34 ಇಂಚಿನ ವಧುವಿನ ಕೈ ಹಿಡಿದ 36 ಇಂಚಿನ ವರ|ಜಿಲ್ಲೆಯಾದ್ಯಂತ ಸುದ್ದಿಯಾಗಿದೆ ದೇವರೇ ಸೃಷ್ಟಿಮಾಡಿದ ಈ ಜೋಡಿಯ ಮದುವೆ!

ಮದುವೆಯೆಂಬುದು ಪ್ರತಿಯೊಬ್ಬರ ಬಾಳಿನ ಸುಂದರವಾದ ಕ್ಷಣ. ಯಾರಿಗೆ ಯಾರು ಎಂಬುದನ್ನು ಮೊದಲೇ ದೇವರು ನಿರ್ಧರಿಸಿರುತ್ತಾರೆ ಎಂಬುದು ಹಿರಿಯರ ಮಾತು. ಒಬ್ಬರಿಗೆ ಸರಿಹೊಂದುವಂತೆ ಬಾಳಸಂಗಾತಿಯನ್ನು ಸೃಷ್ಟಿ ಮಾಡಿರುತ್ತಾನೆ. ಇದಕ್ಕೆ ನೈಜ ಉದಾಹರಣೆಯಂತಿದೆ ಈ ಸುಂದರವಾದ ಜೋಡಿಯ ಮದುವೆ.


Ad Widget

Ad Widget

Ad Widget

ಈ ಜೋಡಿ ವಿಭಿನ್ನದಲ್ಲಿ ವಿಭಿನ್ನವಾಗಿದ್ದು,ನೋಡುಗರ ಕಣ್ಣಿಗೆ ಎರಡು ನಕ್ಷತ್ರದಂತೆ ಇರುವ ಈ ಜೋಡಿ ಸಪ್ತಪದಿ ತುಳಿದಿರುವುದೇ ವಿಶೇಷ.ಹೌದು.36 ಇಂಚಿನ ವರನೋರ್ವ 34 ಇಂಚಿನ ವಧುವಿನೊಂದಿಗೆ ಸಪ್ತಪದಿ ತುಳಿದಿದ್ದು, ಈ ವಿಶಿಷ್ಟ ಜೋಡಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನರು ನೂಕುನುಗ್ಗಲು ನಡೆಸಿರುವ ಘಟನೆ ನಡೆದಿದೆ.

ಈ ಮದುವೆ ಬಿಹಾರದ ಭಾಗಲ್ಪುರದಲ್ಲಿ ನಡೆದಿದ್ದು,ಅಭಿಯಾ ಬಜಾರ್ ನಿವಾಸಿ ಕಿಶೋರಿ ಮಂಡಲ್​ ಅವರ ಪುತ್ರಿ ಮಮತಾ ಕುಮಾರಿ(24) ಮಸಾರು ನಿವಾಸಿ ಬಿಂದೇಶ್ವರಿ ಅವರ ಪುತ್ರ ಮುನ್ನಾ ಭಾರತಿ(26) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಭಿನ್ನ ಮದುವೆ ನೋಡಲು ಸಾವಿರಾರು ಜನರು ಆಗಮಿಸಿದ್ದರು. ಜೊತೆಗೆ ವಧು-ವರರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ಜಿಲ್ಲಾದ್ಯಂತ ಸುದ್ದಿಯಾಗಿರುವ ಈ ವಿಶಿಷ್ಟ ಮದುವೆಯ ಸ್ಥಳಕ್ಕೆ ಜನಸಾಗರವೇ ಹರಿದು ಬಂಡಿದ್ದು,ವಧು – ವರರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಜನರ ನಡುವೆ ಪೈಪೋಟಿ ಏರ್ಪಟ್ಟಿತು.ವರ ಮುನ್ನಾ ನೃತ್ಯ ಪಾರ್ಟಿಯಲ್ಲಿ ಕಲಾವಿದರಾಗಿ ಕೆಲಸ ಮಾಡುವುದರ ಜೊತೆಗೆ ಸರ್ಕಸ್​ಗಳಲ್ಲೂ ಭಾಗಿಯಾಗಿ ಸಂಪಾದನೆ ಮಾಡುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: