ಮಂಗಳೂರು: ಪಬ್ ಪಾರ್ಟಿ ಗೆ ಬ್ರೇಕ್ ಪ್ರಕರಣ!! ಯಾವುದೇ ಹಲ್ಲೆ-ಅಕ್ರಮ ಪ್ರವೇಶ ನಡೆದಿಲ್ಲ..ಕಮಿಷನರ್ ಎನ್ ಶಶಿಕುಮಾರ್

ಮಂಗಳೂರು: ನಗರದಲ್ಲಿ ನಿನ್ನೆ ಪಬ್‌ ಮೇಲೆ ಬಜರಂಗದಳ ದಾಳಿ ವಿಚಾರದ ಕುರಿತು ಮಂಗಳೂರು ನಗರ ಪೊಲೀಸ್‌ ಕಮೀಷನರ್ ಶಶಿಕುಮಾರ್ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ನಗರದಲ್ಲಿ ಯಾವುದೇ ಪಬ್ ಅಟ್ಯಾಕ್ ಆಗಿಲ್ಲ. ಬಲ್ಮಠದ ಪಬ್ ಮುಂದೆ ನಿನ್ನೆ ರಾತ್ರಿ ಹತ್ತು-ಹನ್ನೆರೆಡು ಮಂದಿ ಜಮಾಯಿಸಿದ್ದರು.

ಅಪ್ರಾಪ್ತರು ಪಬ್ ಒಳಗಡೆ ಮದ್ಯ ಸೇವನೆ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹಾಗಾಗಿ ಸಂಘಟನೆಯೊಂದಕ್ಕೆ ಸೇರಿದ ಯುವಕರು ಬೌನ್ಸರ್ ಜೊತೆ ಮಾತನಾಡಿದ್ದಾರೆ. ನಂತರ ಬೌನ್ಸರ್ ಪಬ್ ಮ್ಯಾನೇಜರ್ ಜೊತೆ ಮಾತನಾಡಿ ಪಬ್ ಒಳಗಿದ್ದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದಾನೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಯಾವುದೇ ದೈಹಿಕ ಹಲ್ಲೆಗಳು ನಡೆದಿಲ್ಲ. ಪಬ್ ಒಳಗೆ ಯಾರೂ ಪ್ರವೇಶ ಮಾಡಿಲ್ಲ. ನಿನ್ನೆ ನಡೆದ ಘಟನೆ ಗೂ ಕಿಸ್ ಪಂದ್ಯ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಈ ಬಗ್ಗೆ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ

Leave A Reply