ಲಾಕ್ ಡೌನ್ ಲೈಂಗಿಕ ಕ್ರಿಯೆ : ಆರ್ ಟಿಐನಲ್ಲಿ ಬಯಲಾಯ್ತು ಶಾಕಿಂಗ್ ನ್ಯೂಸ್!

ಕೊರೊನಾ ವೈರಸ್ ಹಾವಳಿಯಿಂದಾಗಿ ಹೇರಲಾಗಿದ್ದ ಲಾಕ್‌ಡೌನ್ ಸಂದರ್ಭದಲ್ಲಿನ ತುಂಬಾ ಜನ ಪಾಡುಪಟ್ಟಿದ್ದಂತೂ ನಿಜ. ಇದರಲ್ಲಿ ಅಸುರಕ್ಷಿತ ಲೈಂಗಿಕ ಸಂಪರ್ಕ ಕೂಡಾ ಒಂದು. ಈ ಕುರಿತು ಉಂಟಾಗಿರುವ ಒಂದು‌ ಪ್ರಶ್ನೆಯ ಬಗ್ಗೆ ಭಯಾನಕ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯಿಂದಾಗಿ ಬಹಿರಂಗಗೊಂಡಿದೆ. ಇದು ನಿಜಕ್ಕೂ ಶಾಕಿಂಗ್ ನ್ಯೂಸ್ ಎಂದೇ ಹೇಳಬಹುದು.

ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಿಸಲು ಭಾರತದಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. 2020-21 ಅವಧಿಯಲ್ಲಿ ಸೋಂಕಿತರ ಸಂಖ್ಯೆಯೇನೋ ಇಳಿಕೆ ಆಯ್ತು ಆದರೆ ಅಸುರಕ್ಷಿತ ಲೈಂಗಿಕತೆಯಿಂದಾಗಿ ಹೆಚ್‌ಐವಿ ಸೋಂಕು ಅಂಟಿಕೊಳ್ಳುವುದಕ್ಕೆ ಶುರುವಾಯಿತು. ಒಂದು ಮಗ್ಗಲಿನಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಬರುತ್ತಿದ್ದರೆ, ಏಡ್ಸ್ ಪ್ರಕರಣಗಳ ಸಂಖ್ಯೆ ಏರುಮುಖವಾಗುತ್ತಿತ್ತು. ಕಳೆದೊಂದು ವರ್ಷದಲ್ಲಿ ಒಟ್ಟು 85,268 ಏಡ್ಸ್ ಪ್ರಕರಣಗಳು ಪತ್ತೆಯಾಗಿವೆ.

ಈ ಪ್ರಶ್ನೆ ಕೇಳಿದವರು ಆರ್‌ಟಿಐ ಕಾರ್ಯಕರ್ತ ಚಂದ್ರೇಶೇಖರ್ ಗೌರ್. ಈ ಪ್ರಶ್ನೆಗೆ ಸಿಕ್ಕ ಉತ್ತರ ಮಾತ್ರ ಬೆಚ್ಚಿಬೀಳಿಸುವಂತಿದೆ. ಇದು ಹಲವು ವಿಷಯವೊಂದನ್ನು ಬೆಳಕಿಗೆ ತಂದಿದೆ. ಈತ ಸಲ್ಲಿಸಿದ್ದ ಅರ್ಜಿಗೆ ರಾಷ್ಟ್ರೀಯ ಏಯ್ಡ್ಸ್ ತಡೆ ಸಂಸ್ಥೆ (ಎನ್‌ಸಿಒ-ನ್ಯಾಕೋ) ನೀಡಿರುವ ಉತ್ತರ ಚಿಂತೆಗೀಡು ಮಾಡುವಂತಿದೆ. ಅದೇನು ಅಂತ ತಿಳಿಯೋಣ.

ಲಾಕ್‌ಡೌನ್ ಅವಧಿಯಲ್ಲಿನ ಅಸುರಕ್ಷಿತ ಸಂಭೋಗ ವಿಧಾನದಿಂದ ದೇಶದಲ್ಲಿ 85 ಸಾವಿರಕ್ಕೂ ಅಧಿಕ ಮಂದಿ ಏಯ್ಡ್ಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ನ್ಯಾಕೋ ಅಂಕಿ-ಅಂಶ ತಿಳಿಸಿದೆ. ಈ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 10,498, ಆಂಧ್ರಪ್ರದೇಶದಲ್ಲಿ 9521, ಕರ್ನಾಟಕದಲ್ಲಿ 8947, ಮಧ್ಯಪ್ರದೇಶದಲ್ಲಿ 3037 ಮತ್ತು ಪಶ್ಚಿಮ ಬಂಗಾಳದಲ್ಲಿ 2757 ಮಂದಿ ಏಯ್ಡ್ಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ನ್ಯಾಕೋ ಹೇಳಿದೆ.

Leave A Reply

Your email address will not be published.