ಹೊಸದಾಗಿ ಬಂದಿದೆ ‘ಗೋಲ್ಡ್ ಕಾರ್ ‘|ಈ ಕಾರ್ ಟ್ಯಾಕ್ಸಿಲಿ ಪ್ರಯಾಣಿಸಬೇಕಾದರೆ ನೀವು ನೀಡಬೇಕು 7ಲಕ್ಷ!

ಇಂದಿನ ಟೆಕ್ನಾಲಜಿಯಲ್ಲಿ ಕಾರುಗಳಿಗೆ ಏನು ಕಮ್ಮಿ ಇಲ್ಲ. ವಿಭಿನ್ನ ಎಂಬಂತೆ ಹೊಸ-ಹೊಸ ಕಾರುಗಳು ಮಾರುಕಟ್ಟೆಗೆ ಬರುತ್ತಲೇ ಇದೆ. ಅದೆಷ್ಟೇ ಬಂದರೂ ಅವುಗಳಿಗಿರುವ ಡಿಮ್ಯಾಂಡ್ ಕಮ್ಮಿಯಾಗಿಲ್ಲ ನೋಡಿ. ಯಾಕಂದ್ರೆ ಹೊಸ ಮಾದರಿಯ ಕಾರ್ ಬರುತ್ತಿದ್ದಂತೆ ಕುತೂಹಲ ಹೆಚ್ಚಾಗಿರುತ್ತೆ. ಅದರಲ್ಲೂ ಬೆಂಗಳೂರು ಅಂದ್ರೆ ಕೇಳೋದೇ ಬೇಡ. ಸಿಟಿ ಜನ ಹೇಗೆ ಎಂಬ ಅರಿವು ನಿಮಗಿದೆ ಅಲ್ವಾ? ಹಾಗಾಗಿ ಬೆಂಗಳೂರಿನ ರಸ್ತೆಗಳಲ್ಲಿ ಡಿಫರೆಂಟ್ ಕಾರು,ವಿದೇಶಿ ಕಾರುಗಳಿಗೆ ಭರವಿಲ್ಲ.

ಹೌದು. ಇದೀಗ ಬೆಂಗಳೂರಿನಲ್ಲಿ ಮಿಂಚುತ್ತಿದೆ ‘ಗೋಲ್ಡನ್ ಕಾರ್’..ಸಾಮಾನ್ಯವಾಗಿ ರೋಲ್ಸ್ ರಾಯ್ಸ್ ಕಾರುಗಳ ಓಡಾಟವನ್ನು ಜನರು ನೋಡಿಯೇ ಇರುತ್ತಾರೆ. ಆದರೀಗ ಹೊಸ ಮಾದರಿಯ ರೋಲ್ಸ್ ರಾಯ್ಸ್ ‘ಫ್ಯಾಂಟಮ್’ ಕಾರು ಬೆಂಗಳೂರಿನ ರಸ್ತೆಗಳಲ್ಲಿ ಆಕರ್ಷಣೆಯಾಗುತ್ತಿದೆ. ಏಕೆಂದರೆ ಈ ಕಾರು ಗೋಲ್ಡ್ ಪ್ಲೇಟೆಡ್ ಆಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಈ ಕಾರಿನ ಮಾಲೀಕ ಬಾಬಿ ಚೆಮ್ಮನೂರ್. ಆತ ಓರ್ವ ಉದ್ಯಮಿಯಾಗಿದ್ದು ಆಭರಣ ವ್ಯಾಪಾರದಲ್ಲಿ ಅವರು ತೊಡಗಿದ್ದಾರೆ.ಬೆಂಗಳೂರಿನ ಕೋರಮಂಗಲದಲ್ಲಿ ಅವರ ಹೊಸ ಆಭರಣ ಮಳಿಗೆ ಉದ್ಘಾಟನೆಗೊಳ್ಳುತ್ತಿದ್ದು,ಮಳಿಗೆಯಲ್ಲಿ ಈ ಚಿನ್ನದ ಕಾರು ಆಕರ್ಷಣೆಯಾಗಲಿದೆ. ಕಾರಿನಿಂದಾಗಿ ಜನರು ತಮ್ಮ ಮಳಿಗೆಯತ್ತ ಬರುವಂತಾಗಲಿ ಎನ್ನುವ ಆಸೆ ಅವರದಾಗಿದೆ.

ಚಿನ್ನದ ಕಾರನ್ನು ಜನರು ಕೂಡಾ ಅನುಭವಿಸಬೇಕು ಎನ್ನುವ ಬಾಬಿ ಅವರು ಈ ಕಾರಣಕ್ಕೇ ತಮ್ಮ ಚಿನ್ನದ ಕಾರನ್ನು ಟ್ಯಾಕ್ಸಿಯಾಗಿ ಮಾರ್ಪಾಡು ಮಾಡಿದ್ದಾರೆ. ಜನರು ಏಳು ಲಕ್ಷ ರೂ. ಕೊಟ್ಟು ಈ ಕಾರನ್ನು ಬುಕ್ ಮಾಡಬಹುದಾಗಿದೆ.ಹೊಸ ಕಾರು ಅದರಲ್ಲೂ ಗೋಲ್ಡ್ ಕಾರು ಬಂದ್ರೆ ಕೇಳೋದೇ ಬೇಡ. ಅದೇ ರೀತಿ ಈ ಕಾರ್ ನೋಡಿ ಜನ ಉತ್ಸುಕರಾಗಿದ್ದು,ಕಾರ್ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಜನರ ಈ ನಡೆ ನೋಡಿ ಮಾಲೀಕ ಖುಷಿ ಹಂಚಿಕೊಂಡಿದ್ದಾರೆ.

error: Content is protected !!
Scroll to Top
%d bloggers like this: