ಸ್ವರದಿಂದ ಸ್ವಾರಸ್ಯ ಲೋಕ ಸೃಷ್ಟಿಸಿ ಸಂಗೀತಾಸಕ್ತರಿಗೆ ಆಸರೆಯಾದ ಇಸ್ಲಾಂ ಮನೆತನ

ಅನಾದಿ ಕಾಲದಿಂದಲೂ ಸಂಗೀತ,ರಾಗ , ತಾಳ ಲಯ ಬದ್ದ ನಾದವು ವಿಶ್ವದ ಎಲ್ಲ ಸಂಸ್ಕೃತಿ ಗಳಲ್ಲಿ ಸಂಗೀತ ಪ್ರಕಾರಗಳಲ್ಲಿ ತನ್ನದೇ ಅದ ಛಾಪು ಮೂಡಿಸುತ್ತಾ ಬಂದಿದೆ.

ಕೇರಳದ ಕೋಝಿಕೋಡ್ ನ ಮುಸ್ಲಿಂ ಕುಟುಂಬವೊಂದು ಸಂಗೀತ ಶಾರದೆಯನ್ನೇ ಒಲಿಸಿಕೊಂಡು ನಾದಮಯ ಲೋಕವನ್ನೇ ಸೃಷ್ಟಿಸಿಕೊಂಡು ಸಂಗೀತವನ್ನು ಉಸಿರಾಗಿಸಿ ಕೊಂಡಿದ್ದಾರೆ.ಸಂಗೀತ ಮತ್ತು ಮೃದಂಗ ಕಲಾವಿದರಾಗಿರುವ ಸಲೀಂ ತಾವು ಸಂಗೀತವನ್ನು ಆರಾಧಿಸುವು ದಲ್ಲದೇ ಅವರ ಮೂವರು ಹೆಣ್ಣು ಮಕ್ಕಳಿಗೂ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರಣೆಯಾಗಿದ್ದಾರೆ.

ಹೆಣ್ಣು ಮಕ್ಕಳಿಗೆ ಕಲಾ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ನೀಡುವ ಅವಶ್ಯಕತೆ ಇದೆಯೇ? ಎಂದು ಪ್ರಶಿಸುವವರ ನಡುವೆಯೂ ಸಲೀಂ ತಮ್ಮ ಹೆಣ್ಣು ಮಕ್ಕಳ ಸಾಧನೆಗೆ ಬೆಂಬಲವಾಗಿದ್ದಾರೆ. ಅಲ್ಲದೇ ಸಲೀಂ ಅವರ ತಂದೆ ಸ್ಥಾಪಿಸಿದ
ಲಯನಂ ಸ್ಕೂಲ್ ಆಫ್ ಫೈನ್ ಆರ್ಟ್ಸ್ ಕಲಾ ಕೇಂದ್ರದ ನಿರ್ವಹಣೆ ಮಾಡುತ್ತಿದ್ದು, 60 ವರ್ಷಗಳಿಂದ ಸಂಗೀತ , ನೃತ್ಯ ಮತ್ತು ವಾದ್ಯ ಕಲಿಯಲು ಆಸಕ್ತಿಯಿರುವ ಆಕಾಂಕ್ಷಿ ಗಳಿಗೆ ಈ ಸಂಸ್ಥೆ ತರಬೇತಿ ನೀಡುತ್ತಾ ಬಂದಿದೆ.

ಸಲೀಂ ಅವರ ಮಕ್ಕಳು ಕಲಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯ ಮೂಲಕ ಸಾಮರ್ಥ್ಯವನ್ನು ರುಜುವಾತು ಪಡಿಸಿದ್ದಾರೆ. ತಿರುವನಂತಪುರಂನ ಸ್ವಾತಿ ತಿರುನಾಳ್ ಕಾಲೇಜ್ ನಲ್ಲಿ ಒಂದು ವರ್ಷದ ಹಿಂದೆ ಮೃದಂಗದಲ್ಲಿ ತರಬೇತಿ ಪಡೆದ ಏಕೈಕ ಕಲಾವಿದೆ ಎಂದು ನೆನಪಿಸಿಕೊಳ್ಳುತ್ತಾರೆ ಸಲೀಂ .ಇವರು ಕಳೆದ 28 ವರ್ಷಗಳಿಂದ ಸಂಗೀತ ತರಬೇತಿ ನೀಡುತ್ತಿದ್ದಾರೆ.

ಹೆಣ್ಣೆಂದರೆ ಆಕೆ ನಾಲ್ಕು ಗೋಡೆಯ ಒಳಗೆ ಬಂಧಿಯಾಗದೆ ಹೊರಪ್ರಪಂಚಕ್ಕೆ ಲಗ್ಗೆ ಇಟ್ಟು ತೊಟ್ಟಿಲ ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂದು ಸಾಬೀತುಪಡಿಸಿದ್ದು ಇತಿಹಾಸವಾಗಿದ್ದರೂ ಕೂಡ ಇನ್ನೂ ಎಷ್ಟೋ ಕಡೆಗಳಲ್ಲಿ ಹೆಣ್ಣು ನಾಲ್ಕು ಗೋಡೆಯ ಒಳಗೆ ಬಂಧಿಯಾಗಿರುವುದು ವಿಪರ್ಯಾಸ.

ಸಲೀಂ ತಮ್ಮ ವಿದ್ಯೆಯನ್ನು ಮತ್ತೊಬ್ಬರಿಗೆ ಧಾರೆ ಎರೆದು ಮಕ್ಕಳನ್ನು ಕಲಾ ಭೂಮಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದು ಹೆಮ್ಮೆಯ ವಿಷಯ.
ನಾವು ಇತರರಿಗೆ ಹೋಲಿಸಿದರೆ ಕಡಿಮೆ ಶಾಸ್ತ್ರೀಯ ಕಚೇರಿಗಳನ್ನು ನಡೆಸಿದ್ದೇವೆ. ನನ್ನನ್ನು ಸಂಗೀತ ಕಚೇರಿಗೆ ಕರೆಯಲು ಬೇರೆಯವರಿಂದ ನನಗೆ ತೊಂದರೆ ಯಾದರೆ ಎಂಬ ಹಿಂಜರಿಕೆಯಿಂದ ಆಯೋಜಕರು ಕರೆಯಲು ಯೋಚಿಸುತ್ತಾರೆ. ಹುಡುಗಿಯರು ಈ ಕ್ಷೇತ್ರದಲ್ಲಿ ಸಕ್ರಿಯರಾಗಿ ಭಾಗವಹಿಸಲು ಸಮುದಾಯದ ಸಹಕಾರವೂ ಅತ್ಯಗತ್ಯ .

ಸಮುದಾಯದಿಂದ ಉತ್ತಮ ಒಡನಾಟ ಸಿಗುತ್ತದೆಯೇ? ಹುಡುಗಿಯರು ಈ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆಯೆ?? ಎಂದು ಎಲ್ಲ ಪ್ರಶ್ನೆಯ ಸುರಿಮಳೆಗೈಯುವಾಗ ಅವಮಾನಗಳನ್ನೂ ಎದುರಿಸಿದರೆ ಮಾತ್ರ ಸನ್ಮಾನದ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ ಎಂದು ನಿರೂಪಿಸಿದ್ದಾರೆ
” ನನ್ನ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಅವರ ಸಾಮರ್ಥ್ಯ ಗುರುತಿಸಲು ಮತ್ತು ಅವರಿಂದಲೇ ವೃತ್ತಿಯನ್ನು ಮಾಡಲು ನಾನು ಯಾವಾಗಲೂ ಪ್ರೋತ್ಸಾಹಿಸುತ್ತೇನೆ “ಎಂದು ಸಲೀಂ ಹೇಳಿಕೊಂಡಿದ್ದಾರೆ.

ಇವರ ಹಿರಿಯ ಮಗಳು ಸುಹಾನಾ ಮದ್ರಾಸ್ ವಿಶ್ವಿದ್ಯಾನಿಲಯದಿಂದ ಭರತನಾಟ್ಯ ಸ್ನಾತ ಕೋತ್ತರ ಕೋರ್ಸ್ ನಲ್ಲಿ ಮೊದಲ ರ‌್ಯಾಂಕ್ ಗಳಿಸಿದ್ದಾರೆ.ಇವರು ಸಂಸ್ಕೃತಿ ಸಚಿವಾಲಯದಿಂದ
ಸ್ಥಾಪಿಸಲಾದ ಸೆಂಟರ್ ಫಾರ್ ಕಲ್ಚರಲ್ ರಿಸೋರ್ಸಸ್ ಆಂಡ್ ಟ್ರೈನಿಂಗ್ (CCRT) ಯುವ ಕಲಾವಿದರ ವಿದ್ಯಾರ್ಥಿ ವೇತನವನ್ನು ಪಡೆದಿದ್ದಾರೆ.

ಸಲೀಂ ಅವರ ಎರಡನೆಯ
ಮಗಳು ನಾಶಿಧಾ ಕೂಡ ಕೇರಳ ವಿಶ್ವವಿದ್ಯಾಲಯದ ಅಡಿಯಲ್ಲಿ ಸ್ವಾತಿ ತಿರುನಾಳ್ ಕಾಲೇಜಿಂದ ವೀಣಾದಲ್ಲಿ ಸ್ನಾತಕೋತ್ತರ ಕೋರ್ಸ್ ನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.ಕಿರಿಯ ಮಗಳು ಲಿಯಾನಾ ತ್ರಿ ಪುಣಿತುರಾದ ಆರ್ ಎಲ್ ವಿ ಕಾಲೇಜಿನಲ್ಲಿ ಮೂರನೇ ವರ್ಷದ ಬಿ. ಎ (ಪಿಟೀಲು)ವಿದ್ಯಾರ್ಥಿಯಾಗಿದ್ದಾರೆ.

ಪಾಲಕ್ಕಾಡ್ ನ ಚೆಂಬೈ ಸ್ಮಾರಕ ಸರ್ಕಾರಿ ಸಂಗೀತ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಸಲೀಂ
ಅವರು ಗಾನ ಭೂಷಣಂ ಶೀರ್ಷಿಕೆ ಯೊಂದಿಗೆ ತಮ್ಮ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಪಿ.ಲೀಲಾ ಮತ್ತು ಕಲಾ ಮಂಡಲಂ ಹೈದರಾಲಿ ಅವರಂತಹ ಸಂಗೀತಗಾರ ರೊಂದಿಗೆ ಕೆಲಸ ಮಾಡಿರುವ ಸಲೀಂ ಆಲ್ ಇಂಡಿಯನ್ ರೇಡಿಯೋದಲ್ಲಿ ಗ್ರೇಡ್ ‘ ಬಿ ‘ ಕಲಾವಿದರಾಗಿ ಕೂಡ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದರ ನಡುವೆಯೂ ಮಲಪ್ಪುರಂ ನ ಕ್ರೆಸೆಂಟ್ ಎಚ್. ಎಸ್.ಎಸ್ ನಲ್ಲಿ ಸಂಗೀತ ಶಿಕ್ಷಕರಾಗಿಯು ಸೇವೆ ಸಲ್ಲಿಸುತ್ತಿರುವುದು ಅವರಿಗೆ ಕಲೆಯ ಮೇಲಿನ ವ್ಯಾಮೋಹವನ್ನು ತೋರ್ಪಡಿಸುವುದಲ್ಲದೆ, ಜ್ಞಾನದ ಬೆಳಕನ್ನು ಪಸರಿಸುವ ಅವರ ನಡೆಯನ್ನು ಎಲ್ಲರೂ ಮೆಚ್ಚಲೇಬೇಕು.

ಲಾಕ್ ಡೌನ್ ನಂತರ ಕಲಾ ಪ್ರದರ್ಶನ ನಡೆಸಲು ಹೆಚ್ಚು ಅವಕಾಶಗಳು ದೊರೆತು, ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿವೆ . ಅಲ್ಲದೇ ಹೆಚ್ಚಿನ ಮಹಿಳೆಯರು ಕಲಾ ಕ್ಷೇತ್ರದತ್ತ ಒಲವು ತೋರಿ ಈ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.