ಸೀರೆಗೆ “ಬ್ಲೌಸ್” ಉಡಲು ಮರೆತ ಯುಟ್ಯೂಬರ್ | ‘ರವಿಕೆ’ ಖರೀದಿಗೆ ಹಣ ರಾವನಿಸಲು ರೆಡಿ ಎಂದ ನೆಟ್ಟಿಗರು

ದೆಹಲಿ ಮೂಲದ ಯೂಟ್ಯೂಬರ್ ಒಬ್ಬಳನ್ನು ಇತ್ತೀಚೆಗೆ ಅಂದರೆ ಭಾನುವಾರದಿಂದ ಭಾರೀ ಟ್ರೋಲ್ ಮಾಡಲಾಗಿತ್ತು. ಜ್ಯೋತಿಷಿ ನಿಧಿ ಚೌಧರಿ ಅವರ ಬಟ್ಟೆಯ ವಿಚಾರದಲ್ಲಿ ಒಂದು ವರ್ಗ ಸತತವಾಗಿ ಟ್ರೋಲ್ ಮಾಡುವಲ್ಲಿ ಭಾರೀ ನಿರತವಾಗಿತ್ತು.


Ad Widget

Ad Widget

ಏಕೆಂದರೆ ಈ ಯೂಟ್ಯೂಬರ್ ಹಾಕಿದ ಸೀರೆಯೊಂದಕ್ಕೆ ಬ್ಲೌಸ್ ಹಾಕಿರಲಿಲ್ಲ. ಹಾಗಾಗಿ ಭಾರೀ ವ್ಯಾಪಕ ಟೀಕೆಗೆ ಒಳಗಾಗಲು ಕಾರಣವಾಯಿತು. ಸೀರೆಯುಟ್ಟಿದ್ದ ನಿಧಿ ಬ್ಲೌಸ್ ಹಾಕಿರಲಿಲ್ಲ. ಈ ವೀಡಿಯೋ ವೀಕ್ಷಿಸಿದ ಅನೇಕರು ಸಿಟ್ಟುಗೊಂಡಿದ್ದರು. ಈಕೆ ಟ್ವಿಟರ್‌ನಲ್ಲಿ 14.1 ಕೆ ಫಾಲೋವರ್ಸ್ ಗಳನ್ನು ಹೊಂದಿದ್ದಾಳೆ‌ ಜ್ಯೋತಿಷಿ, ವಕೀಲೆ, ಸೋಷಿಯಲ್ ಮೀಡಿಯ ಇನ್‌ಪ್ಲುಯೆನ್ಸರ್ ಫ್ಯಾಷನ್ ಸ್ಟೈಲಿಸ್ಟ್ ಎಂದು ಕರೆಸಿಕೊಂಡಿದ್ದಾರೆ ಈಕೆ.


Ad Widget

ಇತ್ತೀಚೆಗೆ, ಇವಳು ವೀಡಿಯೊಂದನ್ನು ಅಪ್‌ಲೋಡ್ ಮಾಡಿದ್ದು, ಅದರಲ್ಲಿ ಮನೆ ಕೆಲಸದವರನ್ನು ರ್ದುಬಳಕೆ ಮಾಡಿಕೊಳ್ಳಬೇಡಿ ಮತ್ತು ಯಾವಾಗಲೂ ಆರ್ಥಿಕ ಹಿಂದುಳಿದವರಿಗೆ ಸಹಾಯ ಮಾಡುವಂತೆ ಸಲಹೆ ನೀಡಿದ್ದರು.

ನೀಲಿ ಬಣ್ಣದ ಸೀರೆ ಉಟ್ಟಿದ್ದ ಈಕೆ, ಬೆಳ್ಳಿ ಆಭರಣ, ರುದ್ರಾಕ್ಷಿ ಮತ್ತು ಕಪ್ಪು ಬಿಂದಿಯನ್ನು ಇಟ್ಟಿದ್ದರು. ಆದರೆ ಬ್ಲೌಸ್ ಧರಿಸಿಲ್ಲ ಎಂದು ಟ್ರೋಲ್ ಮಾಡಿದವರು ಬ್ಲೌಸ್ ಖರೀದಿಸಲು ಹಣವನ್ನು ಕಳುಹಿಸಲು ಸಹ ಮುಂದಾಗಿದ್ದರು.

Ad Widget

Ad Widget

Ad Widget

ನೀವು ಈಗ ಬ್ಲೌಸ್ ಖರೀದಿಸಲು ಸಾಧ್ಯವಾಗದ ಬಡ ಮಹಿಳೆ, ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನನಗೆ ನೀಡಿ, ಬ್ಲೌಸ್ ಖರೀದಿಸಲು ಸ್ವಲ್ಪ ಹಣವನ್ನು ವರ್ಗಾಯಿಸುತ್ತೇನೆ ಎಂದು ಕಾಲೆಳೆದಿದ್ದಾರೆ. ಕೆಲವರು ಈಕೆಗೆ 500 ರೂ. ನೀಡಿ ಎಂದು ಗೇಲಿ ಮಾಡಿದ್ದಾರೆ. ಇನ್ನು ಕೆಲವರು ನಿಧಿ ಅವರನ್ನು ಸಮರ್ಥಿಸಿದ್ದು, ಅದೂ ಕೂಡಾ ಒಂದು ಸ್ಟೈಲ್. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

error: Content is protected !!
Scroll to Top
%d bloggers like this: