‘ ನೋಡ್ಲಿಕೆ ಮಾತ್ರ ಅಲ್ಲವಲ್ಲ, ಮುಟ್ಲಿಕೂ ಉಂಟಲ್ಲ ? ‘ |ಹುಡುಗಿ ನೋಡುವ ಕಾರ್ಯಕ್ರಮದಲ್ಲಿ ವರನ ಸಂಬಂಧಿಯ ಹೇಳಿಕೆ ಹುಟ್ಟು ಹಾಕಿತು ಕೋಲಾಹಲ !

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ವರ ಹಾರ ಹಾಕುವಾಗ ಹುಡುಗನ ಕೈ ಟಚ್ ಆಯಿತು ಅಂತ ಹಾರ ಎಸೆದು ಮದುವೆ ಮುರಿದುಕೊಂಡ ವಧು ಎಂಬ ಮ್ಯಾಟರ್ ಮೊನ್ನೆ ನಾವು ಪ್ರಕಟಿಸುತ್ತಿದ್ದ ಹಾಗೆ ಅದು ರಾಜ್ಯಾದ್ಯಂತ ವೈರಲ್ ಆಗಿತ್ತು. ಇದೀಗ ಈ ಮ್ಯಾಟರ್ ನಲ್ಲಿ ಬರುವ ಹುಡುಗಿಯ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇಡೀ ಪ್ರಹಸನವೆ ದೊಡ್ದ ಕಾಮಿಡಿ ಸಬ್ಜೆಕ್ಟ್ ಆಗಿ ಹಲವು ಜೋಕುಗಳಿಗೆ, ಮೀಮ್ಸ್ ಗಳಿಗೆ ಆಹಾರ ಆಗುತ್ತಿದೆ. ಅದರ ಬಗ್ಗೆ ಒಂದಿಷ್ಟು ಸ್ವಾರಸ್ಯಕರವಾದ ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಕಾತುರ ನಮಗೆ.

ಇದರ ಮದ್ಯೆ ವರನೊಬ್ಬನಿಗೆ ಹುಡುಗಿ ನೋಡುವ ಸಂದರ್ಭ ಮನೆಯೊಂದರಲ್ಲಿ ಇದೇ ವಿಷಯಕ್ಕೆ ಜಗಳ ನಡೆದದ್ದು ತಿಳಿದು ಬಂದಿದೆ. ಇದು ಮಂಗಳೂರಿನಿಂದ ವರದಿ ಆಗಿದ್ದು, ವರನ ಕಡೆಯವರು ಹುಡುಗಿಯ ಸಂಪ್ರದಾಯದಂತೆ ಕುಟುಂಬಸ್ಥರನ್ನು ಸೇರಿಸಿಕೊಂಡು ತೆರಳಿದ್ದರು. ಅಲ್ಲಿದ್ದ ವರನ ಚಿಕ್ಕಪ್ಪ ಒಬ್ಬರು ತಮಾಷಿ ಮನುಷ್ಯ. ಅವರು, ‘ ಹುಡುಗಿ ನಮಗೆಲ್ಲ ಓಕೇ, ಆದ್ರೆ, ‘ನೊಡ್ಲಿಕೆ ಮಾತ್ರ ಅಲ್ಲವಲ್ಲ, ಮುಟ್ಲಿಕೆ ಕೂಡಾ ಉಂಟಲ್ಲ ‘ ಅಂತ ಮೊನ್ನೆಯ ಪ್ರಸಂಗವನ್ನು ನೆನಪಿಸಿಕೊಂಡು ಹೇಳಿದ್ದರು. ಈ ಮಾತು ಕೇಳಿದ ಹುಡುಗಿಯ ಮಾವಂದಿರು ಮತ್ತು ಇತರ ಕುಟುಂಬಸ್ಥರು ಗರಂ ಆಗಿದ್ದಾರೆ. ಇನ್ನೂ ಮದುವೆ ಆಗು-ಹೋಗುವುದು ಅಂತ ಆಗಿಲ್ಲ. ಏನೂ ನಮ್ಮ ಹುಡುಗಿನ ಮುಟ್ಬೇಕಾ ಅಂತೆಲ್ಲ ಎಲ್ಲರ ಎದುರೇ ಎಗರಾಡಿದ್ದಾರೆ. ಆಗ ಹುಡುಗಿಯ ಚಿಕ್ಕಪ್ಪನ ಸಹಾಯಕ್ಕೆ ಬಂದದ್ದು, ನಾವು ಅವತ್ತು ಬರೆದು ವೈರಲ್ ಮಾಡಿದ ಪೋಸ್ಟ್.  ಮೊನ್ನೆಯ ನಾರಾವಿಯ ‘ ಟಚ್ ಮೀ ನಾಟ್ ‘ ಪ್ರಕರಣದ ಬಗ್ಗೆ ಅವರಿಗೆ ತೋರಿಸಿದಾಗ ಪ್ರಕರಣ ತಿಳಿಗೊಂಡಿತ್ತು. ನಂತ್ರ ಎಲ್ಲರೂ ಜೋರಾಗಿ ನಗಾಡಿದ್ದರು.

ಅಷ್ಟಕ್ಕೂ ಮೊನ್ನೆ ಏನಾಗಿತ್ತು ?

ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದು ತಾಳಿ ಕಟ್ಟುವ ಶುಭವೇಳೆಗಾಗಲೇ ವಿಚಿತ್ರ ಕಾರಣಗಳಿಗಾಗಿ ಮುರಿದುಬಿದ್ದಿತ್ತು. ಎಲ್ಲಿ ಏನಾಯಿತು ಎಂದು ದಿಕ್ಕಿನತ್ತ ಗಮನಿಸುವಾಗ ಅದು ಬೆಳ್ತಗಡಿಯ ನಾರಾವಿಯತ್ತ ಬೆರಳು ತೋರಿಸುತ್ತಿತ್ತು.

ಅಲ್ಲಿ ಮದುವೆ ಮನೆಯಲ್ಲಿ ಅದ್ಧೂರಿ ಮದುವೆಗೆ ಅತಿಥಿಗಳು, ಹಿತೈಷಿಗಳು ಸೇರಿ ಸುಮಾರು 500 ಕ್ಕೂ ಹೆಚ್ಚು ಮಂದಿಯ ಭೂರೀ ಭೋಜನವೂ ತಯಾರಾಗಿತ್ತು. ಎಲ್ಲವೂ ಸಾಂಗವಾಗಿ ನಡೆದಿತ್ತು. ಆದರೆ ಮದುಮಗ ವಧುವಿನ ಕುತ್ತಿಗೆಗೆ ಇನ್ನೇನು ಹಾರ ಹಾಕಬೇಕಿತ್ತು. ಅದರಂತೆ ಆತ ಹಾರವನ್ನು ಕೈಯಲ್ಲಿ ಎಲ್ಲಿ ಹಾಕುತ್ತಿದ್ದ. ಆಗ ಶುರುವಾಗಿತ್ತು ಜಗಳ. ವರ ಹಾರ ಹಾಕುವಾಗ ವರ ಕೈ ತಾಗಿಸಿದ ಎನ್ನುತ್ತಾ ವಧು ತಗಾದೆ ತೆಗೆದಿದ್ದಾಳೆ. ವರ ಹಾರ ಹಾಕುವಾಗ, ವಧುವಿನ ಕೊರಳಿಗೆ ಮತ್ತು ಕಿವಿಗೆ ವರನ ಕೈ ಟಚ್ ಆಗಿದೆಯಂತೆ. ಅದೇ ಕಾರಣಕ್ಕೆ ವಧು ಸಿಟ್ಟಾಗಿದ್ದಾಳೆ. ಘಟನೆ ಒಟ್ಟಾರೆ ವಿಚಿತ್ರವಾಗಿ ಕಂಡಿದೆ. ನಂತರ ವರನ ಮತ್ತು ವಧುವಿನ ಕಡೆಯವರ ಜಗಳ ಪೊಲೀಸು ಮೆಟ್ಟಲು ಹತ್ತಿ ಇಳಿದು ಕೊನೆಗೆ ಮದುವೆಯೇ ಮುರಿದು ಬಿದ್ದಿತ್ತು.

ಘಟನೆಗೆ ಮೂಲ ಕಾರಣ ವರ ಹಾರ ಹಾಕುವಾಗ ಕೈ ತಾಗಿಸಿದ ಎಂದು. ಬರೇ ಕೈ ತಾಗಿಸಿದ ಅಂದರೆ ಅಪಾರ್ಥಕ್ಕೆ ಆಹಾರ ಆದೀತು. ನಿಜಕ್ಕೂ ಆತ ಎರಡೂ ಕೈಯಲ್ಲಿ ಹಾರ ಹಿಡಿದು ಆಕೆಯ ಕೊರಳಿಗೆ ಹಾಕಲು ಹೋಗಿದ್ದಾನೆ. ಆಗ ಆತನ ಬೆರಳು ಮದುಮಗಳ ಕಿವಿ ಮತ್ತು ಕೊರಳನ್ನು ತಾಕಿದೆಯಂತೆ. ತಾನು ವರಿಸುವ ಹುಡುಗನ ಕೈ ಆಕಸ್ಮತ್ತಾಗಿ ಆಕೆಯ ಕಿವಿ ಸವರಿದರೆ ಅದರಲ್ಲಿ ತಪ್ಪೇನು?  ಮುಂದೆ ಹುಡುಗ ಹುಡುಗಿಯನ್ನು ಮುಟ್ಟಲಿಕ್ಕೆ ಇಲ್ಲವೇ, ಈಗ ಹೀಗಾಡುವವಳು ಮುಂದೆ ಹೇಗೆ ಸಂಸಾರ ನಡೆಸುತ್ತಾಳೆ ? ಮುಂತಾದ ಉತ್ತರವಿಲ್ಲದ ಪ್ರಶ್ನೆಗಳು ಜನರ ತಲೆ ತಿನ್ನಲು ಶುರು ಮಾಡಿವೆ. ಈಗ ಈ ಹುಡುಗಿ ಕರ್ನಾಟಕ ತುಂಬಾ ಫೇಮಸ್ ಆಗಿದ್ದು, ಒಟ್ಟಾರೆ ಪ್ರಹಸನ ಹಾಸ್ಯ ಪ್ರಸಂಗವಾಗಿ ತೆರೆದುಕೊಂಡಿದೆ. ಮದುವೆ ಓಕೆ, ಟಚ್ ಎಲ್ಲ ಯಾಕೆ ? ನೊಡ್ಲಿಕೆ ಮಾತ್ರ, ಮುಟ್ಲಿಕೆ ಇಲ್ಲ ಮುಂತಾದ ಅಸಂಖ್ಯ ಡೈಲಾಗ್ ಗಳು ಪ್ರಚಲಿತಕ್ಕೆ ಬಂದಿವೆ. ಮಂಗಳೂರಿನಲ್ಲಿ ಮೊನ್ನೆ ಅಂತದ್ದೇ ಒಂದು ಡೈಲಾಗ್ ಡೆಲಿವರಿ ಮಾಡಿ ಜಗಳ ಆದದ್ದು. ಇನ್ನು ಮುಂದೆ ಸದಾ ಜೀವಕಳೆಯಿಂದ ನಳನಳಿಸುತ್ತಿರುವ ಮದುವೆ ಮನೆಯಲ್ಲಿ ಸರಾಗವಾಗಿ ಇಂತಹ ಡೈಲಾಗ್ ಗಳು ಸಂಚರಿಸಲಿವೆ. ಮದುವೆ ಕ್ಯಾನ್ಸಲ್ ಮಾಡಿಸಿ, ಮನೆಯವರ ಮನಸ್ಸಿಗೆ ನೋವು ತಂದಿಟ್ಟರೂ, ಆ ಹುಡುಗಿ ಉಳಿದವರ ಪಾಲಿಗೆ ನಗು ಮೂಡಿಸುತ್ತಿದ್ದಾಳೆ.

Leave A Reply