ಬೆತ್ತಲೆ ಬೆನ್ನು ತೋರಿಸಿ ಎಲ್ಲೋ ದೃಷ್ಟಿನೆಟ್ಟು ಹಾಟ್ ಫೋಸ್ ನೀಡಿರುವ ಚಂದನವನದ ಈ ಸ್ಟಾರ್ ನಟಿ ಯಾರೆಂದು ಹೇಳಬಲ್ಲಿರಾ?

‘ರಂಗಿತರಂಗ’ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಅವತ್ತಿಗೆ ಸೆನ್ಸೇಶನ್ ಕ್ರಿಯೇಟ್ ಮಾಡಿದ ಸಿನಿಮಾ. ಕರಾವಳಿ ಸೊಗಡು, ತುಳುನಾಡಿನ ಬೆಡಗು ಎರಡನ್ನೂ ಸೇರಿಸಿ ಮಾಡಿದ ಸಿನಿಮಾ ಇದಾಗಿದ್ದು, ಅಭಿಮಾನಿಗಳ ಮನಸ್ಸನ್ನು ಸೂರೆಗೊಂಡಿತು. ಇಂದಿಗೂ ಈ ಸಿನಿಮಾ ಟಿವಿ ಯಲ್ಲಿ ಬಂದರೂ ಎಲ್ಲರೂ ತಪ್ಪದೇ ನೋಡುತ್ತಾರೆ. ಸಿನಿಮಾ ಮಾಡಿದ ಸದ್ದಿನ ಜೊತೆಜೊತೆಗೆ ಇನ್ನಷ್ಡು ಸದ್ದು ಮಾಡಿದವರು ಆ ಸಿನಿಮಾದ ನಟಿ ರಾಧಿಕಾ. ನಟಿಸಿದ ಮೊದಲ ಸಿನಿಮಾವೇ ರಾಧಿಕಾ ಅವರಿಗೆ ಸ್ಟಾರ್ ಗಿರಿ ತಂದುಕೊಟ್ಟಿತ್ತು ಎಂದರೆ ತಪ್ಪಾಗಲಾರದು.

ಇವರ ಪೂರ್ತಿ ಹೆಸರು ರಾಧಿಕಾ ನಾರಾಯಣ್ ಮೊದಲು ರಾಧಿಕಾ ಚೇತನ್ ಆಗಿದ್ದರು. ರಾಧಿಕಾ ಚೇತನ್ ಆಗಿಯೇ ಮುಂದೆ ಬಂದಿದ್ದರು. ಬಳಿಕ ರಾಧಿಕಾ ಚೇತನ್ ಹೆಸರಿನ ಬದಲಿಗೆ ನಾರಾಯಣ್ ಸೇರಿಸಿಕೊಂಡಿದ್ದಾರೆ. ಇದೀಗ ರಾಧಿಕಾ ನಾರಾಯಣ್ ಆಗಿ ತಮ್ಮ ಹೆಸರನ್ನು ಬದಲಾಯಿಸಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ನಟಿ ರಾಧಿಕಾ ನಾರಾಯಣ್ ಅದ್ಭುತ ಡಾನ್ಸರ್. ಮಾಡೆಲ್ ಮತ್ತು ಡಾನ್ಸರ್ ಆಗಿದ್ದ ರಾಧಿಕಾ ರಂಗಿತರಂಗ ಮೂಲಕ ದೊಡ್ಡ ಪರದೆಮೇಲೆ ಮಿಂಚಿದವರು. ಅಂದಹಾಗೆ ನಟಿ ರಾಧಿಕಾ ಮೈಸೂರು ಮೂಲದವರು.

“ರಂಗಿತರಂಗ” ನೀಡಿದ ಯಶಸ್ಸು ರಾಧಿಕಾ ಅವರಿಗೆ, ಅನಂತರ ನಟಿಸಿದ ಸಿನಿಮಾಗಳು ನೀಡಲಿಲ್ಲ ಎಂದೇ ಹೇಳಬಹುದು. ವಿಮರ್ಶಾತ್ಮಕವಾಗಿ ಸಿನಿಮಾಗಳು ಮೆಚ್ಚುಗೆ ಪಡೆದರೂ, ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನೂ ಕಮಾಯಿ ಮಾಡುವಲ್ಲಿ ವಿಫಲವಾದವು.

ಯು ಟರ್ನ್ ಸಿನಿಮಾದಲ್ಲಿ ರಾಧಿಕಾ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಎರಡನೇ ಬಾರಿ ಅಭಿಮಾನಿಗಳ ಮುಂದೆ ಬಂದರು. ಅನಂತರ ಕಾಫಿ ತೋಟ, ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ರಾಧಿಕಾ ಕೊನೆಯದಾಗಿ ಶಿವಾಜಿ ಸುರತ್ಕಲ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾಲ್ಲಿ ರಮೇಶ್ ಅರವಿಂದ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಸದ್ಯ ರಾಧಿಕಾ ಚೇಸ್ ಸಿನಿಮಾದ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಜೊತೆಗೆ ಶಿವಾಜಿ ಸುರತ್ಕಲ್-2 ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: