ಎಂಜಲು ಉಗುಳಿದರೆ ಮೊಬೈಲ್ ಲಾಕ್ ಆನ್ ! ಏನಿದು ವಿಚಿತ್ರ ?

ಬಹಳಷ್ಟು ವಿಚಿತ್ರ ಜನರನ್ನು, ಘಟನೆಯನ್ನು, ಟ್ಯಾಲೆಂಟ್​ಗಳನ್ನು ನಾವು ನಿತ್ಯವೂ ನೋಡಬಹುದು. ಮೊಬೈಲ್ ಗಳಿಗೆ ಫೇಸ್ ಲಾಕ್, ಫಿಂಗರ್ ಲಾಕ್ ಗಳೆಲ್ಲ ಇರುತ್ತದೆ ಆದರೆ ನೀವು ಎಂಜಲು ಲಾಕ್ ಬಗ್ಗೆ ಕೇಳಿದ್ದೀರಾ ? ಇಲ್ಲಿದೆ ನೋಡಿ ವಿಚಿತ್ರ- ಸಚಿತ್ರ !

ಮಹಿಳೆಯೊಬ್ಬರು ಉಗುಳುವ ಮೂಲಕ ತನ್ನ ಫೋನ್ ಅನ್ನು ಅನ್ಲಾಕ್ ಮಾಡುವ ವಿಲಕ್ಷಣ ವೀಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, Ms ಮೊನೆಟ್ ತನ್ನ ಫೋನ್ ಲಾಕ್ ಅನ್ನು ವಿಚಿತ್ರವಾಗಿ ತೆಗೆಯುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಈ ವಿಡಿಯೋದಲ್ಲಿ Ms ಮೊನೆಟ್ ತನ್ನ ಫೋನ್ ಅನ್ನು ಯಶಸ್ವಿಯಾಗಿ ಅನ್ಲಾಕ್ ಮಾಡಲು ಆರು ವಿಭಿನ್ನ ಸಂಖ್ಯೆಗಳ ಮೇಲೆ ಉಗುಳುವುದು ಕಂಡುಬರುತ್ತದೆ. ನಂತರ ಅವಳು ತನ್ನ ಬಾಯಿಯ ಮೂಲೆಯಲ್ಲಿ ಒರೆಸುತ್ತಾ ನಗುವನ್ನು ಬೀರುತ್ತಾ ನೋಡುತ್ತಾಳೆ. ಎಂಜಿಲಲ್ಲಿ ಲಾಕ್ ತೆಗೆಯುವುದು ಸುಪ್ರ ಪ್ರತಿಭೆ ಎಂದು ಮೊನೆಟಾ ವಿಡಿಯೋ ಶೇರ್ ಮಾಡಿದ್ದಾರೆ.

https://twitter.com/publicoutsider/status/1518580894881230850?ref_src=twsrc%5Etfw%7Ctwcamp%5Etweetembed%7Ctwterm%5E1518580894881230850%7Ctwgr%5E%7Ctwcon%5Es1_c10&ref_url=http%3A%2F%2Fapi-news.dailyhunt.in%2F
Leave A Reply

Your email address will not be published.