CET Exam 2024: ಕೆಮಿಸ್ಟ್ರಿಯಲ್ಲಿ ಡಿಲೀಟ್ ಮಾಡಿದ ಪಠ್ಯದಿಂದ 22 ಪ್ರಶ್ನೆಗಳು, ಶಿಕ್ಷಣ ಇಲಾಖೆಯ ರಣಘೋರ ಅಪರಾಧ, ವ್ಯಾಪಕ ಆಕ್ರೋಶ !

 

CET Exam 2024: ನಿನ್ನೆ ರಾಜ್ಯಾದ್ಯಂತ ಆರಂಭಗೊಂಡ ಸಿಇಟಿ-2024 (CET Exam 2024) ಪರೀಕ್ಷೆ ಇಂದು ಕೂಡಾ ಮುಂದುವರೆದು ಇದೀಗ ಮುಕ್ತಾಯಗೊಂಡಿದೆ. CET ಪರೀಕ್ಷೆಯ ಮೊದಲ ದಿನವೇ ವಿದ್ಯಾರ್ಥಿಗಳ ಟೆನ್ಶನ್ ಹೆಚ್ಚಿಸಿತ್ತು ಶಿಕ್ಷಣ ಇಲಾಖೆ. ನಿನ್ನೆ ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆ ನಡೆದಿದ್ದು ಎರಡೂ ಪ್ರಶ್ನೆ ಪತ್ರಿಕೆಗಳಲ್ಲಿ ಪಠ್ಯದಲ್ಲಿ ಡಿಲೀಟ್ ಮಾಡಲಾದ ವಿಷಯಗಳ 10 ಅಂಕಗಳ ಪ್ರಶ್ನೆಗಳು ಬಂದಿದ್ದು ವಿದ್ಯಾರ್ಥಿಗಳು ಗಾಬರಿಯಾಗಿದ್ದರು. ಇವತ್ತು ಕೂಡಾ ಡಿಲೀಟ್ ಮಾಡಲಾದ ಪಾಠದಿಂದ ಪ್ರಶ್ನೆಗಳನ್ನು ಆಯ್ಕೆ ಮಾಡಲಾಗಿದ್ದು ವಿದ್ಯಾರ್ಥಿಗಳು ಮತ್ತಷ್ಟು ಗಲಿಬಿಲಿಗೊಂಡಿದ್ದಾರೆ. ಇಂದು ಸಂಜೆ ನಡೆದ 60 ಮಾರ್ಕಿನ ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆಯೊಂದರಲ್ಲೇ ಬರೋಬ್ಬರಿ 22 ಪ್ರಶ್ನೆಗಳು ಡಿಲೀಟ್ ಮಾಡಲಾದ ಪಠ್ಯದಿಂದ ಆಯ್ಕೆ ಮಾಡಲಾದ ಪ್ರಶ್ನೆಗಳು ಬಂದಿದ್ದು ವಿದ್ಯಾರ್ಥಿ ಮತ್ತು ಪೋಷಕರನ್ನು ಆಕ್ರೋಶಗೊಳ್ಳುವಂತೆ ಮಾಡಿದೆ. ಈ ಮಧ್ಯೆ ಅದರ ಜೊತೆಗೆ ಸಿಇಟಿ ಕೀ ಆನ್ಸರ್ ನತ್ತ ವಿದ್ಯಾರ್ಥಿಗಳ ಮತ್ತು ಪೋಷಕರ ದೃಷ್ಟಿ ಹೊರಳಿದೆ.

ಇದನ್ನೂ ಓದಿ: Mysore: ಮೋದಿ ಪರ ಹಾಡು ಬರೆದಿದ್ದಕ್ಕೆ ಯುವಕನ ಮೇಲೆ ಮುಸ್ಲಿಂ ಯುವಕರಿಂದ ಬಟ್ಟೆ ಹರಿದು ಹಲ್ಲೆ

ಇಂದು ಶುಕ್ರವಾರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ ನಡೆದಿದ್ದು ಭೌತಶಾಸ್ತ್ರ ವಿಷಯದಲ್ಲಿ ಡಿಲೀಟ್ ಮಾಡಲಾದ ಪಠ್ಯದಿಂದ ಆಯ್ದ ಪ್ರಶ್ನೆಗಳು ಬಂದಿವೆ. ನಿನ್ನೆ ಶಿಕ್ಷಣ ಇಲಾಖೆಯ ಮುಖ್ಯಸ್ಥರು ಪ್ರತಿಕ್ರಿಯೆ ನೀಡಿ ಕೀ ಆನ್ಸರ್ ಬಂದ ನಂತರ ಅಬ್ಜೆಕ್ಷನ್ ಸಲ್ಲಿಸಬಹುದು ಎಂದಿದ್ದರು. ಅದೇನೇ ಇರಲಿ, 60 ಪ್ರಶ್ನೆಗಳಲ್ಲಿ 22 ಅಂದರೆ 37% ಪಠ್ಯವನ್ನು ಡಿಲೀಟ್ ಮಾಡಲಾದ ಪಠ್ಯದಿಂದ ಆಯ್ಕೆ ಮಾಡಿದ್ದಾರೆ ಎನ್ನುವುದಾದರೆ ಇದು ಯಾವ ರೀತಿಯ ಶಿಕ್ಷಣ ಇಲಾಖೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಈ ಪರೀಕ್ಷಾ ಒತ್ತಡದ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿದೆ ಶಿಕ್ಷಣ ಇಲಾಖೆ. ಅದೇನೇ ಇರಲಿ, ಈಗ ಸೆಟ್ ಆನ್ಸರ್ ಕೀ ಯಾವಾಗ ಸಿಗುತ್ತೆ ಯಾವಾಗ ಬರುತ್ತೆ ಎಂದು ಪೋಷಕರು ಮತ್ತು ವಿದ್ಯಾರ್ಥಿಗಳು ಕಾದು ಕುಳಿತುಕೊಳ್ಳುವಂತಾಗಿದೆ.

ವಿವಿಧ ಕೋರ್ಸ್‌ಗಳಲ್ಲಿ ತಮ್ಮ ನಿರೀಕ್ಷಿತ ಸೀಟುಗಳನ್ನು ನಿರ್ಧರಿಸಲು ಅಭ್ಯರ್ಥಿಗಳು KCET ಉತ್ತರ ಕೀ 2024 ಅನ್ನು ಪಡೆಯಬಹುದು. ಎಲ್ಲಾ ಕೋರ್ಸ್‌ಗಳ ಶ್ರೇಯಾಂಕವನ್ನು KCET ಉತ್ತರ ಕೀ 2024 ಮತ್ತು ಅಭ್ಯರ್ಥಿಗಳು ತಮ್ಮ ಉತ್ತರಗಳು ಮತ್ತು ಸಂದೇಹಗಳನ್ನು ಉತ್ತರದ ಕೀಲಿಯ ಸಹಾಯದಿಂದ ಪರಿಶೀಲಿಸಬಹುದು. KCET 2024 ಉತ್ತರ ಕೀಯು KEA ಅಧಿಕೃತ ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲೇ ಹೊರಬರಲಿದೆ. KCET 2024 ಫಲಿತಾಂಶಗಳು ಮೇ ಮೊದಲ ವಾರದಲ್ಲಿ ಅಥವಾ ಮೇ 10 ರ ಮೊದಲು ಹೊರಬರಬಹುದು ಎಂದು ನಿರೀಕ್ಷಿಸಲಾಗಿದೆ. ನಿಮ್ಮ 2nd PUC ಅಂಕಗಳು 50% ಮತ್ತು KCET ಶ್ರೇಣಿಯ 50%ಮಾರ್ಕುಗಳು ಸೇರಿ CET ಸೀಟು ಸೆಲೆಕ್ಷನ್ ಮಾಡಲಾಗುತ್ತದೆ ಎಂಬುದನ್ನು ನಾವು ಇಲ್ಲಿ ಗಮನಿಸುವುದು ಮುಖ್ಯವಾಗಿದೆ.

Leave A Reply

Your email address will not be published.