾಗುವುದು ಎಂದು ವರದಿಯಾಗಿದೆ.

ಸಂಪೂರ್ಣ ಉಚಿತ ಕರೆಗಳಿಗೆ ಅವಕಾಶ ನೀಡಿದ್ದ ವಾಟ್ಸಪ್, ಇನ್ಸ್ಟಾ ಗ್ರಾಮ್, ಫೇಸ್ಬುಕ್ ಇತರ ಅಪ್ಲಿಕೇಶನ್‌ಗಳು TRAI ನ ಪ್ರಸ್ತಾಪ ಜಾರಿಯಾದರೆ, ದಿಂದ ಕರೆಗಳಿಗೆ ಶುಲ್ಕ ವಿಧಿಸುವ ಸಾಧ್ಯತೆ ಹೆಚ್ಚಿದೆ.
TRAI ಆರಂಭದಲ್ಲಿ 2008ರಲ್ಲಿ ಈ ಪ್ರಸ್ತಾಪ ಮುಂದಿ ಟ್ಟಿದ್ದರು ಕೂಡ DoT ಇತ್ತಿಚೆಗೆ ಪ್ರಸ್ತಾವನೆಗೆ ಪ್ರತಿಕ್ರಿಯೆ ನೀಡಿದೆ. ಸರಿಯಾದ ಸಂದರ್ಭದಲ್ಲಿ ಅಳವಡಿಸಲು ಸಮಯಾವಕಾಶಕ್ಕೆ TRAI ಗೆ ಮನವಿ ಮಾಡಿದೆ.

ಹೊಸ ತಂತ್ರಜ್ಞಾನಗಳ ಹೊರಹೊಮ್ಮುವಿಕೆಯೊಂದಿಗೆ ತಾಂತ್ರಿಕ ಪರಿಸರದಲ್ಲಿನ ಬದಲಾವಣೆಯಾಗುತ್ತಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಈ ಬದಲಾವಣೆಗೆ ನಾಂದಿ ಹಾಡಲು ಚಿಂತನೆಗಳು ನಡೆಯುತ್ತಿವೆ. ಇಂಟರ್ನೆಟ್ ಟೆಲಿಫೋನ್ ಆಪರೇಟರ್‌ಗಳು ಮತ್ತು OTT ಪ್ಲೇಯರ್‌ಗಳನ್ನು ಸಹ ಗಮನದಲ್ಲಿರಿಸಿ ಹೊಸ ನಿಯಮಗಳಲ್ಲಿ ಬದಲಾವಣೆ ತರಲು ಮನವಿ ಮಾಡಲಾಗಿದೆ.

TRAI 2008ರಲ್ಲಿ ಮೂಲ ಶಿಫಾರಸನ್ನು ಮಾಡಿದೆ. ಸಾಮಾನ್ಯ ಟೆಲಿಫೋನ್ ನೆಟ್‌ವರ್ಕ್ ಮೂಲಕ ಇಂಟರ್ನೆಟ್ ಕರೆಗಳನ್ನ ಒದಗಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ (ISP) ಅನುಮತಿ ನೀಡಬಹುದು ಆದರೂ ಕೂಡ ಅಂತರ್ಸಂಪರ್ಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಮಾನ್ಯ ಪ್ರತಿಬಂಧಕ ಉಪಕರಣಗಳನ್ನು ಸ್ಥಾಪಿಸಿ, ಬಹು ಭದ್ರತಾ ಏಜೆನ್ಸಿಗಳೊಂದಿಗೆ ಅನುಸರಿಸಬೇಕಾಗುತ್ತದೆ.2008ರ ಬಳಿಕ 2016-17ರಲ್ಲಿ ನೆಟ್ ನ್ಯೂಟ್ರಾಲಿಟಿ ತೆರೆಮರೆಯಲ್ಲಿದ್ದ ವಿಚಾರ ಮತ್ತೊಮ್ಮೆ ಪ್ರಸ್ತಾಪವಾಗಿದೆ. ಹಾಗಾಗಿ, DoT ಈಗ ಪ್ರಸ್ತಾವನೆಯನ್ನು ಪರಿಗಣಿಸುತ್ತಿದೆ.
ಟೆಲಿಕಾಂ ಆಪರೇಟರ್‌ಗಳು ಎಲ್ಲಾ ಇಂಟರ್ನೆಟ್ ಆಧಾರಿತ ಕರೆ ಮತ್ತು ಸಂದೇಶ ಸೇವೆಗಳಿಗೆ ಏಕರೂಪದ ಕಾನೂನನ್ನ ದೀರ್ಘಕಾಲದವರೆಗೆ ಒತ್ತಾಯಿಸುತ್ತಿದ್ದು, ಜೊತೆಗೆ ಟೆಲಿಕಾಂ ಆಪರೇಟರ್‌ಗಳು ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಸಹಕಾರಿಯಾಗುವ ರೀತಿಯಲ್ಲಿ ಪರವಾನಗಿ ಶುಲ್ಕ,ಕಾನೂನು ನಿರ್ಬಂಧಗಳು, ಸೇವೆಯ ಗುಣಮಟ್ಟದ ನಿಯಂತ್ರಣ ಕ್ರಮಗಳನ್ನು ಅನುಸರಿಲು ಮನವಿ ಮಾಡಿದೆ.

TRAI ಈ ಕಾನೂನನ್ನು ಅಂಗೀಕರಿಸಿದರೆ, ಗೂಗಲ್ ಡ್ಯುವೋ, ವಾಟ್ಸಾಪ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮೆಸೆಂಜರ್, ಸಿಗ್ನಲ್, ಟೆಲಿಗ್ರಾಮ್ ಮತ್ತು ಎಲ್ಲಾ ರೀತಿಯ ಸೇವೆಗಳನ್ನು ಪಡೆಯುತ್ತಿರುವ ಬಳಕೆದಾರರು ಪಾವತಿಸಬೇಕಾಗುತ್ತದೆ. ಅತಿ ಹೆಚ್ಚು ಬಳಕೆಯಲ್ಲಿರುವ ವಾಟ್ಸಪ್ ಅಪ್ಲಿಕೇಶನ್ ನಲ್ಲಿ ಈ ರೀತಿಯ ಬದಲಾವಣೆ ಯಾದರೆ ಬಳಕೆದಾರರು ಹೆಚ್ಚುವರಿ ಶುಲ್ಕ ಪಾವತಿಸಿ ಕರೆಗಳನ್ನು ಮಾಡಬೇಕಾಗುತ್ತದೆ.

Leave A Reply

Your email address will not be published.