ನಿಮ್ಮ ಲ್ಯಾಪ್ ಟಾಪ್ ಸ್ಲೋ ಆಗಿದೆಯಾ ? ಈ ಟ್ರಿಕ್ ಯೂಸ್ ಮಾಡಿ, ಬದಲಾವಣೆ ಕ್ಷಣಮಾತ್ರದಲ್ಲಿ ನಿಮ್ಮ ಕಣ್ಣ ಮುಂದೆ!!!

Share the Article

ಇಂದು ಲ್ಯಾಪ್‌ಟಾಪ್‌ ನಮ್ಮೆಲ್ಲರ ಜೀವನದ ಒಂದು ಭಾಗವಾಗಿದೆ. ಈ ಡಿಜಿಟಲ್ ಯುಗದಲ್ಲಿ ಕೆಲಸಗಳೆಲ್ಲ ಕ್ಷಣ ಮಾತ್ರದಲ್ಲಿ, ಬೆರಳುಗಳ ತುದಿಯಲ್ಲಿ ಲ್ಯಾಪ್‌ಟಾಪ್‌ ಮೂಲಕ ನಡೆಯುತ್ತಿದೆ. ಇಂದು ಬಹುತೇಕ ಕಚೇರಿಗಳಲ್ಲಿ ಪುಸ್ತಕದ ಬರವಣಿಗೆ ಮಾಯವಾಗಿ ಕಂಪ್ಯೂಟರ್ ಟೈಪಿಂಗ್ ರಾರಾಜಿಸುತ್ತಿದೆ. ಸಾಧಾರಣ ದಿನಸಿ ಅಂಗಡಿ ಇಟ್ಟಿರುವವರು ಕೂಡ ಕೆಲವು ಸಮಯದಲ್ಲಿ ಲ್ಯಾಪ್‌ಟಾಪ್‌ ಬಳಕೆ ಮಾಡುತ್ತಾರೆ ಎಂದರೆ ಆಶ್ಚರ್ಯವಾಗಬಹುದು.

ಅಲ್ಲದೆ , ಇಂದು ಬಹುತೇಕ ಕಚೇರಿಗಳಲ್ಲಿ ಪುಸ್ತಕದ ಬರವಣಿಗೆ ಮಾಯವಾಗಿ ಕಂಪ್ಯೂಟರ್ ಟೈಪಿಂಗ್ ರಾರಾಜಿಸುತ್ತಿದೆ. ಕೊರೊನಾ ವೈರಸ್ ಹಾವಳಿಯಿಂದ ಅನೇಕರಿಗೆ ವರ್ಕ್​ ಫ್ರಂ ಹೋಮ್ ಮಾಡುವ ಪರಿಸ್ಥಿತಿ ಎದುರಾಗಿ  ಲ್ಯಾಪ್​ಟಾಪ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಯಿತು. ಸದ್ಯ ಪ್ರಸಿದ್ಧ ಲ್ಯಾಪ್​ಟಾಪ್ ಕಂಪನಿಗಳು ಕೂಡ ಬಜೆಟ್ ಬೆಲೆಗೆ ಆಕರ್ಷಕ ಫೀಚರ್​ಗಳ ಲ್ಯಾಪ್​ಟಾಪ್ ಅನ್ನು ಮಾರಾಟ ಮಾಡುತ್ತಿರುವುದರಿಂದ ಸುಲಭವಾಗಿ ಗ್ರಾಹಕರ ಕೈ ಸೇರುತ್ತಿದೆ.

ಮಾರುಕಟ್ಟೆಯಲ್ಲೀಗ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು ಇದ್ದರೂ, ಬಳಕೆ ಮಾಡುವಾಗ ಕೆಲವೊಮ್ಮೆ ಅವುಗಳು ಹ್ಯಾಂಗ್ ಆಗುವ ಹಾಗೂ ನಿಧಾನವಾಗುವ ಸಮಸ್ಯೆ ಕಾಡುತ್ತದೆ. ಪ್ರತಿ ಕ್ಷೇತ್ರ ದಲ್ಲೂ ತನ್ನ ಛಾಪು ಮೂಡಿಸಿರುವ ಕಂಪ್ಯೂಟರ್ ಬಳಕೆ ಇಲ್ಲದೆ ಯಾವುದೇ ಕೆಲಸಗಳು ಇಂದು ನಡೆಯಲು ಸಾಧ್ಯವಿಲ್ಲ. ಇಂತಹ ಒಂದು ಬಹಳ ಉಪಯುಕ್ತವಾದ ಲ್ಯಾಪ್‌ಟಾಪ್‌ ಅನ್ನು ನಾವು ಅಷ್ಟೇ ಜವಾಬ್ದಾರಿಯುತವಾಗಿ ನೋಡಿಕೊಳ್ಳಬೇಕಾಗುತ್ತದೆ.

ಮನೆಯಿಂದಲೇ ಕೆಲಸ ಮಾಡುವ ಇಂದಿನ ದಿನಗಳಲ್ಲಿ, ತಾಂತ್ರಿಕ ದೋಷ ಉಂಟಾದಾಗ ಸಿಸ್ಟಂ ನಿಧಾನಗೊಳ್ಳುತ್ತದೆ. ಇದರಿಂದಾಗಿ ನಿಗದಿತ ಸಮಯಕ್ಕೆ ನಿಮ್ಮ ಕೆಲಸ ಪೂರ್ಣಗೊಳ್ಳುವುದಿಲ್ಲ. ಆದರೆ ಎಲ್ಲಾ ಸಂದರ್ಭಗಳಲ್ಲೂ ಹೊಸ ಲ್ಯಾಪ್‌ಟಾಪ್ ಖರೀದಿಸುವುದು ಪರಿಹಾರವಲ್ಲ. ಆದಾಗ್ಯೂ, ಕೆಲವು ಸಿಂಪಲ್ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಲ್ಯಾಪ್‌ಟಾಪ್ ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡಬಹುದು.

ಸಾಮಾನ್ಯವಾಗಿ ಅನೇಕರು ಕೆಲಸ ಮುಗಿದ ತಕ್ಷಣ ತಮ್ಮ ಲ್ಯಾಪ್​ಟಾಪ್ ಅನ್ನು ಶಟ್​ಡೌನ್ ಮಾಡುವುದಿಲ್ಲ. ವಿಂಡೋಸ್ 10 ತಾನಾಗಿಯೇ ಸ್ಲೀಪ್ ಮೋಡ್​ಗೆ ಹೋಗುತ್ತದೆ. ಆದರೆ ಆಫ್ ಮಾಡದ ಕಾರಣ ಚಾಲನೆಯಲ್ಲಿರುತ್ತದೆ. ಇದರಿಂದ ಲ್ಯಾಪ್​ಟಾಪ್​ ನಿಧಾನವಾಗುವುದು, ಹ್ಯಾಂಗ್ ಆಗುವ ಸಮಸ್ಯೆ ಕಾಡುತ್ತದೆ.

ಲ್ಯಾಪ್ ಟಾಪ್ ಈಗಾಗಲೇ ಸ್ವಲ್ಪ ಸ್ಲೋ ಆಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಗೇಮಿಂಗ್ ಆಡಿದರೂ ಕೂಡ ಲ್ಯಾಪ್ ಟಾಪ್ ಸ್ಲೋ ಆಗಿ ಅದರಿಂದ ಹ್ಯಾಂಗಿಂಗ್ ಸಮಸ್ಯೆಯೂ ಶುರುವಾಗುತ್ತದೆ. ಅಂತಹ ಅಪ್ಲಿಕೇಶನ್ ಅನ್ನು ಕ್ಲೋಸ್ ಮಾಡಬೇಕಾಗುತ್ತದೆ.

ಕೆಲಸ ಮಾಡುವ ಎಲ್ಲಾ ಸಮಯದಲ್ಲೂ ಬ್ರೌಸರ್ ತೆರೆಯುವುದನ್ನು ಒಳಗೊಂಡಿದ್ದರೆ, ಯಂತ್ರವು ಸಾಕಷ್ಟು ವೇಗವಾಗಿಲ್ಲದಿದ್ದರೆ ತೆರೆದ ಟ್ಯಾಬ್‌ಗಳ ಸಂಖ್ಯೆ ಕಡಿಮೆ ಮಾಡಿಕೊಳ್ಳಬೇಕು. ಬ್ರೌಸರ್ ವಿಂಡೋದಲ್ಲಿ ತೆರೆದಿರುವ ಹೆಚ್ಚು ಟ್ಯಾಬ್‌ಗಳು, ನಿಮ್ಮ RAM ಮತ್ತು ಪ್ರೊಸೆಸರ್ ಮೇಲೆ ಹೆಚ್ಚಿನ ಭಾರ ಬಿದ್ದು ನಿಮ್ಮ ಲ್ಯಾಪ್‌ಟಾಪ್ ನಿಧಾನವಾಗಿ ಕೆಲಸ ಮಾಡುತ್ತದೆ . ಅಲ್ಲದೇ ಕೆಲವೊಮ್ಮೆ ಸಿಸ್ಟಮ್ ಹಿನ್ನೆಲೆಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯುವುದಿಲ್ಲ. Ctrl+Shift+Esc ಪ್ರೆಸ್ಸ್ ಮಾಡುವ ಮೂಲಕ ವಿಂಡೋಸ್ ಟಾಸ್ಕ್ ಮ್ಯಾನೇಜರ್‌ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಂಡು ಅನವಶ್ಯಕ ಪ್ರೋಗ್ರಾಂಗಳನ್ನು ಮುಚ್ಚಬಹುದು.

ಉಪಯೋಗಕ್ಕೆ ಬಾರದಂತಹ ಪ್ರೋಗ್ರಾಂಗಳನ್ನು ಹುಡುಕಿ ಅವುಗಳನ್ನು ಮಾತ್ರ ಅನ್‌ಇನ್‌ಸ್ಟಾಲ್ ಮಾಡಿ, ಲ್ಯಾಪ್‌ಟಾಪ್ ಅನ್ನು ರೀಸ್ಟಾರ್ಟ್ ಅಪ್ಲಿಕೇಶನ್ ಬಳಸಿದರೆ ಮೆಮೋರಿಯನ್ನು ತೆರವುಗೊಳಿಸಿದರೆ ಸಿಸ್ಟಮ್ ನ ಕಾರ್ಯ ಕ್ಷಮತೆ ಹೆಚ್ಚುತ್ತದೆ.

RAM ಹೆಚ್ಚಿಸುವುದರಿಂದ ಕೂಡ ಲ್ಯಾಪ್​ಟಾಪ್ ವೇಗ ಹೆಚ್ಚಿಸಬಹುದು. ಸುಮಾರು 50 ಸಾವಿರ ಮೌಲ್ಯದ ಲ್ಯಾಪ್​ಟಾಪ್ ಗಳಿಗೆ 4GB RAM ನೀಡಲಾಗುತ್ತದೆ. ಈ RAM ಸಾಕಾಗಲ್ಲ ಎಂದಾದರೆ ಇದನ್ನು ಹೆಚ್ಚಿಸಬಹುದು. ಅಥವಾ ಹಾರ್ಡ್ ಡಿಸ್ಕ್‌ನಲ್ಲಿ ಎಲ್ಲ ರೀತಿಯ ಜಂಕ್ ಫೈಲ್‌ಗಳಿದ್ದರೆ ತೆಗದು ಹಾಕಿದರೆ ಹ್ಯಾಂಗ್ ಆಗುವುದರಿಂದ ತಪ್ಪಿಸಬಹುದು

Leave A Reply