ಪತ್ನಿಗೆ ಜೀವನದಲ್ಲಿ ಎಂದೂ ಮರೆಯಲಾಗದ ಸರ್ಪ್ರೈಸ್ ನೀಡಿದ ಪೈಲೆಟ್ ಗಂಡ !! | ಹೇಗಿತ್ತು ಗೊತ್ತಾ ಆತನ ಸರ್ಪ್ರೈಸ್ !?

ಸರ್ಪ್ರೈಸ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ!?. ಪ್ರತಿಯೊಬ್ಬರು ಕೂಡ ಸಾಮಾನ್ಯವಾಗಿ ಇಷ್ಟಪಡುತ್ತಾರೆ. ಅದರಲ್ಲೂ ಮಹಿಳೆಯರು ಎತ್ತಿದ ಕೈ ಎಂದೇ ಹೇಳಬಹುದು. ಫ್ರೆಂಡ್ಸ್ ಗಳಿಗೆ, ಅಣ್ಣ- ತಂಗಿಯರ ನಡುವೆ ಇಂತಹುದು ಸಾಮಾನ್ಯ. ಆದರೆ ದಂಪತಿಗಳ ನಡುವೆ ಸರ್ಪ್ರೈಸ್ ಗಳು ಹೆಚ್ಚಿನವರಲ್ಲಿ ವಿರಳ. ಆದ್ರೆ ಇಲ್ಲೊಬ್ಬ ಪತಿರಾಯ ತನ್ನ ಹೆಂಡತಿಯನ್ನು ಖುಷಿಪಡಿಸಲು ನೀಡಿದ ಸರ್ಪ್ರೈಸ್ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದ್ದು ಅಂತೂ ಸುಳ್ಳಲ್ಲ.

ಹೌದು. ನಾಲ್ಕು ಜನರ ಎದುರಲ್ಲಿ ಪತಿ ನನಗೆ ಸರ್ಪ್ರೈಸ್ ಕೊಡಬೇಕು ಎಂಬುದು ಪ್ರತಿಯೊಬ್ಬ ಮಹಿಳೆಯ ಆಸೆಯಾಗಿರುತ್ತದೆ. ಅದೇ ರೀತಿ ಈಕೆಯ ಆಸೆಯನ್ನು ನೆರವೇರಿಸಿದ್ದಾರೆ ಪೈಲೆಟ್ ಪತಿ. ಅಂತೂ ಈತನ ಸರ್ಪ್ರೈಸ್ ನೋಡಿದ ನಾರಿಮಣಿಯರಿಗೆ ಸಿಕ್ಕರೆ ಇಂತಹ ಗಂಡ ಸಿಗಬೇಕೆಂದು ಹೊಟ್ಟೆಯಲ್ಲಿ ಉರಿ ಹೊತ್ತಿಕೊಂಡೆ ಇರುತ್ತೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಈ ಮಿಸ್ಟರ್ ಪತಿರಾಯ ಇಂಡಿಗೊ ಪ್ಲೇನ್​ನ ಪೈಲಟ್. ಅದೇ ಪ್ಲೇನ್​ನಲ್ಲಿ ಪೈಲಟ್​ನ ಪತ್ನಿ ಕೂಡಾ ಪ್ರಯಾಣಿಸುತ್ತಿದ್ದಳು. ಇನ್ನೇನು ಪ್ರಯಾಣಿಕರು ಸೀಟ್​ಲ್ಲಿ ಕೂತು ಬೆಲ್ಟ್ ಹಾಕಿಕೊಳ್ಳಬೇಕು ಅಂದುಕೊಳ್ಳುವಷ್ಟರಲ್ಲಿ ಒಂದು ಅನೌನ್ಸ್ಮೆಂಟ್ ಶುರುವಾಗಿತ್ತು. ಆ ಅನೌನ್ಸ್ಮೆಂಟ್ ಮಾಡ್ತಿದ್ದಿದ್ದು ಅದೇ ಪೈಲಟ್ ಪತಿರಾಯ. ಆ ಪೈಲಟ್ ಮಾಡಿದ್ದ ಆ ಅನೌನ್ಸ್ಮೆಂಟ್ ಆ ಪ್ಲೇನ್​ನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಅರೆಕ್ಷಣ ಫಿದಾ ಆಗುವಂತೆ ಮಾಡಿದೆ.

ಪೈಲಟ್ ಅಲ್ನೀಜ್ ವಿರಾನಿ, ತಮ್ಮ ಪತ್ನಿ ಜೆಹ್ರಾ ಪ್ಲೇನ್​ಲ್ಲಿ ಕುಳಿತುಕೊಳ್ಳುವ ತನಕವೂ ಸೈಲೆಂಟಾಗಿಯೇ ಇದ್ದರು. ಕೊನೆಗೆ ಒಮ್ಮಿಂದೊಮ್ಮೆ ಮೈಕ್​ಲ್ಲಿ ತಮ್ಮ ಪತ್ನಿಯ ಹೆಸರನ್ನ ಕರೆದರು. ಅದನ್ನ ಕೇಳಿ ಜೆಹ್ರಾ, ಶಾಕ್ ಆದ್ರು, ಅಷ್ಟು ಖುಷಿಯಾದ್ರೂ ಕೂಡಾ ತಕ್ಷಣವೇ ಆ ಒಂದು ಮೊಮೆಂಟ್ ನ್ನು ತಮ್ಮ ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿಕೊಂಡರು. ಇದೀಗ ಈ ವಿಡಿಯೋ ವೈರಲ್ ಆಗಿದೆ.

ಅಷ್ಟಕ್ಕೂ ಪೈಲಟ್ ಸ್ಟೈಲ್​ನಲ್ಲಿ ವಿರಾನಿ ಇಂಟರ್ಕಾಮ್ ಮೈಕ್​ಲ್ಲಿ ಹೇಳಿದ್ದೇನೆಂದು ಇಲ್ಲಿ ನೋಡಿ. ‘ಹೆಲೋ ನಾವು ಅಲ್ನಿಜ್ ವಿರಾನಿ ಈ ಪ್ಲೇನ್​ನ ಪೈಲಟ್. ನನ್ನ ಮಾತು ನಿಮಗೆಲ್ಲ ಕೇಳಿಸುತ್ತಿದೆ ಅಂತ ಭಾವಿಸುತ್ತೇನೆ. ಈಗ ಹೊರಡುತ್ತಿರೋ ಈ ಫ್ಲೈಟ್ ನನ್ನ ಪಾಲಿಗೆ ವಿಶೇಷವಾಗಿರೋದು. ಇದೇ ವಿಮಾನದಲ್ಲಿ ನಿಮ್ಮೆಲ್ಲರ ಮಧ್ಯದಲ್ಲಿ ನಾನು ಪ್ರೀತಿಸಿದವಳು ಪ್ರಯಾಣಿಸುತ್ತಿದ್ದಾಳೆ. ಆಕೆ ನನ್ನ ಹೆಂಡತಿ ಜೆಹ್ರಾ. ಇಂದು ನಾನು ಆಕೆಗೆ ಈ ಪ್ಲೇನ್ ಮೂಲಕ ಮುಂಬೈಗೆ ಕರೆದುಕೊಂಡು ಹೋಗುವ ಭಾಗ್ಯ ಸಿಕ್ಕಿದೆ. ಇದು ಚಿಕ್ಕ ವಿಷಯವಾದರೂ ನನ್ನ ಪಾಲಿಗೆ ಮರೆಯಲಾಗದ ಕ್ಷಣ. ಇದೇ ಕಾರಣಕ್ಕೆ ನಿಮ್ಮೆಲ್ಲರ ಜೊತೆ ಈ ಸಂತೋಷವನ್ನ ಹಂಚಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಅನಿರಿಕ್ಷಿತವಾಗಿ ತನ್ನ ಗಂಡ ಕೊಟ್ಟ ಸಪ್ರೈಸ್ ನೋಡಿ ಜೆಹ್ರಾ ಮೂಕಸ್ಮಿತರಾಗಿದ್ದು, ಭಾವುಕರಾಗಿದ್ದಾರೆ. ಎಷ್ಟೋ ಜನರು ಈ ವಿಡಿಯೋ ನೋಡಿ ಜೆಹ್ರಾ ಅವರಿಗೆ ಇದು ನಿಮ್ಮ ಅದೃಷ್ಟ ಅಂತ ಹೇಳಿದ್ದಾರೆ. ಈ ವಿಡಿಯೋ ಈಗಾಗಲೇ 7.6 ಮಿಲಿಯನ್ ವೀಕ್ಷಣೆಯನ್ನ ಹೊಂದಿದೆ. ಜೊತೆಗೆ 703k ಲೈಕ್ಸ್​ಗಳನ್ನ ಪಡೆದಿದೆ.

Leave a Reply

error: Content is protected !!
Scroll to Top
%d bloggers like this: