ಮಂಗಳೂರು : ಅನೈತಿಕ ದಂಧೆಗೆ ಬಡ ಹೆಣ್ಣುಮಕ್ಕಳೇ ಟಾರ್ಗೆಟ್| ವಿಲಾಸಿ ಜೀವನದ ಆಸೆ ತೋರಿಸಿ ಬಲೆಗೆ ಬೀಸೋ ಗ್ಯಾಂಗ್!

ಮಂಗಳೂರು : ಬಾಲಕಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ದಂಧೆಯೊಂದು ಕಳೆದ ತಿಂಗಳಷ್ಟೇ ನಗರದಲ್ಲಿ ಬೆಳಕಿಗೆ ಬಂದಿತ್ತು. ಈ ಪ್ರಕರಣದ ತನಿಖೆ ಈಗಲೂ ಮುಂದುವರಿದಿದೆ.

ಅಪ್ರಾಪ್ತ ಬಾಲಕಿಯರನ್ನು ತಮ್ಮ ದಂಧೆಗೆ ಸೆಳೆಯಲು ಮಹಿಳಾ ಪಿಂಪ್ ಗಳು ಮಾಲ್, ಸಿನಿಮಾ ಥಿಯೇಟರ್, ಹೋಟೆಲ್, ಪಾರ್ಕ್, ಮುಂತಾದೆಡೆ ತಿರುಗಾಡಿ ಅವರನ್ನು ಬಲೆಗೆ ಬೀಳಿಸುವುದು ತನಿಖೆ ವೇಳೆ ಗೊತ್ತಾಗಿದೆ. ಇವರು ಬಡವರ್ಗದ ವಿದ್ಯಾರ್ಥಿನಿಯರು, ಅಪ್ರಾಪ್ತ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡುವುದೇ ಇವರ ಉದ್ದೇಶ.


Ad Widget

Ad Widget

Ad Widget

ಬಡ ಹೆಣ್ಣುಮಕ್ಕಳನ್ನು ಗಮನಿಸುತ್ತಾ ಅವರ ಆಸೆ, ಆಕಾಂಕ್ಷೆಗಳು ಏನೆಂದು ತಿಳಿಯುತ್ತಾ, ನಂತರ ವಿದ್ಯಾರ್ಥಿನಿಯರ ಜೊತೆ ಪರಿಚಯಸ್ಥರಂತೆ ವರ್ತಿಸಿ ಆತ್ಮೀಯವಾಗಿ ಇದ್ದು, ನಂತರ ಅವರ ಸಂಪರ್ಕದಲ್ಲಿ ಇರುತ್ತಾರೆ.

ಹಣ, ಗಿಫ್ಟ್, ಬಟ್ಟೆ ಇವೆಲ್ಲ ಕೊಡುತ್ತಾರೆ. ಮಾಲ್ ಗೆ ಕರೆದುಕೊಂಡು ಹೋಗಿ ಅಲ್ಲಿ ಚೆನ್ನಾಗಿ ಖರ್ಚು ಮಾಡುತ್ತಾರೆ. ಐಷರಾಮಿ ಜೀವನದ ರುಚಿ ಹತ್ತುವಂತೆ ಮಾಡುತ್ತಾರೆ. ನಂತರ ಈ ಅನೈತಿಕ ದಂಧೆಗೆ ಎಳೆಯುತ್ತಾರೆ.

ಪೊಲೀಸರು ಈಗಾಗಲೇ 16 ಮಂದಿಯನ್ನು ಬಂಧಿಸಿದ್ದು, ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: