ಅಧಿಕಾರದ ವ್ಯಸನಿ ಅರವಿಂದ್ ಕೇಜ್ರಿವಾಲ್ ಗೆ ಸ್ಫೋಟಕ ಪತ್ರ ಬರೆದು ‘ ಪವರ್ ಡ್ರಂಕ್ ‘ ಎಂದ ಅಣ್ಣಾ ಹಜಾರೆ ! ಗಾಂಧಿವಾದಿ ಹೋರಾಟಗಾರನ ಕೋಪಕ್ಕೆ ಅಂತ್ಯವಾಗುತ್ತಾ ಆಪ್ ?

ನವದೆಹಲಿ: ದೆಹಲಿ: ಮದ್ಯದಂತೆಯೇ ಅಧಿಕಾರ ಕೂಡ ಅಮಲೇರಿಸುತ್ತದೆ. ನೀವು ಅಧಿಕಾರದ ನಶೆಯಲ್ಲಿದ್ದೀರಿ ಎಂದು ತೋರುತ್ತದೆ. ಅಲ್ಲದೆ ‘ಪವರ್ ಡ್ರಂಕ್’ ಎಂದು ದೆಹಲಿಯ ಅಬಕಾರಿ ನೀತಿಯಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಪತ್ರ ಬರೆದಿದ್ದಾರೆ.

ಈ ಪತ್ರದಲ್ಲಿ ಅಣ್ಣಾ ಹಜಾರೆ ಮದ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಅದರ ಸಲಹೆಗಳನ್ನು ನೀಡಿದ್ದಾರೆ. ತಮ್ಮ ಎರಡು ಪುಟಗಳ ಭಾವುಕ ಪತ್ರದಲ್ಲಿ ಅಣ್ಣಾ ಹಜಾರೆ ತಮ್ಮ ಚಳುವಳಿ, ಅಂದಿನ ಅರವಿಂದ್‌ ಕೇಜ್ರಿವಾಲ್‌ ಅವರಲ್ಲಿದ್ದ ರಾಜಕೀಯ ಉದ್ದೇಶಗಳು, ಆಪ್‌ ಪಕ್ಷ ಇವೆಲ್ಲವುಗಳು ಬಗ್ಗೆ ಮಾತನಾಡಿದ್ದಾರೆ.

ನೀವು ಮುಖ್ಯಮಂತ್ರಿಯಾದ ನಂತರ ನಾನು ನಿಮಗೆ ಮೊದಲ ಬಾರಿಗೆ ಪತ್ರ ಬರೆಯುತ್ತಿದ್ದೇನೆ, ಏಕೆಂದರೆ ನಿಮ್ಮ ಸರ್ಕಾರದ ಮದ್ಯ ನೀತಿಯ ಬಗ್ಗೆ ಇತ್ತೀಚಿನ ಸುದ್ದಿ ವರದಿಗಳಿಂದ ನನಗೆ ನೋವಾಗಿದೆ ಎಂದು ಪತ್ರ ಆರಂಭವಾಗುತ್ತದೆ. ನಿಮ್ಮ ‘ಸ್ವರಾಜ್’ ಪುಸ್ತಕದಲ್ಲಿ ಅಬಕಾರಿ ನೀತಿಗಳ ಬಗ್ಗೆ ಆದರ್ಶಪ್ರಾಯವಾದ ವಿಷಯಗಳನ್ನು ಬರೆದಿದ್ದೀರಿ, ಅದಕ್ಕೆ ನನಗೆ ಪರಿಚಯವನ್ನು ಬರೆಯುವಂತೆ ಮಾಡಿದ್ದೀರಿ ಎಂದ ಅಣ್ಣಾ, ಪ್ರದೇಶದ ನಿವಾಸಿಗಳ ಒಪ್ಪಿಗೆಯಿಲ್ಲದೆ ಯಾವುದೇ ಮದ್ಯದ ಅಂಗಡಿಗಳನ್ನು ತೆರೆಯಬೇಡಿ. ಮುಖ್ಯಮಂತ್ರಿಯಾದ ನಂತರ ನೀವು ಆ ಆದರ್ಶಗಳನ್ನು ಮರೆತಿದ್ದೀರಿ ಎಂದಿದ್ದಾರೆ.

ಈ ರೀತಿಯ ಸಾರ್ವಜನಿಕ ಶಿಕ್ಷಣವು ಜನಜಾಗೃತಿಯ ಕೆಲಸವಾಗಿದ್ದರೆ, ದೇಶದಲ್ಲಿ ಇಂತಹ ತಪ್ಪು ಮದ್ಯಪಾನ ನೀತಿಯನ್ನು ಎಲ್ಲಿಯೂ ಮಾಡುತ್ತಿರಲಿಲ್ಲ. ಸರ್ಕಾರವು ಯಾವ ಪಕ್ಷಕ್ಕೆ ಸೇರಿದ್ದರೂ, ಸಾವರ್ಜನಿಕ ಹಿತಾಸಕ್ತಿಯಲ್ಲಿ ಕೆಲಸ ಮಾಡಿ ಎಂದು ಹೇಳಲು ಸಮಾನ ಮನಸ್ಕರ ತಂಡವೊಂದು ಇದ್ದಿದ್ದರೆ ಇಂಥ ಸ್ಥಿತಿಗಳು ಆಗುತ್ತಿರಲಿಲ್ಲ. ಖಂಡಿತವಾಗಿ ಇಂದು ದೇಶದ ಪರಿಸ್ಥಿತಿ ಬೇರೆಯಾಗುತ್ತಿತ್ತು ಮತ್ತು ಬಡವರಿಗೆ ಪ್ರಯೋಜನವಾಗುತ್ತಿತ್ತು. ಆದರೆ ದುರದೃಷ್ಟವಶಾತ್ ಅದು ಆಗಲಿಲ್ಲ ಎಂದಿದ್ದಾರೆ.

2012 ರಲ್ಲಿ ಇಂಡಿಯಾ ಎಗೇನ್ಸ್ಟ್ ಕರಪ್ಷನ್ ಆಂದೋಲನದ ಸಂದರ್ಭದಲ್ಲಿ ತಮ್ಮ ಒಡನಾಡಿಯಾಗಿದ್ದ ಕೇಜ್ರಿವಾಲ್ ಅವರಿಗೆ ಬರೆದ ಪತ್ರದಲ್ಲಿ, ಭ್ರಷ್ಟಾಚಾರ ವಿರೋಧಿ ಆಂದೋಲನದ ಪರಿಣಾಮವಾಗಿ ಆಮ್ ಆದ್ಮಿ ಪಕ್ಷವು ಇತರ ಪಕ್ಷಗಳ ಮಾರ್ಗವನ್ನು ಅನುಸರಿಸಲು ಪ್ರಾರಂಭಿಸಿದೆ ಎಂದು ಹಜಾರೆ ತಿಳಿಸಿದ್ದಾರೆ. “ಮದ್ಯದ ನಶೆಯಲ್ಲಿರುವಂತೆಯೇ, ಅದೇ ರೀತಿಯಲ್ಲಿ, ಅಧಿಕಾರದ ನಶೆಯೂ ಇದೆ. ಅಂತಹ ಶಕ್ತಿಯ ನಶೆಯಲ್ಲಿ ನೀವೂ ಮುಳುಗಿದ್ದೀರಿ” ಎಂದು ಅವರು ಹೇಳಿದರು.

ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಐತಿಹಾಸಿಕ ಮತ್ತು ಲೋಕಾಯುಕ್ತ ಚಳವಳಿ ನಡೆದಿತ್ತು ಎಂದು ಅಣ್ಣಾ ಹಜಾರೆ ಹೇಳಿದರು. ಅದರಲ್ಲಿ ಲಕ್ಷಾಂತರ ಜನ ಬಂದಿದ್ದರು. ಆಗ ಲೋಕಾಯುಕ್ತದ ಅಗತ್ಯದ ಬಗ್ಗೆ ವೇದಿಕೆಯಿಂದ ದೊಡ್ಡ ದೊಡ್ಡ ಭಾಷಣಗಳನ್ನು ಮಾಡಿದ್ದೀರಿ. ಆದರ್ಶ ರಾಜಕೀಯ ಮತ್ತು ಸುವ್ಯವಸ್ಥೆಯ ಬಗ್ಗೆ ಆಲೋಚನೆಗಳನ್ನು ಹೊಂದಿದ್ದರು. ಆದರೆ ದೆಹಲಿ ಸಿಎಂ ಆದ ನಂತರ ಲೋಕಪಾಲ ಮತ್ತು ಲೋಕಾಯುಕ್ತ ಕಾನೂನನ್ನು ಮರೆತಿದ್ದೀರಿ. ನಿಮ್ಮ ಸರ್ಕಾರ ಮಹಿಳೆಯರ ಮೇಲೆ ಪರಿಣಾಮ ಬೀರುವ, ಜನರ ಜೀವನ ಹಾಳು ಮಾಡುವ ಮದ್ಯ ನೀತಿ ಮಾಡಿದೆ. ನಿಮ್ಮ ಮಾತುಗಳು ಮತ್ತು ಕ್ರಿಯೆಗಳ ನಡುವೆ ವ್ಯತ್ಯಾಸವಿದೆ ಎಂದು ಇದು ತೋರಿಸುತ್ತದೆ ಎಂದು ಹೇಳಿದರು.

Leave A Reply

Your email address will not be published.