LPG Cylinder : ನಿಮಗೆ ಗೊತ್ತೇ ಗ್ಯಾಸ್ ಸಿಲಿಂಡರ್ ಬಣ್ಣ‌ ಕೆಂಪು ಯಾಕೆಂದು ? ಇದರ ಹಿಂದಿದೆ ಉಪಯುಕ್ತ ಮಾಹಿತಿ!!!

ಅಡುಗೆ ಮಾಡಲು ಬಳಸುವ ನಮ್ಮ ದೈನಂದಿನ ದಿನಚರಿಯ ಭಾಗವಾಗಿರುವ ಗ್ಯಾಸ್ ಸಿಲಿಂಡರ್ ಎಲ್ಲ ಗೃಹಿಣಿಯ ನೆಚ್ಚಿನ ಸಂಗಾತಿ. ಅತಿ ಶೀಘ್ರದಲ್ಲಿ ಕೆಲಸ ಕಾರ್ಯಗಳನ್ನು ಪೂರೈಸಲು ಗ್ಯಾಸ್ , ಸಿಲಿಂಡರ್ ಉಪಕಾರಿಯಗಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಕೆಂಪು ಬಣ್ಣದಲ್ಲಿ ರುವುದನ್ನು ಸಾಮಾನ್ಯವಾಗಿ ಎಲ್ಲರೂ ಗಮನಿಸಿರಬಹುದು.

ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಯಾಕೆ ಕೆಂಪು ಬಣ್ಣ ಇರುತ್ತದೆ ಎಂಬ ಕುತೂಹಲ ಹಲವರಲ್ಲಿ ಮನೆಮಾಡಿರಬಹುದು. ಸಾಮಾನ್ಯವಾಗಿ ನಾವು ಬಳಸುವ ಪ್ರತಿಯೊಂದು ವಸ್ತುವು ಅದರದ್ದೇ ಆದ ವಿಶೇಷತೆಯನ್ನು ಒಳಗೊಂಡಿರುತ್ತದೆ. ಏಷ್ಟೋ ಬಾರಿ ನಮಗೆ ಅದರ ಬಗ್ಗೆ ಮಾಹಿತಿ ತಿಳಿಯದೆ ಇರುವುದೇ ಹೆಚ್ಚು.

ಸಿಲಿಂಡರ್ ಯಾವಾಗಲೂ ಯಾಕೆ ಕೆಂಪು ಬಣ್ಣದಲ್ಲಿರುತ್ತದೆ? ಏಕೆಂದರೆ ಕೆಂಪು ಅಪಾಯದ ಸಂಕೇತವಾಗಿದೆ ಮತ್ತು ಕೆಂಪು ಬಣ್ಣವು ಗರಿಷ್ಠ ತರಂಗಾಂತರವನ್ನು ಹೊಂದಿದೆ ಮತ್ತು ಇತರ ಬಣ್ಣಗಳಿಗೆ ಹೋಲಿಸಿದಾಗ ಕೆಂಪು ಬಣ್ಣವು ಎದ್ದು ಕಾಣುತ್ತದೆ. ದೂರದಿಂದ ನೋಡಿದರೂ ಕೂಡ ಬೇಗ ಪತ್ತೆ ಮಾಡಬಹುದು.

ಇದರ ಆಕಾರವು ಯಾವಾಗಲೂ ಸಿಲಿಂಡರಾಕಾರವಾಗಿರುತ್ತದೆ. ಎಕೆಂದರೆ ಇದು ಒತ್ತಡದಿಂದ ಸಂಗ್ರಹಣೆಯಾಗಿರುತ್ತದೆ. ಇದರಿಂದಾಗಿ ಒತ್ತಡವನ್ನು ಏಕರೂಪವಾಗಿ ಇಡಲು ಸಾಧ್ಯ. ಜೊತೆಗೆ ಸುಲಭವಾಗಿ ಒಂದು ಕಡೆಯಿಂದ ಮತ್ತೊಂದೆಡೆಗೆ ಸಾಗಿಸಬಹುದು.

