ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ | ಬಿಜೆಪಿ ಶಾಸಕ ಅಮಾನತು

ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ಆರೋಪದ ಮೇಲೆ ಹೈದರಾಬಾದ್ ನಗರದ ಗೋಶಾಮಹಲ್ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರನ್ನು ಮಂಗಳವಾರ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಟಿ ರಾಜಾ ಸಿಂಗ್ ಹೈದರಾಬಾದ್‌ನ ಗೋಶಾಮಹಲ್‌ ಶಾಸಕರು. ಸಿಂಗ್ ಅವು ಹೇಳಿಕೆಗಳ ವಿರುದ್ಧ ಮಂಗಳವಾರ ಮುಂಜಾನೆ ನಗರದಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು.

ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ವಿಡಿಯೋವೊಂದನ್ನು ಸ್ವತಃ ರಾಜಾ ಸಿಂಗ್ ಬಿಡುಗಡೆ ಮಾಡಿದ ಬಳಿಕ ಸೋಮವಾರ ರಾತ್ರಿ ಹೈದರಾಬಾದ್‌ನ ನಗರ ಪೊಲೀಸ್ ಆಯುಕ್ತ ಸಿವಿ ಆನಂದ್ ಅವರ ಕಚೇರಿಯ ಮುಂಭಾಗ ಹಾಗೂ ಇತರೆ ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು.

ರಾಜಾ ಸಿಂಗ್ ಅವರು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದರು.

ಇದರ ಬೆನ್ನಲ್ಲೇ ಶಾಸಕನನ್ನು ಅವರನ್ನು ಬಂಧಿಸಲಾಗಿತ್ತು.
ನಂತರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 (ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳವನ್ನು ಗಾಯಗೊಳಿಸುವುದು ಅಥವಾ ಅಪವಿತ್ರಗೊಳಿಸುವುದು) ಮತ್ತು 505 (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ಅವರನ್ನು ಬಂಧಿಸಲಾಯಿತು.

ಹತ್ತು ನಿಮಿಷಗಳ ವಿಡಿಯೋ ಬಿಡುಗಡೆ ಮಾಡಿದ್ದ ಸಿಂಗ್ ಅವರು, ಅದರಲ್ಲಿ ಪ್ರವಾದಿ ಮಹಮ್ಮದ್ ಅವರ ಬಗ್ಗೆ ಅವಹೇಳನಾಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಲಾಗಿದೆ. ಮುನಾವರ್ ಫರೂಖಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಜಾ ಸಿಂಗ್, ಹಿಂದೂ ದೇವತೆಗಳ ಕುರಿತಾಗಿ ಫರೂಖಿ ಮಾಡುವ ವಿಡಿಯೋಗಳಂತೆಯೇ ತಮ್ಮದೂ ಕೂಡ ‘ಕಾಮಿಡಿ ವಿಡಿಯೋ’ ಎಂದು ಹೇಳಿಕೊಂಡಿದ್ದರು.

“ನಿಮ್ಮನ್ನು ಪಕ್ಷದಿಂದ ಏಕೆ ಹೊರಹಾಕಬಾರದು ಎಂಬುದಕ್ಕೆ ದಯವಿಟ್ಟು ಈ ಸೂಚನೆ ಹೊರಡಿಸಿದ ದಿನಾಂಕದಿಂದ 10 ದಿನಗಳ ಒಳಗಾಗಿ ಕಾರಣವನ್ನು ನೀಡಿ. ನಿಮ್ಮ ವಿವರವಾದ ಉತ್ತರವು ಸೆಪ್ಟೆಂಬರ್ 2, 2022 ರೊಳಗೆ ಕೆಳಗೆ ಸಹಿ ಮಾಡಿದವರಿಗೆ ತಲುಪಬೇಕು” ಎಂದು ಪಕ್ಷವು ಹೇಳಿದೆ.

Leave A Reply

Your email address will not be published.