ರಕ್ಷಿತ್ ಶೆಟ್ಟಿ ಸಿನಿಮಾ ‘777 ಚಾರ್ಲಿ’ಗೆ ಸಾಥ್ ಕೊಟ್ಟ ‘ಫಿದಾ’ ಬ್ಯೂಟಿ ಸಾಯಿಪಲ್ಲವಿ

ನಮ್ಮ ಚಂದನವನದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾದ ಟ್ರೇಲರ್ ಮೇ 16ಕ್ಕೆ ( ಇಂದು) ಬಿಡುಗಡೆಯಾಗಲಿದೆ. ಈ ಸಿನಿಮಾದ ಟ್ರೇಲರ್ ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಆಗಲಿದೆ.

ಅಂದಹಾಗೆ ಬಹುನಿರೀಕ್ಷೆಯ ಟ್ರೈಲರ್ ಮೇ 16ರಂದು ಮಧ್ಯಾಹ್ನ 12.12ಕ್ಕೆ ರಿಲೀಸ್ ಆಗುತ್ತಿದೆ. ಈಗಾಗಲೇ ಈ ಸಿನಿಮಾದ ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದ್ದು, ಟ್ರೈಲರ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ದೊಡ್ಡ ದೊಡ್ಡ ಕಲಾವಿದರು ಸಾಥ್ ನೀಡಿರುವುದು ಸಿನಿಮಾತಂಡಕ್ಕೆ ಮತ್ತಷ್ಟು ಬಲಬಂದಂತೆ ಆಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ವಿಶೇಷ ಎಂದರೆ ತೆಲುಗು ಭಾಷೆಯ ಟ್ರೈಲರ್ ಅನ್ನು ದಕ್ಷಿಣ ಭಾರತದ ಸ್ಟಾರ್ ನಟಿ ಸಾಯಿ ಪಲ್ಲವಿ ರಿಲೀಸ್ ಮಾಡುತ್ತಿದ್ದಾರೆ.

ಇತ್ತೀಚಿಗಷ್ಟೆ ಸಾಯಿ ಪಲ್ಲವಿ ಕನ್ನಡದಲ್ಲಿ ಡಬ್ ಮಾಡುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದರು. ಗಾರ್ಗಿ ಸಿನಿಮಾಗಾಗಿ ಸಾಯಿ ಪಲ್ಲವಿ ಕನ್ನಡದಲ್ಲಿ ಡಬ್ ಮಾಡಿ ಗಮನ ಸೆಳೆದಿದ್ದರು. ಸಾಯಿ ಪಲ್ಲವಿ ಕನ್ನಡ ಮಾತನಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದರ ಬೆನ್ನಲ್ಲೇ ಇದೀಗ ರಕ್ಷಿತ್ ಶೆಟ್ಟಿ ಸಿನಿಮಾಗೆ ಸಾಥ್ ನೀಡಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಇನ್ನು ಸಾಯಿ ಪಲ್ಲವಿ ಜೊತೆಗೆ ವೆಂಕಟೇಶ್ ದಗ್ಗುಬಾಟಿ, ಲಕ್ಷ್ಮಿ ಮಂಚು ಇಬ್ಬರೂ ಕೂಡ ಟ್ರೈಲರ್ ಲಾಂಚ್ ಮಾಡಲಿದ್ದಾರೆ. ಇನ್ನು ಮಲಯಾಳಂ ಟ್ರೈಲರ್ ಅನ್ನು ಖ್ಯಾತ ನಟ ನಿವಿನ್ ಪೌಲಿ, ಆಸಿಫ್ ಅಲಿ, ಟೊವಿನೋ ಥಾಮಸ್, ಆಂಟನಿ ವರ್ಗೀನ್ ಮತ್ತು ಅರ್ಜುನ್ ರಿಲೀಸ್ ಮಾಡುತ್ತಿದ್ದಾರೆ. ಇನ್ನು ತಮಿಳು ಟ್ರೈಲರ್ ಅನ್ನು ತಮಿಳಿನ ಖ್ಯಾತ ನಟ ಧನುಷ್ ಬಿಡುಗಡೆ ಮಾಡುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: