ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಸವಿ ನೆನಪುಗಳನ್ನು ಪೋಣಿಸುವ -ಕೂಡಿಡುವ ಸುಂದರ ಹಾಗೂ ಅತಿ ಮುಖ್ಯ ಘಟ್ಟ. ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿನಂತೆ ಇತ್ತೀಚಿನ ದಿನಗಳಲ್ಲಿ ಮದುವೆ ಎಂದರೆ ಸ್ವರ್ಗದ ಮಾದರಿಯಲ್ಲಿ ವೈಭೋಗಯುತವಾಗಿ ನಡೆಯುತ್ತಿರುವುದನ್ನು ಎಲ್ಲರೂ ಗಮನಿಸಿರಬಹುದು.
ಜೀವನದ ಬಗ್ಗೆ ಪ್ರತಿಯೊಬ್ಬರಿಗೂ ಅವರದೇ ಆದ ಆಸೆ – ಆಕಾಂಕ್ಷೆಗಳಿರುತ್ತವೆ. ಮದುವೆ ವಿಚಾರದಲ್ಲೂ ಕೂಡ ನಮ್ಮ ಸಂಗಾತಿಯ ಬಗ್ಗೆ, ವಿವಾಹ ಕಾರ್ಯಕ್ರಮ ನಡೆಯುವ ಸ್ಥಳದ ಬಗ್ಗೆ ವಿಶೇಷ ಆಸಕ್ತಿ ವಹಿಸುವುದು ಸಾಮಾನ್ಯ ಸಂಗತಿ.
ಪೋಷಕರಿಗೆ ಕ್ರಮ ಪ್ರಕಾರ ಮದುವೆ ನಡೆಯಬೇಕೆಂಬ ಹಂಬಲವಾದರೆ, ವಧು – ವರರಿಗೆ ತಮ್ಮಂತೆ ಕನಸಿನ ಪ್ರಪಂಚದಲ್ಲಿ ಸತಿ – ಪತಿಗಳಾಗುವ ಬಯಕೆ. ಇತ್ತೀಚಿನ ದಿನಗಳಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಟ್ರೆಂಡಿಂಗ್ ನಲ್ಲಿದ್ದು, ಸಿನಿಮಾ ತಾರೆಯರು, ದೊಡ್ಡ ದೊಡ್ಡ VIP ಗಳಿಗೆ ಮಾತ್ರ ಸೀಮಿತ ಎಂಬತ್ತಿದ್ದ ಡೆಸ್ಟಿನೇಷನ್ ವೆಡ್ಡಿಂಗ್ ಈಗ ಅಂತಸ್ಥಿನ ಭೇದವಿಲ್ಲದೆ ಎಲ್ಲರೂ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲಾನ್ ಮಾಡಿ ಮದುವೆಯಾಗುತ್ತಿದ್ದಾರೆ.
ಡೆಸ್ಟಿನೇಷನ್ ವೆಡ್ಡಿಂಗ್ ಎಂಬುದು ಇಷ್ಟಪಟ್ಟಿರುವ ಸ್ಥಳಕ್ಕೆ ತೆರಳಿ ಅಲ್ಲಿ ಮದುವೆಯಾಗುವುದು. ಅದು ನಮ್ಮ ಹತ್ತಿರದ ಪರಿಸರವಾಗಿರಲೂಬಹುದು ಇಲ್ಲವೇ ಬೇರೆ ರಾಜ್ಯ ಅಥವಾ ಬೇರೆ ದೇಶವಾಗಿದ್ದು ಒಟ್ಟಿನಲ್ಲಿ ನಾವು ಇಷ್ಟಪಟ್ಟಿರುವ ಪ್ರದೇಶಕ್ಕೆ ಹೋಗಿ ಮದುವೆ ಮಾಡಿಕೊಳ್ಳುವುದು. ನೆಚ್ಚಿನ ತಾಣದಲ್ಲಿ ಮದುವೆಯಾದಾಗ ಸಂತೋಷ ಇಮ್ಮಡಿಯಾಗಿ, ವಧು – ವರರ ಮನದಂಗಳದಲ್ಲಿ ನೆನಪಿನ ಬುತ್ತಿಯನ್ನು ಸದಾ ಹಸಿರಾಗಿರುವಂತೆ ಮಾಡುತ್ತದೆ.
ಸಾಮಾನ್ಯ ಮದುವೆಯಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುತ್ತಾರೆ, ಆದರೆ ಡೆಸ್ಟಿನೇಷನ್ ವೆಡ್ಡಿಂಗ್‌ನಲ್ಲಿ ತಮಗೆ ಹತ್ತಿರದ ಕೆಲವೇ ಕೆಲವು ಮಂದಿಯನ್ನು ಮಾತ್ರ ಆಹ್ವಾನಿಸುತ್ತಾರೆ. ಡೆಸ್ಟಿನೇಷನ್ ವೆಡ್ಡಿಂಗ್ ನಲ್ಲಿ ಮೊದಲನೆಯದು, ಥೀಮ್ ಬೇಸ್ ಮೇಲೆ ನಡೆಯುವ ಮದುವೆ. ಒಂದು ರಾಯಲ್ ಥೀಮ್ ಮತ್ತೊಂದು ಕಂಟೆಂಪ್ರರಿ ಥೀಮ್. ರಾಯಲ್ ಥೀಮ್‌ನಲ್ಲಿ ಮದುವೆಯ ಸಂಪೂರ್ಣ ಅಲಂಕಾರವನ್ನು ರಾಯಲ್ ಲುಕ್‌ನಲ್ಲಿ ಮಾಡಲಾಗುತ್ತದೆ. ವಧು ಮತ್ತು ವರನ ಉಡುಗೆ ಆಭರಣಗಳು ಸಹ ರಾಯಲ್ ವಿನ್ಯಾಸದವುಗಳಾಗಿವೆ. ಐಷಾರಾಮಿ ಅರಮನೆ, ದೊಡ್ಡ ಮಹಲಿನಲ್ಲಿ ವಿವಾಹವನ್ನು ಮಾಡಿದಾಗ, ಅದರ ಥೀಮ್ ರಾಯಲ್ ಆಗಿ ಇರಿಸಲಾಗುತ್ತದೆ. ರಾಯಲ್ ಥೀಮ್ ಆಧಾರಿತ ಡೆಸ್ಟಿನೇಶನ್ ವೆಡ್ಡಿಂಗ್‌ನಲ್ಲಿ ಮದುವೆಯ ಎಲ್ಲಾ ಸಂಪ್ರದಾಯಗಳು ರಾಯಲ್ ಶೈಲಿಯಲ್ಲಿ ಗ್ರಾಹಕರು ಬಯಸುತ್ತಾರೆ.
ಮತ್ತೊಂದೆಡೆ, ಕಂಟೆಂಪ್ರರಿ ಆಧಾರಿತ ಡೆಸ್ಟಿನೇಶನ್ ವೆಡ್ಡಿಂಗ್ ಹೆಚ್ಚು ಪಾಶ್ಚಾತ್ಯ ಸ್ಪರ್ಶವನ್ನು ಹೊಂದಿದ್ದು, ಇದನ್ನು ಸಾಕಷ್ಟು ಹೂವುಗಳೊಂದಿಗೆ ಅಲಂಕಾರಗಳೊಂದಿಗೆ ಮಾಡಲಾಗುತ್ತದೆ. ಡೆಸ್ಟಿನೇಶನ್ ವೆಡ್ಡಿಂಗ್ ಸಮುದ್ರತೀರದಲ್ಲಿ ಮದುವೆಯನ್ನು ಮಾಡಿದಾಗ, ಅದು ಕಂಟೆಂಪ್ರರಿ ಥೀಮ್ ಅನ್ನು ಆಧರಿಸಿರುತ್ತದೆ. ಸಮಕಾಲೀನ ಥೀಮ್ ವೆಡ್ಡಿಂಗ್ ಮದುವೆಯ ಸ್ಥಳವನ್ನು ಸಾಕಷ್ಟು ಹೂವುಗಳು ಮತ್ತು ಬಿಳಿ ಬಣ್ಣಗಳಿಂದ ಮಾಡಲಾಗುತ್ತದೆ. ಅನೇಕ ಮಂದಿ ಸೆಲೆಬ್ರಿಟಿಗಳು ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡಿರುವುದು ಎಲ್ಲರಿಗೂ ತಿಳಿದಿದೆ.
ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಳ್ಳುವ ಯೋಜನೆಯಲ್ಲಿ ದ್ದರೆ, ಬಜೆಟ್ ಪ್ರಕಾರ ಬುಕ್ ಮಾಡಿಕೊಳ್ಳುವುದು ಉತ್ತಮ. ಕೆಲವೊಮ್ಮೆ ದುಬಾರಿ ಹೋಟೆಲ್‌ಗಳನ್ನು ಕಾಯ್ದಿರಿಸುವುದರಿಂದ ಸಾಕಷ್ಟು ವೆಚ್ಚವಾಗುತ್ತದೆ. ಅಲ್ಲದೆ, ಅತಿಥಿಗಳ ಪಟ್ಟಿ, ಅವರು ತಂಗಲು ಪೂರಕ ವ್ಯವಸ್ಥೆ ಮಾಡಿಕೊಂಡು, ದಿನಾಂಕವನ್ನು ಅಂತಿಮಗೊಳಿಸದರೆ ಒಳ್ಳೆಯದು. ಅಲ್ಲದೆ ವಧು ಮತ್ತು ವರರಿಗೆ ಮುಂಚಿತವಾಗಿ ಕೊಠಡಿಯನ್ನು ಕಾಯ್ದಿರಿಸಿದ್ದರೆ ಮತ್ತೆ ತೊಂದರೆಯಾಗದು. ಮದುವೆಗೆ ಮುನ್ನ ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೇಕಾದ ವ್ಯವಸ್ಥೆ ಗಳಾಗಿವೆಯೆ ಎಂದು ಖಾತರಿ ಮಾಡಿಕೊಳ್ಳುವುದು ಉತ್ತಮ.
ಮದುವೆಯ ಮೊದಲ ಕೆಲ ದಿನಗಳು ಅಲ್ಲಿಯೇ ತಂಗಿದ್ದರೆ, ಸೌಲಭ್ಯದ ಜೊತೆ ಕೆಲಸಗಳನ್ನು ಶೀಘ್ರವಾಗಿ ನಡೆಸಲು ಸಹಕಾರಿಯಾಗುತ್ತದೆ.