16-18 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಲೈವ್-ಸ್ಟ್ರೀಮಿಂಗ್ ಮಾಡುವುದು ನಿಷೇಧ!

ಇಂಟರ್ನೆಟ್ ಬಳಕೆಯಿಂದ ಅಪ್ರಾಪ್ತ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪೆಟ್ಟು ಬೀಳುವುದರಿಂದ,16 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಲೈವ್-ಸ್ಟ್ರೀಮಿಂಗ್ ಮಾಡುವುದನ್ನು ನಿಷೇಧಿಸಲು ಚೀನಾ ಮುಂದಾಗಿದೆ.

ಹೊಸ ನಿಯಮಗಳ ಪ್ರಕಾರ,16 ಮತ್ತು 18 ರ ನಡುವಿನ ವಯಸ್ಸಿನ ಬಳಕೆದಾರರು ಲೈವ್ ಸ್ಟ್ರೀಮ್ ಮಾಡುವ ಮೊದಲು ತಮ್ಮ ಪೋಷಕರಿಂದ ಅನುಮತಿಯನ್ನು ಪಡೆಯಬೇಕು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಇಂಟರ್ನೆಟ್ ಪ್ಲಾಟ್‌ ಫಾರ್ಮ್‌ ಗಳಲ್ಲಿ ನೈಜ ಹೆಸರಿನ ನೋಂದಣಿ ಅಗತ್ಯವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ನಗದು ಟಾಪ್-ಅಪ್, ಉಡುಗೊರೆ ಖರೀದಿ ಮತ್ತು ಆನ್‌ ಲೈನ್ ಪಾವತಿಯಂತಹ ಅಪ್ರಾಪ್ತ ವಯಸ್ಕರ ಟಿಪ್ಪಿಂಗ್ ಸೇವೆಗಳನ್ನು ನೀಡುವುದನ್ನು ನಿಷೇಧಿಸಬೇಕು ಎಂದು ಹೇಳಲಾಗಿದೆ.

Leave A Reply

Your email address will not be published.