ಧೂಳು ಎಬ್ಬಿಸ್ತಿದೆ ಬ್ರಹ್ಮಾಸ್ತ್ರ! | ಮೊದಲ ದಿನದ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಾ!

ಬಾಯ್ಕಾಟ್ ಅಭಿಯಾನದ ನಡುವೆಯೂ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಪಾರ್ಟ್ 1: ಶಿವ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಅದ್ಭುತ ಕಲೆಕ್ಷನ್ ಮಾಡಿದೆ.

ಹೌದು, ಚಿತ್ರ ಮೊದಲ ದಿನ ಜಗತ್ತಿನಾದ್ಯಂತ ಬರೋಬ್ಬರಿ 75 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಕರಣ್ ಜೋಹಾರ್ ಟ್ವೀಟ್ ಮಾಡಿದ್ದಾರೆ.

ಟ್ರೈಲಾಜಿಯಾಗಿ ಪ್ರಚಾರ ಮಾಡಲಾಗಿದ್ದು ಈ ದೊಡ್ಡ ಬಜೆಟ್ ಫ್ಯಾಂಟಸಿ ಮತ್ತು ಸಾಹಸ ಚಲನಚಿತ್ರದ ಮೊದಲ ಭಾಗದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಅಮಿತಾಬ್ ಬಚ್ಚನ್ ಅಭಿನಯಿಸಿದ್ದಾರೆ.

ಮಾಹಿತಿಯನ್ನು ಹಂಚಿಕೊಂಡ ಪ್ರೊಡಕ್ಷನ್ ಬ್ಯಾನರ್‌ಗಳಾದ ಸ್ಟಾರ್ ಸ್ಟುಡಿಯೋಸ್ ಮತ್ತು ಧರ್ಮ ಪ್ರೊಡಕ್ಷನ್ಸ್, “ಬ್ರಹ್ಮಾಸ್ತ್ರ ಭಾಗ 1: ಶಿವ” ಮೊದಲ ದಿನ ವಿಶ್ವಾದ್ಯಂತ 75 ಕೋಟಿ ಗಳಿಸಿದೆ. ಇದು ಚಿತ್ರರಂಗ, ಥಿಯೇಟರ್ ಮಾಲೀಕರು ಮತ್ತು ಪ್ರೇಕ್ಷಕರು ಸೇರಿದಂತೆ ದೇಶಾದ್ಯಂತ ಸಂಭ್ರಮವನ್ನು ಉಂಟುಮಾಡಿದೆ. ವಾರಾಂತ್ಯದಲ್ಲಿ ಒಟ್ಟು ಗಳಿಕೆಯು ದೊಡ್ಡದಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಟ್ವೀಟಿಸಿದೆ.


ಚಿತ್ರದ ಕಥೆ ಮತ್ತು ಸಂಭಾಷಣೆಗೆ ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದೂ ಪುರಾಣವನ್ನು ಫ್ಯಾಂಟಸಿ ಅಂಶಗಳೊಂದಿಗೆ ಬೆರೆಸುವ ನಿರ್ದೇಶಕ ಅಯನ್ ಮುಖರ್ಜಿ ಅವರ ದೃಷ್ಟಿಕೋನವನ್ನು ಹಲವರು ಶ್ಲಾಘಿಸಿದ್ದಾರೆ. ಈ ಚಿತ್ರ ಹಾಲಿವುಡ್ ಸೂಪರ್ ಹೀರೋ ಫಿಲ್ಮ್ ಫ್ರಾಂಚೈಸಿಯಂತಿದೆ.

Leave A Reply

Your email address will not be published.