ಸಾಮಾನ್ಯವಾಗಿ ಸಿಲಿಂಡರ್‌ನ ಖಾಲಿ ತೂಕ 15.3 ಕೆಜಿ ಮತ್ತು ಗ್ಯಾಸ್ ತುಂಬಿದ ಸಿಲಿಂಡರ್‌ನ ತೂಕ 29.5 ಕೆಜಿ ಇರುತ್ತದೆ. ಅಂದರೆ, ಒಟ್ಟು 14.2 ಕೆ. ಜಿ ಚಾರ್ಜ್ ಮಾಡಿದ ಅನಿಲದ ತೂಕ. ಈ ತೂಕದ ಸಿಲಿಂಡರ್ ಅನ್ನು ಗೃಹ ಬಳಕೆಗೆ ಮಾತ್ರ ಉಪಯೋಗಿಸಲಾಗುತ್ತದೆ.

ಇದು ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಎಲ್‌ಪಿಜಿಯಲ್ಲಿ ಪ್ರೊಪೇನ್ ಅಥವಾ ಬ್ಯುಟೇನ್ ಎಂಬ ಉಪವರ್ಗವಿದೆ. ಸಿಲಿಂಡರ್ ಅನ್ನು ಒಂದು ಕಡೆಯಿಂದ ಸಾಗಿಸುವಾಗ ದ್ರವ ಸ್ಥಿತಿಗೆ ಸಂಕುಚಿತಗೊಳಿಸಲಾಗಿರುವುದರಿಂದ ಇದರ ಶಬ್ದ ದ್ರವದಂತೆ ಧ್ವನಿಸುತ್ತದೆ.
ಸಿಲಿಂಡರ್‌ನಲ್ಲಿರುವ ಸಂಖ್ಯೆಗಳು ಮತ್ತು ಬರಹಗಳು ಎನ್‌ಕೋಡ್ ಮಾಡಲಾದ ಮುಕ್ತಾಯ ದಿನಾಂಕವನ್ನು ಸೂಚಿಸುತ್ತವೆ. ಉದಾಹರಣೆಗೆ
ಉ:- ಜನವರಿಯಿಂದ ಮಾರ್ಚ್
ಬಿ :- ಏಪ್ರಿಲ್ ನಿಂದ ಜೂನ್
ಸಿ:- ಜುಲೈನಿಂದ ಸೆಪ್ಟೆಂಬರ್.
ಡಿ: ಅಕ್ಟೋಬರ್ ನಿಂದ ಡಿಸೆಂಬರ್.
ಸಂಖ್ಯೆ ಎಂದರೆ ವರ್ಷ.ನಿರ್ದಿಷ್ಟ ವರ್ಷ ಮತ್ತು ತಿಂಗಳ ನಂತರ, ಸಿಲಿಂಡರ್ ಅವಧಿ ಮುಗಿಯುತ್ತದೆ.ಸಂಖ್ಯೆ ಮತ್ತು ವರ್ಣಮಾಲೆಯ ಪ್ರಕಾರ, D ಎಂದರೆ ಸೆಪ್ಟೆಂಬರ್ ನಿಂದ ಡಿಸೆಂಬರ್ 13 ಎಂದರೆ 2013. ಅಂದರೆ ಸೆಪ್ಟೆಂಬರ್ 2013 ರಿಂದ ಡಿಸೆಂಬರ್ 2013 ರವರೆಗೆ, ಸಿಲಿಂಡರ್ ಅವಧಿ ಡಿಸೆಂಬರ್ ಗೆ ಮುಗಿಯುತ್ತದೆ ಎಂಬುದನ್ನು ತಿಳಿಸುತ್ತದೆ.

Leave A Reply

Your email address will not be published.