ಹೊಸ ಅವತಾರದಲ್ಲಿ ಮಿಂಚಿದ ನಟಿ ಸಮಂತಾ!! ಆಕೆಯ ಮುಂದಿನ ಸಿನಿಮಾದಲ್ಲಿ ಇರಲಿದೆಯಾ ಈ ಪೋಸ್!??

0 9

ಇತ್ತೀಚಿನ ದಿನಗಳಲ್ಲಿ ನಟಿ ಸಮಂತಾ ಹೆಚ್ಚು ಸುದ್ದಿಯಲ್ಲಿದ್ದು ವಿಚ್ಛೇದನದ ಬಳಿಕವಂತೂ ಎಲ್ಲಾ ವಿಚಾರದಲ್ಲೂ ಸುದ್ದಿಯಾಗುತ್ತಿದ್ದಾರೆ. ಇದೀಗ ಸಮಂತಾರ ಹಾಟ್ ಫೋಟೋಗಳು ವೈರಲ್ ಆಗುತ್ತಿದ್ದು, ಪುಷ್ಪ ಸಿನಿಮಾದಲ್ಲಿನ ಸೀನ್ ಗಿಂತಲೂ ಭಿನ್ನವಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು-ಅಭಿಮಾನಿಗಳು.

ನಾಗಚೈತನ್ಯರೊಂದಿಗಿನ ಭಿನ್ನಾಭಿಪ್ರಾಯದ ಬಳಿಕ ಮನೆ ಖರೀದಿಸುತ್ತಾರೆ ಎನ್ನುವ ಸುದ್ದಿ ಇತ್ತಾದರೂ ಅದ್ಯಾವುದೂ ಈ ವರೆಗೆ ಸ್ಪಷ್ಟವಾಗಲಿಲ್ಲ. ಸರಣಿ ಸಿನಿಮಾಗಳಲ್ಲಿ ಬಿಜಿ ಆಗಿರುವ ಸಮಂತಾ ಹೊಸ ಅವತಾರದಲ್ಲಿ ಮ್ಯಾಗಜಿನ್ ಒಂದಕ್ಕೆ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಬರುತ್ತಿದ್ದಂತೆ ಪಡ್ಡೆಗಳು ಜೊಲ್ಲು ಸುರಿಸಿದ್ದಾರೆ ಎಂದು ಜಾಲತಾಣ ಪ್ರಿಯರು ಹೇಳಿಕೊಳ್ಳುತ್ತಿದ್ದಾರೆ.

ಪತಿಯಿಂದ ದೂರವಾದ ಬಳಿಕ ಆ ನೋವನ್ನು ಮರೆಯಲು ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ಸಮಂತಾ ನಾನಾ ಕಡೆಗಳಲ್ಲಿ ಸುತ್ತಾಟ ನಡೆಸುತ್ತಿದ್ದೂ, ಸಣ್ಣ ಅವಕಾಶ ಸಿಕ್ಕರೂ ಅದ್ಭುತವಾಗಿ ಕ್ಯಾರಿ ಮಾಡುತ್ತಿದ್ದಾರೆ.ಸದ್ಯ ಸಮಂತಾ ಹೊಸ ಅವತಾರ ಕಂಡು ಎಲ್ಲರೂ ಬೆರಗಾದರೆ, ಮುಂದಿನ ಸಿನಿಮಾ ಹೇಗಿರಲಿದೆ ಎನ್ನುವ ಪ್ರಶ್ನೆ ಫೋಟೋ ಕಂಡ ಎಲ್ಲರನ್ನು ಕಾಡಿದ್ದು ಮಾತ್ರ ಸುಳ್ಳಲ್ಲ.

Leave A Reply