PG NEET ಸೀಟು ಹಂಚಿಕೆ | ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪಿಜಿ ನೀಟ್-2022ರ ಅಖಿಲ ಭಾರತೀಯ ಕೋಟಾ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕಾಮೆಡ್-ಕೆ ಪ್ರಕಟಿಸಿದೆ.

ಮೊದಲನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆ.30ರಿಂದ ಸೆ.13ರವರೆಗೆ, 2ನೇ ಸುತ್ತಿನ ಸೀಟು ಹಂಚಿಕೆ ಸೆ.17ರಿಂದ ಅ.1ರವರೆಗೆ ಮತ್ತು ಮಾಪ್‌ಅಪ್ ಸುತ್ತಿನ ಹಂಚಿಕೆ ಅ.4ರಿಂದ 18ರವರೆಗೆ ನಡೆಯಲಿದೆ ಎಂದು ತಿಳಿಸಿದೆ.

ಮೊದಲನೇ ಸುತ್ತಿನಲ್ಲಿ ಆ.30ರಂದು ಕಾಲೇಜುಗಳ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಮಾಡಲಾಗುತ್ತದೆ. ಸೆ.1ರಿಂದ 4ರ ವರೆಗೆ ನೋಂದಣಿ, ಸೆ.2ರಿಂದ 5ರವರ ಸೀಟುಗಳ ಆಯ್ಕೆ, ಸೆ.5ರಂದು ಸಂಬಂಧಪಟ್ಟ ವಿಶ್ವವಿದ್ಯಾಲಯ/ಶಿಕ್ಷಣ ಸಂಸ್ಥೆಗಳಿಂದ ಪರಿಶೀಲನೆ, ಸೆ.6-7ರಂದು ಸೀಟು ಹಂಚಿಕೆ ಪ್ರಕ್ರಿಯೆ, ಸೆ.8ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ ಮತ್ತು ಸೆ.9ರಿಂದ 13ರೊಳಗೆ ಕಾಲೇಜಿಗೆ ಪ್ರವೇಶ ಪಡೆದುಕೊಳ್ಳಲು ಸಮಯ ನೀಡಿದೆ.

ಅದೇ ರೀತಿ 2ನೇ ಸುತ್ತಿನ ಪ್ರಕ್ರಿಯೆ ಸೆ.17-18ರಂದು ಸೀಟು ಮ್ಯಾಟ್ರಿಕ್ಸ್ ಬಿಡುಗಡೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಸೆ.19ರಿಂದ 21ರವರೆಗೆ ನೋಂದಣಿ, 22ರವರೆಗೆ ಸೀಟು ಆಯ್ಕೆ, ಸೆ.23 ಮತ್ತು 24ರಂದು ಸೀಟು ಹಂಚಿಕೆ ಪ್ರಕ್ರಿಯೆ, ಸೆ.25ರಂದು ಫಲಿತಾಂಶ ಪ್ರಕಟವಾಗಲಿದ್ದು, ಸೆ.26ರಿಂದ ಅ.1ರ ವರೆಗೆ ಕಾಲೇಜು ಪ್ರವೇಶ ಪಡೆದುಕೊಳ್ಳಲು ಸಮಯ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Leave A Reply

Your email address will not be published.