ದೂರಸಂಪರ್ಕ ಇಲಾಖೆ (DOT)ಯಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ-14, ಅರ್ಜಿ ಸಲ್ಲಿಸಲು ಕೊನೆ ದಿನ-ಅ.15

ಬೆಂಗಳೂರಿನ ದೂರಸಂಪರ್ಕ ಇಲಾಖೆಯಲ್ಲಿ ( Department of Telecommunication) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಬಿಇ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳನ್ನು ಎರಡು ವರ್ಷದ ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳ ಕಾರ್ಯ ಕ್ಷಮತೆ ಆಧಾರದ ಮೇಲೆ ಈ ಹುದ್ದೆಗಳ ಮುಂದಿನ ಒಂದು ವರ್ಷಕ್ಕೆ ವಿಸ್ತರಿಸಲಾಗುವುದು.

ಹುದ್ದೆ ಮಾಹಿತಿ :
ಸಂಸ್ಥೆಯ ಹೆಸರು : ದೂರಸಂಪರ್ಕ ಇಲಾಖೆ (DOT)
ಹುದ್ದೆಯ ಹೆಸರು: ರಿಸರ್ಚ್ ಅಸೋಸಿಯೇಟ್
ಹುದ್ದೆಗಳ ಸಂಖ್ಯೆ: 14
ಉದ್ಯೋಗ ಸ್ಥಳ :ಬೆಂಗಳೂರು
ವೇತನ : 75000 ರೂ. ಪ್ರತಿ ತಿಂಗಳು


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಶೈಕ್ಷಣಿಕ ಅರ್ಹತೆ:
ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಬೋರ್ಡ್‌ಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಲೆಕ್ಟ್ರಾನಿಕ್ಸ್​, ಕಮ್ಯುನಿಕೇಶನ್ಸ್, ಟೆಲಿಕಮ್ಯುನಿಕೇಶನ್ಸ್, ಮಾಹಿತಿ ತಂತ್ರಜ್ಞಾನ,ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ:
ಟೆಲಿಕಮ್ಯುನಿಕೇಶನ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಪದವಿ ಅಭ್ಯರ್ಥಿಗಳು ಪದವೀಧರರಿಗೆ 28 ​​ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಬಿಇ ಮತ್ತು ಬಿಟೆಕ್​ ವಿದ್ಯಾರ್ಥಿಗಳು ಗರಿಷ್ಟ 30 ವರ್ಷ ಹಾಗೂ ಎಂಟೆಕ್​ ಮತ್ತು ಎಂಎಸ್​ ಅಭ್ಯರ್ಥಿಗಳು ಗರಿಷ್ಟ 32 ವರ್ಷಗಳು ಮೀರಿರಬಾರದು.

ಅರ್ಜಿ ಸಲ್ಲಿಕೆ: ಆಫ್​ಲೈನ್​

ಅರ್ಜಿ ಶುಲ್ಕ: ವಿನಾಯಿತಿ

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಕೆ ವಿಳಾಸ:
ಅಸಿಸ್ಟೆಂಟ್ ಡೈರೆಕ್ಟರ್ ಜನರಲ್ , ಕೊಠಡಿ ಸಂಖ್ಯೆ 302, ನ್ಯಾಷನಲ್ ಸೆಂಟರ್ ಫಾರ್ ಕಮ್ಯುನಿಕೇಶನ್ ಸೆಕ್ಯುರಿಟಿ, 2 ನೇ ಮಹಡಿ, ಸಿಟಿ ಟೆಲಿಫೋನ್ ಎಕ್ಸ್‌ಚೇಂಜ್, ಸಂಪಂಗಿರಾಮ ನಗರ, ಬೆಂಗಳೂರು – 560027.

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05 ಸೆಪ್ಟೆಂಬರ್​​ 2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಅಕ್ಟೋಬರ್ 2022

ಅರ್ಜಿ ಸಲ್ಲಿಕೆ ಪ್ರಕ್ರಿಯೆ:
*ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.
*ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.
*ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಇತ್ಯಾದಿ ದಾಖಲೆಗಳನ್ನು ಅರ್ಜಿಯಲ್ಲಿ ದಾಖಲಿಸಿ
*ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲ್ಕಂಡ ವಿಳಾಸಕ್ಕೆ ಅರ್ಜಿಯನ್ನು ಸ್ಪೀಡ್​ ಪೋಸ್ಟ್​ ಅಥವಾ ರಿಜಿಸ್ಟರ್​ ಪೋಸ್ಟ್​ ಮೂಲಕ ನಿಗದಿತ ದಿನಾಂಕಕ್ಕೆ ತಲುಪುವಂತೆ ಸಲ್ಲಿಸಿ.

ಅಧಿಕೃತ ವೆಬ್‌ಸೈಟ್: dot.gov.in

error: Content is protected !!
Scroll to Top
%d bloggers like this: