ಲೈಂಗಿಕ ಶಕ್ತಿಗಾಗಿ ಕಾಫಿ ಸೇವಿಸಿದ ವ್ಯಕ್ತಿ ಆಸ್ಪತ್ರೆಗೆ ದಾಖಲು | ಏನಿದು ಕಾಫಿ ? ಇದರ ಅಡ್ಡಪರಿಣಾಮದ ಲಿಸ್ಟ್ ಇಲ್ಲಿದೆ!!!

ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೆಲವರಿಗೆ ಸಂಪೂರ್ಣವಾಗಿ ಆಗುವುದಿಲ್ಲ. ಅದಕ್ಕಾಗಿಯೇ ಈ ನಿಮಿರುವಿಕೆಯ ಸಮಸ್ಯೆಗೊಳಗಾದವರು ಕೆಲವೊಂದು ಮಾತ್ರೆ, ಡಾಕ್ಟರ್ ಭೇಟಿಯಾಗಿ ಸಮಾಲೋಚನೆ ಮಾಡುವುದು ಇದನ್ನೆಲ್ಲಾ ಮಾಡುತ್ತಾರೆ.

ಆದರೆ ಇಲ್ಲೊಬ್ಬ ವ್ಯಕ್ತಿ ಯಾವುದೇ ರೀತಿಯ ಡಾಕ್ಟರ್ ನ ಉಪದೇಶ ತಗೊಳ್ಳದೇ ತಗೊಂಡ ಒಂದು ಕೆಲಸ ಈಗ ಆತ ಆಸ್ಪತ್ರೆಗೆ ದಾಖಲಿಸುವಂತೆ ಮಾಡಿದೆ. ಹೌದು. ನಿಮಿರಿವಿಕೆಯ ಸಮಸ್ಯೆ ಇರುವ ವ್ಯಕ್ತಿಯೊಬ್ಬರು, ಇದಕ್ಕೆಂದೇ ಬಳಸುವ ಕೆಲವೊಂದು ಪದಾರ್ಥಗಳನ್ನು ಒಳಗೊಂಡಿರುವ ಕಾಫಿ ಸೇವಿಸಿದ್ದಾರೆ. ಆದರೆ ಅನಂತರ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಸಿಂಗಾಪುರದಲ್ಲಿ ನಡೆದಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ನಿಮಿರುವಿಕೆ ಉತ್ತೇಜಿಸುವ ಔಷಧಿಯನ್ನು ಬೆರೆಸಿದ ಕಾಫಿ ಸೇವಿಸಿದ ವ್ಯಕ್ತಿಗೆ ಜನನಾಂಗದಲ್ಲಿ ತುರಿಕೆ, ನೋವು, ಗುಳ್ಳೆಯಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಇದನ್ನು ಮಾರಾಟ ಮಾಡಲು ಆರೋಗ್ಯಾಧಿಕಾರಿಗಳು ನಿಷೇಧ ಹೇರಿದ್ದರು. ಹಾಗಿದ್ದರೂ ಆನ್ ಲೈನ್ ಮಾರುಕಟ್ಟೆ ಮೂಲಕ ಖರೀದಿಗೆ ಲಭ್ಯವಿತ್ತು.

ಇದೀಗ ಆತನಿಗೆ ಅಲರ್ಜಿ ಕಂಡುಬಂದ ಹಿನ್ನಲೆಯಲ್ಲಿ ಆಂಟಿ ಬಯೋಟಿಕ್ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ಔಷಧಿ ಸೇವಿಸಿದ ಇನ್ನೊಬ್ಬಾತನಿಗೂ ಅಡ್ಡಪರಿಣಾಮವಾಗಿದೆ ಎನ್ನಲಾಗಿದೆ.

ಈ ವ್ಯಕ್ತಿ ಪ್ರೈಮ್ ಕೊಪಿ ಪೆಜುವಾಂಗ್ 3 ಇನ್ 1 ಎಂಬ ಲೈಂಗಿಕ ವರ್ಧಕ ಉತ್ಪನ್ನವನ್ನು ಸೇವಿಸಿದ್ದಾನೆ ಎಂದು ಸಿಂಗಾಪುರದ ಆರೋಗ್ಯ ವಿಜ್ಞಾನ ಪ್ರಾಧಿಕಾರ (ಎಚ್‌ಎಸ್ಎ) ಹೇಳಿದೆ. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಚಿಕಿತ್ಸೆ ನೀಡಲು ಬಳಸಲಾಗುವ ಹೆಚ್ಚಿನ ಮಟ್ಟದ ತಡಾಲಾಫಿಲ್ ಅನ್ನು ಒಳಗೊಂಡಿರುವ ಅಂಶವು ಕಂಡುಬಂದಿದೆ ಎಂದು ಡಾಕ್ಟರ್ ಹೇಳಿದ್ದಾರೆ. ಇದನ್ನು ಸಾಮಾನ್ಯವಾಗಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ನೀಡಲಾಗುತ್ತದೆ.

ಆನ್‌ಲೈನ್ ಮಾರಾಟಗಾರರನ್ನು ತಮ್ಮ ಪಟ್ಟಿಗಳಿಂದ ಉತ್ಪನ್ನಗಳನ್ನು ತೆಗೆದುಹಾಕಲು ಆರೋಗ್ಯ ಅಧಿಕಾರಿಗಳು ಈಗ ಹೇಳಿದ್ದಾರೆಂಬ ಮಾಹಿತಿ ಇದೆ.

ಈ ಕಾಫಿ ಸೇವನೆಯ ಸೇವನೆಯ ಅಡ್ಡ ಪರಿಣಾಮಗಳು ಈ ಕೆಳಗೆ ನೀಡಲಾಗಿದೆ.

ತಡಾಲಾಫಿಲ್ ಸೇವನೆ ಮಾಡಿದರೆ ನೋವು, ತುರಿಕೆ, ಜನನಾಂಗದ ಮೇಲೆ ಗುಳ್ಳೆಗಳು, ಊತ ಕಾಣಿಸಿಕೊಳ್ಳುತ್ತವೆ. ಆ ಔಷಧಿ ಸೇವಿಸಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಗೆ ಈ ಎಲ್ಲಾ ಸಮಸ್ಯೆಗಳು ಕಂಡುಬಂದಿವೆ. ಸದ್ಯ ಆತನಿಗೆ ಊತ ಕಡಿಮೆ ಮಾಡಲು ಆ್ಯಂಟಿಬಯೋಟಿಕ್‌ನಂಥ ಔಷಧಿಗಳನ್ನು ನೀಡಲಾಗಿದೆ.

ತಡಾಲಾಫಿಲ್‌ನ ‘ಅನುಚಿತ’ ಸೇವನೆಯು ಹೃದಯಾಘಾತ, ಪಾರ್ಶ್ವವಾಯು, ಬಡಿತ, ಅನಿಯಮಿತ ಹೃದಯ ಬಡಿತ ಮತ್ತು ಪ್ರಿಯಾಪಿಸಂಗೆ ಕಾರಣವಾಗಬಹುದು. ಈ ಬಗ್ಗೆ ಸಿಂಗಾಪುರದ ಆರೋಗ್ಯ ವಿಜ್ಞಾನ ಪ್ರಾಧಿಕಾರ (ಎಚ್‌ಎಸ್‌) ಎಚ್ಚರಿಸಿದೆ.

ಇದು ಗಂಭೀರವಾದ ನೋವಿನ ಮತ್ತು ದೀರ್ಘಕಾಲದ ನಿಮಿರುವಿಕೆ ಪ್ರಕ್ರಿಯೆಯಾಗಿದೆ ಮತ್ತು ಚಿಕಿತ್ಸೆ ನೀಡದಿದ್ದರೆ ದುರ್ಬಲತೆಗೆ ಕಾರಣವಾಗಬಹುದು.

Leave a Reply

error: Content is protected !!
Scroll to Top
%d bloggers like this: