ಶಿವಮೊಗ್ಗ ಹರ್ಷ ಕೊಲೆ : ಕೋಮು ಗಲಭೆಯ ಹುನ್ನಾರ -ಎನ್.ಐ.ಎ

ಶಿವಮೊಗ್ಗದಲ್ಲಿ ನಡೆದಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಪ್ರಾಥಮಿಕ ವರದಿ ನೀಡಿದ್ದು, ಹರ್ಷ ಕೊಲೆ ಹಿಂದೆ ಕೋಮು ಗಲಭೆಯ ಹುನ್ನಾರವಿತ್ತು ಎಂದು ತಿಳಿಸಿದೆ.

ಹರ್ಷ ಹತ್ಯೆ ಹಿಂದೆ ಸಮಾಜದ ಸ್ವಾಸ್ಥ್ಯ ಕದಡುವ ಉದ್ದೇಶ ಅಡಗಿತ್ತು. ಈ ಮೂಲಕ ಕೋಮುಗಲಭೆ ಸೃಷ್ಟಿಸುವ ಷಡ್ಯಂತ್ರ ಅಡಗಿತ್ತು ಎಂದು ಎನ್ ಐ ಎ ವರದಿಯಲ್ಲಿ ಬಹಿರಂಗವಾಗಿದೆ.

ಪ್ರಕರಣ ಸಂಬಂಧ ಈಗಾಗಲೇ 10 ಆರೋಪಿಗಳನ್ನು ಬಂಧಿಸಲಾಗಿದೆ. ಹರ್ಷ ಹತ್ಯೆ ನಡೆದಿರುವುದು ಯಾವುದೇ ವೈಯಕ್ತಿಕ ದ್ವೇಷ, ಹಳೆಯ ಗಲಾಟೆ ವಿಚಾರವಾಗಿ ಅಲ್ಲ. ಎಲ್ಲಾ ಹತ್ತು ಆರೋಪಿಗಳು ಕೋಮು ಗಲಭೆ ಸೃಷ್ಟಿಸುವ ಕಾರಣಕ್ಕಾಗಿಯೇ ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸುವ ಉದ್ದೇಶಕ್ಕೆ ಹತ್ಯೆ ಮಾಡಿದ್ದಾಗಿ ಎನ್ ಐ ಎ ದಾಖಲಿಸಿರುವ ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.