ವಿಟ್ಲ : ಹಠಾತ್ ಕುಸಿದು ಬಿದ್ದು ವ್ಯಕ್ತಿ ಸಾವು!

ವಿಟ್ಲ: ರಿಕ್ಷಾ ಪಾರ್ಕಿಂಗ್ ಬಳಿ ವ್ಯಕ್ತಿಯೋರ್ವರು ಹಠಾತ್ ಕುಸಿದು ಬಿದ್ದು ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಮೂಲತಃ ವಿಟ್ಲ ಅಡ್ಯನಡ್ಕ ನಿವಾಸಿ ಸದ್ಯ ಸಾಲೆತ್ತೂರು ನಲ್ಲಿ ವಾಸವಿರುವ ಮೊಯ್ದಿನ್ ಎಂದು ಗುರುತಿಸಲಾಗಿದೆ.

ವಿಟ್ಲ ಖಾಸಗಿ ಬಸ್ ನಿಲ್ದಾಣದ ರಿಕ್ಷಾ ಪಾರ್ಕಿಂಗ್ ಬಳಿ ವ್ಯಕ್ತಿಯೋರ್ವರು ಹಠಾತ್ ಕುಸಿದು ಬಿದ್ದಿದ್ದಾರೆ. ಈ ವೇಳೆ ತಲೆಗೆ ಗಂಭೀರ ಗಾಯವಾದ ಪರಿಣಾಮ ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.