ಬ್ರಾ ಗಾತ್ರ ಅಳೆಯುವ ಸುಲಭ ವಿಧಾನಗಳು – ಒಳ ಉಡುಪಿನ ಬಗ್ಗೆ ಕೆಲವೊಂದು ಟಿಪ್ಸ್ !

ತುಂಬಾ ಮಂದಿ ಹೆಣ್ಣುಮಕ್ಕಳು ತಮ್ಮ‌ ಒಳ ಉಡುಪಿನ ಸೈಜ್ ಬಗ್ಗೆ ಗೊಂದಲ ಹೊಂದಿರುವುದು ಸಾಮಾನ್ಯ. ಅದಕ್ಕಾಗಿಯೇ ಇಲ್ಲೊಂದು ಕೆಲವು ಉತ್ತಮ ಸುಲಭ ವಿಧಾನವನ್ನು ನೀಡಲಾಗಿದೆ. ಅನುಸರಿಸಿ ನೋಡಿ.

ಭಾರತದಲ್ಲಿ ಸುಮಾರು ಶೇ.80ರಷ್ಟು ಮಹಿಳೆಯರು ತಮ್ಮ ಬ್ರಾ ಅಳತೆಯನ್ನು ತಿಳಿದಿಲ್ಲ. ಹಾಗಾಗಿ ಹೊಂದಿಕೊಳ್ಳದ ಬ್ರಾ ಧರಿಸುತ್ತಾರೆ. ಬ್ರಾ ಖರೀದಿಸುವ ಮೊದಲು ನಿಮ್ಮ ಸ್ತನದ ಅಳತೆ ಯಾವುದು? ಎನ್ನುವುದನ್ನು ಮೊದಲು ತಿಳಿದಿರಬೇಕು.

ಮೆಜರ್ ಮೆಂಟ್ ಟೇಪ್ ಬಳಸಿ ನಿಮ್ಮ ಎದೆ ಭಾಗದ ಮಧ್ಯ ಭಾಗದ ಸುತ್ತಳತೆಯನ್ನು ಅಳೆಯಿರಿ. ನಂತರ ಬ್ಯಾಂಡ್ ನ ಸುತ್ತಳತೆ ಎಷ್ಟು ಎನ್ನುವುದನ್ನು ಅಳೆಯಬೇಕು. ಅದೇ ನಿಮ್ಮ ಸ್ತನದ ಅಳತೆಯನ್ನು ತಿಳಿಸುತ್ತದೆ.

ನಿಮ್ಮ ಸ್ತನವು ಯಾವ ಅಳತೆಯಲ್ಲಿದೆ ಎನ್ನುವುದನ್ನು ಪರಿಶೀಲಿಸಿ ಕಪ್ ಸೈಜ್ ಅನ್ನು ಪರಿಶೀಲಿಸಿದರೆ, ಇದು
ನೀವು ಬ್ರಾ ಖರೀದಿಸುವಾಗ ಉಪಯೋಗವಾಗುತ್ತದೆ. ನಿಮ್ಮ ಸ್ತನದ ಅಳತೆ ಹಾಗೂ ಕಪ್‌ನ ಗಾತ್ರವನ್ನು ತಿಳಿಸಿ ಬ್ರಾ ಖರೀದಿಸಿದರೆ ಉತ್ತಮ. ಆಗ ಅದು ಸರಿಯಾಗಿ ಕುಳಿತುಕೊಳ್ಳುವುದು. ವಿವಿಧ ಬಗೆಯ ಬ್ರಾಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಒಂದೇ ಬಗೆಯ ಬ್ರಾ ಎಲ್ಲಾ ಬಗೆಯ ಉಡುಗೆಗೂ ಧರಿಸುವುದು ಒಳ್ಳೆಯದಲ್ಲ. ಹಾಗಾಗಿ ನಿಮ್ಮ ಆಯ್ಕೆ ಸರಿಯಾಗಿ ಇರಬೇಕು.

ಟೀ ಶರ್ಟ್, ಕುರ್ತಾ, ಮಾಡರ್ನ್ ಉಡುಗೆ ಹಾಗೂ ಸಾರೀ ಬ್ಲೌಸ್‌ಗಳಿಗೆ ಪ್ಯಾಡೆಡ್ ಬ್ರಾ ಆಯ್ಕೆ ಉತ್ತಮ.
ನಿಮ್ಮ ಸ್ತನದ ಅಳತೆಗೆ ಅನುಗುಣವಾಗಿ ಲೈಟ್ ಪ್ಯಾಡ್ ಅಥವಾ ಹೆವಿ ಪ್ಯಾಡ್ ಆಯ್ಕೆ ಮಾಡಬಹುದು. ಅನುಚಿತವಾದ ಆಯ್ಕೆ ನಿಮ್ಮ ಸ್ತನದ ಗಾತ್ರವನ್ನು ಅಸಹ್ಯವಾಗಿ ಕಾಣುವಂತೆ ಮಾಡುವುದು.

ನಿಮ್ಮ ಸ್ತನವು ಯಾವ ಅಳತೆಯಲ್ಲಿದೆ ಎನ್ನುವುದನ್ನು ಪರಿಶೀಲಿಸಿ ಕಪ್ ಸೈಜ್ ಅನ್ನು ಪರಿಶೀಲಿಸಬೇಕು.
ಬ್ರಾ ಅಳತೆಯು ಸರಿಯಾಗಿ ಇಲ್ಲದೆ ಹೋದರೆ ಸ್ತನದ ಆಕಾರವು ಹಾಳಾಗಿ ಕಾಣುವುದು. ಅಷ್ಟು ಆಕರ್ಷಣೆಯೂ ಇಲ್ಲದೆ ಹೋಗುವುದು.

Leave A Reply

Your email address will not be published.