ಗ್ಲಾಮರಸ್ ಲೋಕದಲ್ಲಿ ಸಾವಿನ ಸರಮಾಲೆ | ಗೆಳತಿ ಸಾವಿನಿಂದ ಖಿನ್ನತೆಗೆ ಒಳಗಾಗಿ ಮತ್ತೊಬ್ಬ ಉದಯೋನ್ಮುಖ ಮಾಡೆಲ್ ನೇಣಿಗೆ ಶರಣು |

ಗ್ಲಾಮರಸ್ ಲೋಕದಲ್ಲಿ ಇತ್ತೀಚೆಗೆ ಏನಾಗುತ್ತಿದೆ ಎಂಬ ಊಹೆ ಕೂಡಾ ಮಾಡುವುದು ಕಷ್ಟವಾಗುತ್ತಿದೆ. ಸಾಲು ಸಾಲು ಮಾಡೆಲ್ ಗಳ ಆತ್ಮಹತ್ಯೆ ಪ್ರಕರಣ ನಡೆಯುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬಂಗಾಳಿ ಯುವನಟಿ ಪಲ್ಲವಿ ದೇ ಮೃತದೇಹ ಕೋಲ್ಕತದ ಗರ್ಫಾದಲ್ಲಿರುವ ಆಕೆಯ ಫ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ನಟಿ, ರೂಪದರ್ಶಿ ಬಿದಿಶಾ ಡಿ. ಮಂಜುದಾರ್ ಶವ ಅವರ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ಅದರ ಬೆನ್ನಲ್ಲಿ ಇನ್ನೋರ್ವ ಮಾಡೆಲ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲೇ ಪತ್ತೆಯಾಗಿರುವುದು ಗ್ಲಾಮರಸ್ ಲೋಕ ಕರಾಳ ಮುಖದ ಅನಾವರಣಗೊಳ್ಳುತ್ತಿದೆ ಅಂತಾನೇ ಹೇಳಬಹುದು.

ಜನಪ್ರಿಯ ರೂಪದರ್ಶಿ ಮಂಜುಷಾ ನಿಯೋಗಿ ( ಮೇ. 27) ಅವರು ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ಸೀಲಿಂಗ್‌ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೋಲ್ಕತ್ತಾದ ಪಟುಲಿ ಪ್ರದೇಶದಲ್ಲಿ ಮಂಜುಷಾ ತನ್ನ ಕುಟುಂಬದೊಂದಿಗೆ ಉಳಿದುಕೊಂಡಿದ್ದಳು. ಇದಕ್ಕೂ ಮೊದಲು ಬಿದಿಶಾ ಡಿ ಮಜುಂದಾರ್ ಎಂಬ ರೂಪದರ್ಶಿ ಸಾವಿಗೆ ಶರಣಾಗಿದ್ದರು. ಹೀಗಾಗಿ ಮೂರು ದಿನಗಳ ಅಂತರದಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ತನ್ನ ಆಪ್ತ ಸ್ನೇಹಿತೆ ಬಿದಿಶಾ ಡಿ ಮಜುಂದಾರ್ ಸಾವಿನ ನಂತರ ಮಂಜುಷಾ ನಿಯೋಗಿ ತೀವ್ರ ಖಿನ್ನತೆಗೆ ಒಳಗಾಗಿದ್ದಳು ಎಂದು ಮಂಜುಷಾಳ ತಾಯಿ ಹೇಳಿಕೊಂಡಿದ್ದಾಳೆ. ಬಿದಿಶಾ ಡಿ ಮಜುಂದಾರ್ ಅವರು ಮೇ 26 ರಂದು ಆತ್ಮಹತ್ಯೆ ಮಾಡಿಕೊಂಡರು. ಮಂಜುಷಾ ನಿಯೋಗಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಸಾವಿನ ಕಾರಣವನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: