ರಾಜ್ಯದ ಹೊರಗುತ್ತಿಗೆ ನೌಕರರಿಗೆ ಭರ್ಜರಿ ಸಿಹಿಸುದ್ದಿ: ‘ಕನಿಷ್ಠ ವೇತನ’ ಜಾರಿಗೊಳಿಸಿ ಸರ್ಕಾರ ಆದೇಶ

ರಾಜ್ಯ ಕಾರ್ಮಿಕ ಇಲಾಖೆಯು (Labour Department ) ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ( Outsourced employee ), ಸರ್ಕಾರ ಕನಿಷ್ಠ ವೇತನ ( Minimum Wages ) ಜಾರಿಗೊಳಿಸಿ ಆದೇಶಿಸಿದೆ.


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಈ ಕುರಿತು ಸರ್ಕಾರದ ರಾಜ್ಯ ಕಾರ್ಮಿಕ ಇಲಾಖೆಯ ಉಪ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳನ್ನು ಭದ್ರತಾ ಏಜೆನ್ಸಿ ಮುಖಾಂತರ ನೇಮಸಿಕೊಂಡಿದ್ದಲ್ಲಿ, ದಿನಾಂಕ 28-07- 2022ರಲ್ಲಿ ನಿಗದಿಪಡಿಸಿರುವ ಕನಿಷ್ಠ ವೇತನ ದರಗಳನ್ನು ಪಾವತಿಸುವಂತೆ ಸೂಚಿಸಿದ್ದಾರೆ.

ಶೌಟಾಲಯಗಳು, ಸ್ನಾನಗೃಹಗಳು, ಒಳಚರಂಡಿಗಳನ್ನು ಶುಚಿ ಮಾಡುವ ಕೆಲಸಗಳಲ್ಲಿ ತಿರೋರಿಗೆ ಕನಿಷ್ಠ ವೇತನ ದರಗಳಂತೆ ಪಾವತಿಸುವಂತೆ ತಿಳಿಸಿದ್ದಾರೆ.

ಇದಲ್ಲದೇ ಪ್ರತಿ ವರ್ಷ ಏಪ್ರಿಲ್ ನಲ್ಲಿ ಏರಿಕಾಯಗುವ ವ್ಯತ್ಯಸ್ಥ ತುಟ್ಟಿಭತ್ಯೆ ದರಗಳನ್ನು ತೊಡಗಿಸಿ ಕೊಂಡಿರುವವರಿಗೆ ಸೇರಿಸಿ ಪಾವತಿಸಬೇಕು. ಒಂದು ದಿನಕ್ಕೆ ಎಂಟು ಘಂಟೆಗಳ ಕೆಲಸ ಇದರ ಜೊತೆಗೆ ವಿರಾಮ ಕೂಡಾ ಸೇರಿಕೊಂಡಿದೆ. ಈ ಕೆಲಸಕ್ಕಾಗಿ ಕನಿಷ್ಠ ವೇತನವಿದ್ದು, ಇದಕ್ಕಿಂತ ಹೆಚ್ಚು ಕೆಲಸ ಮಾಡಿದ್ರೆ, ದ್ವಿಗುಣ ದರದಲ್ಲಿ ವೇತನ ಲೆಕ್ಕಹಾಕಿ ನೀಡುವುದು ಎಂದಿದ್ದಾರೆ.
ಇನ್ನೂ ಪ್ರತಿ ತಿಂಗಳು 5ನೇ ದಿನಾಂಕದೊಳಗೆ ನೌಕರರ ಬ್ಯಾಂಕ್ ಖಾತೆಗೆ ವೇತನದ ಹಣವನ್ನು ಜಮೆ ಮಾಡಬೇಕು. ಕ್ರಮಬದ್ಧವಲ್ಲದ ಯಾವುದೇ ಕಟಾವಣೆಗಳನ್ನು ಮಾಡಬಾರದು ಎಂದು ಹೇಳಿದೆ.

ಮಾಲೀಕರ ಭಾಗದ ಇಎಸ್‌ಐ, ಪಿಎಫ್ ವಂತಿಗೆ ಹಣವನ್ನು ನೌಕರರ ಭಾಗದ ಇಎಸ್‌ಐ, ಪಿಎಫ್ ವಂತಿಗೆಗೆ ಸೇರಿಸಿ, ಮಾಲೀಕರು ನೌಕರರ ಇಎಸ್‌ಐ, ಪಿಎಫ್ ಖಾತೆಗೆ ಜಮಾ ಮಾಡುವಂತೆ ತಿಳಿಸಿದ್ದಾರೆ.

error: Content is protected !!
Scroll to Top
%d bloggers like this: