ಕಡಲನಗರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ | ಪ್ರಧಾನಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ವಿವರ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ 3800 ಕೋಟಿ ರೂ.ಗಳ ಯಾಂತ್ರೀಕರಣ ಮತ್ತು ಕೈಗಾರಿಕೀಕರಣ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಅವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಭಾರತ ಹೊಸ ಅವಕಾಶಗಳ ನಾಡು ಆಗಿದ್ದು, ಈ ನಿಟ್ಟಿನಲ್ಲಿ ಐಎನ್ಎಸ್ ವಿಕ್ರಾಂತ್ ಅನ್ನು ಪ್ರಾರಂಭಿಸುವುದು ಎಲ್ಲಾ ನಾಗರಿಕರಿಗೆ ಹೆಮ್ಮೆಯ ಕ್ಷಣವಾಗಿದೆ. ನಾವು 3700 ಕೋಟಿ ರೂ.ಗಳ ವಿವಿಧ ಕೈಗಾರಿಕಾ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆಗಳು ವ್ಯಾಪಾರ ಮತ್ತು ವಾಣಿಜ್ಯವನ್ನು ಬಲಪಡಿಸಲು ಸಹಾಯ ಮಾಡುತ್ತವೆ ಮತ್ತು ಸುಗಮ ವ್ಯಾಪಾರದಲ್ಲಿ ಹೆಚ್ಚಳವಾಗುತ್ತವೆ ಅಂತ ತಿಳಿಸದಿರು.

ಸಾಗರ ಮಾಲಾ ಯೋಜನೆಯಿಂದ ದೇಶದ ಕರಾವಳಿ ಭಾಗಕ್ಕೆ ಶಕ್ತಿ ಬರುತ್ತಿದೆ, ಮೇಕ್‌ ಇಂಡಿಯಾವನ್ನು ನಾವು ಬಲಪಡಿಸುವುದು ಅಗತ್ಯವಾಗಿದೆ. ನಮ್ಮಲ್ಲಿ ರಫ್ತು ಹೆಚ್ಚಾಗಬೇಕಾಗಿದ್ದು, ವಿಶ್ವಮಟ್ಟದಲ್ಲಿ ನಾವು ಸ್ಪರ್ಧೆ ಮಾಡಬೇಕಾಗಿದೆ. ಇಲ್ಲಿನ ಯೋಜನೆಗಳಿಂದ ದೇಶ ಹಾಗೂ ಕರ್ನಾಟಕಕ್ಕೆ ಭಾರಿ ಪ್ರಮಾಣದಲ್ಲಿ ಲಾಭವಾಗಲಿದ್ದು, ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಿರ್ಮಾಣವಾಗಲಿದೆ ಅಂತ ತಿಳಿಸಿದರು. ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮದ ಮೂಲಕ, ನಾವು ಕರ್ನಾಟಕದಲ್ಲಿ ಕುಶಲಕರ್ಮಿಗಳಿಗೆ ಮಾರುಕಟ್ಟೆ ಅವಕಾಶಗಳನ್ನು ತೆರೆಯಲು ಸಾಧ್ಯವಾಗುತ್ತದೆ. ಮೇಕ್ ಇನ್ ಇಂಡಿಯಾದ ಯಶಸ್ಸು, ಹೆಚ್ಚುತ್ತಿರುವ ರಫ್ತು ಭಾರತದ ಅಭಿವೃದ್ಧಿಗೆ ನಿರ್ಣಾಯಕವಾಗಿದೆ. ಇದನ್ನು ಬೆಂಬಲಿಸಲು ನಾವು ಉತ್ತಮ ಲಾಜಿಸ್ಟಿಕ್ಸ್ ಗಾಗಿ ನಮ್ಮ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಅಂತ ತಿಳಿಸಿದರು.

ಇದೇ ವೇಳೆ ಅವರು ಮಾತನಾಡುತ್ತ, ಒಂದು ಜಿಲ್ಲೆ ಒಂದು ಉತ್ಪನದ ಪ್ರಾಮುಖ್ಯತೆಯನ್ನು ಅವರು ತಿಳಿಸಿಕೊಟ್ಟರು. ಇನ್ನೂ 8 ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮೂಲ ಭೂತ ಸೌಕರ್ಯಗಳಲ್ಲಿ ಬದಲಾವಣೆಯಾಗಿದ್ದು, ಅದರ ಲಾಭವನ್ನು ಕರ್ನಾಟಕ ಪಡೆದುಕೊಂಢಿದೆ. 30 ಲಕ್ಷ ಹೆಚ್ಚು ಬಡತನ ಕುಟುಂಬಕ್ಕೆ ಆಯ್ಮುಶಾನ್‌ ಕಾರ್ಡ್‌ ನೀಡಲಾಗಿದೆ. ಇದಲ್ಲದೇ 30 ಲಕ್ಷಕ್ಕೂ ಅಧಿಕ ಮಂದಿಗೆ ಕುಡಿಯುವ ನೀರಿನ ಸೌಲಭ್ಯವನ್ನು ನೀಡಲಾಗಿದೆ ಅಂತ ಹೇಳಿದರು. ಇನ್ನೂ ರೈತರು, ಮೀನುಗಾರರು, ಸಣ್ಣಪುಟ್ಟ ವ್ಯಾಪಾರಿಗಳು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ ಅಂತ ತಿಳಿಸಿದರು. 21 ನೇ ಶತಮಾನದಲ್ಲಿ, ಭಾರತವು ‘ಹಸಿರು ಬೆಳವಣಿಗೆ’ಯ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತಿದೆ. ಕರ್ನಾಟಕದ ಸಂಸ್ಕರಣಾಗಾರಗಳಲ್ಲಿ ಬಳಸಲಾಗುವ ತಂತ್ರಜ್ಞಾನವು ಈ ಉದ್ದೇಶದೊಂದಿಗೆ ಸಿಂಕ್ ಆಗಿದೆ. ಅಮೃತ್ ಕಾಲ್ ಸಮಯದಲ್ಲಿ, ಭಾರತವು ಹಸಿರು ಬೆಳವಣಿಗೆ ಮತ್ತು ಹಸಿರು ಉದ್ಯೋಗಗಳ ಮನಸ್ಥಿತಿಯೊಂದಿಗೆ ಮುಂದುವರಿಯುತ್ತಿದೆ ಅಂದ್ರು.

ಇಂದಿನ ಭಾರತವು ಅತ್ಯಾಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಯತ್ತ ಗಮನ ಹರಿಸಿದೆ, ಏಕೆಂದರೆ ಇದು ಅಭಿವೃದ್ಧಿ ಹೊಂದಿದ ಭಾರತದ ಮಾರ್ಗವಾಗಿದೆ. ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ನಾವು ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸಬಹುದು. ಇದೇ ವೇಳೆ ಆಯುಷ್ಮಾನ್ ಭಾರತ್ ಬಡವರು ಗುಣಮಟ್ಟದ ಆರೋಗ್ಯ ಆರೈಕೆಯನ್ನು ಹೊಂದಲು ಸಾಧ್ಯವಾಗುತ್ತದೆ ಮತ್ತು ಅವರ ಕುಟುಂಬಗಳು ವೈದ್ಯಕೀಯ ವೆಚ್ಚಗಳಿಂದಾಗಿ ಸಾಲದ ಸುಳಿಗೆ ಸಿಲುಕುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿಶ್ವದ ಅತಿದೊಡ್ಡ ವಿಮಾ ಯೋಜನೆಯೊಂದಿಗೆ, ನಾವು ಆರೋಗ್ಯ ರಕ್ಷಣೆಯನ್ನು ಕೆಳ ಹಂತಕ್ಕೂ ಕೂಡ ತೆಗೆದು ಹೋಗಲಿದೆ ಅಂತ ತಿಳಿಸಿದರು

Leave A Reply

Your email address will not be published.