ಮಂಗಳೂರು : ಮಳಲಿ ಮಸೀದಿ ಸತ್ಯಾಸತ್ಯತೆಯ ವಿವಾದ – ವಿಹೆಚ್ ಪಿ ಯಿಂದ ಅಷ್ಟಮಂಗಳ ಪ್ರಶ್ನೆಗೆ ಸಿದ್ಧತೆ!!!

ಮಂಗಳೂರು : ಮಂಗಳೂರಿನ ಮಳಲಿ ಮಸೀದಿಯನ್ನು ಕೆಡಹುವಾಗ ಅದರಲ್ಲಿ ದೇವಸ್ಥಾನದ ಕುರುಹು ಪತ್ತೆಯಾಗಿತ್ತು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆಯ ಪ್ರಕಾರ, ಹಿಂದೂ ಪರ ಸಂಘಟನೆಗಳು ಅಷ್ಟಮಂಗಳ ಪ್ರಶ್ನಾ ಚಿಂತನೆ ಮೂಲಕ ಮಂಗಳೂರಿನ ಮಸೀದಿಯೊಂದರ ರಹಸ್ಯ ಪತ್ತೆಗೆ ಮುಂದಾಗಿದೆ ಎಂದು ಹೇಳಲಾಗಿದೆ.

ಮಂಗಳೂರಿನ ಮಳಲಿ ಮಸೀದಿ ರಹಸ್ಯ ಪತ್ತೆಗೆ ಅಷ್ಟಮಂಗಳ ಪ್ರಶ್ನೆ ನಡೆಯಲಿದ್ದು, ಕೇರಳದ ಪ್ರಖ್ಯಾತ ಪುದುವಾಳ್ ಗಳ ನೇತೃತ್ವದಲ್ಲಿ ಅಷ್ಟಮಂಗಳ ಪ್ರಶ್ನೆಗೆ ಚಿಂತನೆ ನಡೆಸಲಾಗಿದೆ. ಮಂಗಳೂರಿನ ಮಳಲಿಯ ಅಸಯ್ಯದ್ ಅಬ್ದುಲ್ಲಾಹಿಲ್ ಮದನಿ ಮಸೀದಿಯನ್ನು ನವೀಕರಣಕ್ಕಾಗಿ ಕೆಡವಿದಾಗ ದೇವಸ್ಥಾನ ಮಾದರಿಯ ಗುಡಿ ಪತ್ತೆಯಾಗಿತ್ತು. ದರ್ಗಾದ ಹಿಂಭಾಗ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿತ್ತು. ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿ ನವೀಕರಣ ಕಾಮಗಾರಿಗೆ ಕೋರ್ಟ್ ತಡೆಯಾಜ್ಞೆ ತಂದಿರೋ ವಿಎಚ್ ಪಿ ಇದೀಗ ಕಾನೂನು ಹೋರಾಟದ ಮಧ್ಯೆಯೇ ದೇವರ ಅಸ್ತಿತ್ವ ಪತ್ತೆಗೆ ಅಷ್ಟಮಂಗಳ ಪ್ರಶ್ನೆಗೆ ಮುಂದಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಅಷ್ಟಮಂಗಳ ಪ್ರಶ್ನೆ ಚಿಂತನೆ ಮೂಲಕ ರಹಸ್ಯ ಪತ್ತೆಗಿಳಿದ ಹಿಂದೂ ಸಂಘಟನೆಗಳು, ಧಾರ್ಮಿಕ ಸಾಕ್ಷ್ಯ ಪತ್ತೆ ಬಳಿಕ ಐತಿಹಾಸಿಕ ಪುರಾವೆಗಳನ್ನು ಅಷ್ಟಮಂಗಳ ಪ್ರಶ್ನೆ ಬಳಿಕ ದಾಖಲೆ ಸಹಿತ ಕಾನೂನು ಹೋರಾಟಕ್ಕೆ ಯೋಜನೆ ಹಾಕಿದೆ. ಇಷ್ಟು ಮಾತ್ರವಲ್ಲದೇ ಮುಂದಿನ ವಾರ ಅಧಿಕಾರಿಗಳ ಮಟ್ಟದಲ್ಲೂ ಡಿಸಿ ಸಭೆ ನಡೆಸಲಿದ್ದು, ಮಳಲಿ ಮಸೀದಿ ಸಂಬಂಧ ಮಹತ್ವದ ಸಭೆ ನಡೆಯಲಿದೆ.

ಸ್ವರ್ಣಾದಿ ಎಂಟು (8) ದ್ರವ್ಯಗಳನ್ನು ಯೋಗ್ಯ ತಿಥಿಗಳಲ್ಲಿ ಪೂಜಿಸಿ ಜ್ಯೋತಿಷ್ಯ ಫಲ ಹೇಳುವುದೇ ಅಷ್ಟ ಮಂಗಲ ಪ್ರಶ್ನೆ. ಜ್ಯೋತಿಷ್ಯದಲ್ಲಿ ಇದೊಂದು ನಿಗೂಢ ಶಾಸ್ತ್ರ ಸಂಪತ್ತು. ದೀರ್ಘ ಕಾಲದ ಸಮಸ್ಯೆಗಳಿಗೂ, ದೇವಳ ವಿಷಯಗಳಿಗೂ, ಗುಪ್ತ ವಿಚಾರ ತಿಳಿಯುವುದಕ್ಕೆ ಮಾತ್ರ ಇದನ್ನು ಬಳಸಲಾಗುತ್ತದೆ. ಹೀಗಾಗಿ ಮಸೀದಿ ರಹಸ್ಯದ ಪತ್ತೆಗೆ ಹಿಂದೂ ಸಂಘಟನೆಗಳು ಅಷ್ಟಮಂಗಳ ಚಿಂತನೆ ನಡೆಸಲು ಮುಂದಾಗಿದೆ. ಮಸೀದಿ ಇರೋ ಜಾಗದ ಪಕ್ಕದಲ್ಲೇ ಒಂದು ಜಾಗದಲ್ಲಿ ಪ್ರಶ್ನೆಯಿಟ್ಟು ಆ ಜಾಗದ ಸ್ಥಳ ಪುರಾಣ, ಧಾರ್ಮಿಕ ಇತಿಹಾಸಗಳ ಬಗ್ಗೆ ಮಾಹಿತಿ ಸಂಗ್ರಹಿಸೋದು ಇದರ ಉದ್ದೇಶ.

ಮಸೀದಿ ಸಮೀಪದಲ್ಲಿ ಯಾವುದಾದರೂ ಹಿಂದೂ ಧಾರ್ಮಿಕ ಸ್ಥಳಗಳು ಈ ಹಿಂದೆ ಇದ್ದು, ಸದ್ಯ ಅದು ನಾಶಗೊಂಡಿದ್ದರೆ ಅದು ಅಷ್ಟಮಂಗಳ ಚಿಂತನೆ ವೇಳೆ ಬೆಳಕಿಗೆ ಬರೋ ಸಾಧ್ಯತೆ ಇದೆ. ಆದ್ರೆ ಸದ್ಯ ಈ ವಿಚಾರ ಕಾನೂನು ಮುಖಾಂತರ ಬಗೆ ಹರಿಯಬೇಕಿದೆ. ಮಸೀದಿ ಆಡಳಿತ ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಪೂರಕ ದಾಖಲೆ ಸಲ್ಲಿಸಲು ಎಲ್ಲಾ ತಯಾರಿ ನಡೆಸಿದೆ.

Leave a Reply

error: Content is protected !!
Scroll to Top
%d bloggers like this: