ನವದೆಹಲಿ: ಕುಡಿತದ ಚಟ ಹೊಂದಿದ್ದ ಮಗ ಪದೇ ಪದೇ ಹಣ ಕೇಳುತ್ತಿದ್ದರಿಂದ ಕೋಪಗೊಂಡ ಅಪ್ಪ, ಶೂಟ್ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದ ಘಟನೆ ನಡೆದಿದ್ದು, ಆರೋಪಿ ತಂದೆಯನ್ನು ಪೊಲೀಸರು ವಶಪಡಿಸಿದ್ದಾರೆ.
ಬಂಧಿತ ಆರೋಪಿಯಾದ ತಂದೆ ಗುಜರಾತ್ ನ ಅಹ್ಮದಾಬಾದ್ ನಿವಾಸಿ ನೀಲೇಶ್ ಜೋಶಿ(65), ಈತನ ಪುತ್ರ ಸ್ವಯಂ ಜೋಶಿ(21) ಯನ್ನು ಕೊಲೆ ಮಾಡಿದ್ದಾನೆ.
ಮಾದಕ ವ್ಯಸನಿಯಾಗಿದ್ದ ಸ್ವಯಂ ಜೋಶಿ ಮದ್ಯ ಸೇವಿಸಲು ಹಣ ಕೊಡುವಂತೆ ಪೀಡಿಸಿದಾಗ ಕೋಪಗೊಂಡ ತಂದೆ, ಮಗನೆಂದು ನೋಡದೆ, ರುಬ್ಬು ಗುಂಡಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲಿಸದೇ, ಎಲೆಕ್ಟ್ರಿಕ್ ಕಟರ್ ನಿಂದ ತುಂಡಾಗಿ ದೇಹವನ್ನು ಕತ್ತರಿಸಿ ಚೀಲದಲ್ಲಿ ತುಂಬಿ ಬೇರೆ ಬೇರೆ ದಿಕ್ಕುಗಳಲ್ಲಿ ಎಸೆದು ಬಂದಿದ್ದಾನೆ.
ಬಳಿಕ ನೇಪಾಳಕ್ಕೆ ಪರಾರಿಯಾಗಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನೀಲೇಶ್ ನನ್ನು ರಾಜಸ್ಥಾನದ ಗಡಿ ಭಾಗದಲ್ಲಿ ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.
ನೀಲೇಶ್ ಜೋಶಿ ಟ್ರಾಫಿಕ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಅವರ ಪುತ್ರಿ ಮತ್ತು ಪತ್ನಿ ಜರ್ಮನಿಯಲ್ಲಿ ವಾಸವಾಗಿದ್ದು, ಪುತ್ರ ಡ್ರಗ್ ವ್ಯಸನಿಯಾಗಿದ್ದ ಕಾರಣ ನೀಲೇಶ್ ಅಹಮದಾಬಾದ್ ನಲ್ಲಿದ್ದರು. ಇದೀಗ ತಂದೆಯ ಕೋಪ ಆತನ ಜೀವವನ್ನೇ ಬಲಿ ಪಡೆದಿದೆ.
You must log in to post a comment.