ಬರೋಬ್ಬರಿ 17 ವರ್ಷಗಳ ಬಳಿಕ ತಾನು ಕಳೆದುಕೊಂಡಿದ್ದ ಬೆಕ್ಕನ್ನು ಮರಳಿ ಪಡೆದ ಮಹಿಳೆ !! | ಮರಳಿ ಭೇಟಿಗೆ ಕಾರಣವಾಯಿತು ಬೆಕ್ಕಿಗೆ ಅಳವಡಿಸಿದ್ದ ಆ ಒಂದು ಸಣ್ಣ ವಸ್ತು | ಇಲ್ಲಿದೆ ನೋಡಿ ಇದರ ರೋಚಕ ಸ್ಟೋರಿ

ಹಲವು ಅವರು ತಮ್ಮ ಮನೆಯಲ್ಲಿ ಸಾಕಿ ಸಲಹುವ ಸಾಕುಪ್ರಾಣಿಗಳನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಅವುಗಳಿಗೆ ಸ್ವಲ್ಪ ಏಟಾದರೂ ತಮ್ಮ ಮನೆಯ ಸದಸ್ಯರಿಗೆ ಏನೋ ಆಗಿದೆ ಎಂಬಂತೆ ಕಾಳಜಿ ವಹಿಸುತ್ತಾರೆ. ಹೀಗಿರುವಾಗ ಅವುಗಳನ್ನು ಕಳೆದುಕೊಂಡವರ ಪರಿಸ್ಥಿತಿ ಹೇಗಿರಬೇಡ. ಕಳೆದುಕೊಂಡರೂ ಅದನ್ನು ಮರಳಿ ಪಡೆಯುವ ಸಂದರ್ಭ ಎಂತಹವರನ್ನು ಕರಗಿಸುವಂಥದ್ದು. ಅಂತೆಯೇ ಇಲ್ಲಿ ತಾನು ‌ಸಾಕಿದ ಬೆಕ್ಕನ್ನು ಕಳೆದುಕೊಂಡಿದ್ದ ಸ್ಕಾಟ್ಲೆಂಡಿನ ಮಹಿಳೆಯೊಬ್ಬರು 17 ವರ್ಷಗಳ ಬಳಿಕ ಅದೇ ಬೆಕ್ಕನ್ನು ಮತ್ತೆ ಪಡೆದ ರೋಚಕಕಾರಿ ಘಟನೆ ನಡೆದಿದೆ.

ಕಿಮ್‍ಕೋಲಿನ್ ಎಂಬ ಮಹಿಳೆ ಬೆಕ್ಕೊಂದನ್ನು ಸಾಕಿದ್ದರು. ಅದಕ್ಕೆ ಟಿಲ್ಲಿ ಎಂಬ ಹೆಸರಿಟ್ಟಿದ್ದರು. ಆದರೆ ಕಿಮ್‍ಕೋಲಿನ್ ಅವರು ಇಂಗ್ಲೆಂಡಿನಿಂದ ಸ್ಕಾಟ್ಲೆಂಡ್‍ನ ಮಿಡ್ಲೋಥಿಯನ್‍ಗೆ ಮನೆ ಬದಲಾವಣೆ ಮಾಡುವ ವೇಳೆ ಟಿಲ್ಲಿ ತಪ್ಪಿಸಿಕೊಂಡಿತ್ತು. ಆದರೂ ಛಲ ಬಿಡದ ಕಿಮ್ ತಮ್ಮ ಮುದ್ದಿನ ಬೆಕ್ಕು ಟಿಲ್ಲಿಯನ್ನು ಹುಡುಕುವ ಸಲುವಾಗಿ ನಿರಂತರವಾಗಿ ಪೋಸ್ಟ್ ‍ಗಳನ್ನು ಹಾಕಿದ್ದಾರೆ. ಇದರ ಫಲವಾಗಿ 17 ವರ್ಷಗಳ ಬಳಿಕ ಆ ಬೆಕ್ಕು ಅವರಿಗೆ ಮತ್ತೆ ಸಿಕ್ಕಿದೆ. ಇದಕ್ಕಾಗಿ ಅವರು ಬೆಕ್ಕಿಗೆ ಅಳವಡಿಸಿದ್ದ ಮೈಕ್ರೋಚಿಪ್‍ಗೆ ಧನ್ಯವಾದ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಕಿಮ್‍ಕೋಲಿನ್ ಅವರು, ಟೆಲ್ಲಿ 17 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಜಾಗದಲ್ಲೇ ಪ್ರತ್ಯೇಕ್ಷವಾಗಿದ್ದಾಳೆ. ಬೆಕ್ಕು ಸಿಕ್ಕಿರುವ ಸಂತೋಷವನ್ನು ನನಗೆ ತಿಳಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
20ನೇ ವರ್ಷಕ್ಕೆ ಕಾಲಿಡಲಿರುವ ಟಿಲ್ಲಿ ಟ್ಯೂಮರ್‍ನಿಂದ ಬಳಲುತ್ತಿದ್ದಾಳೆ. ಇನ್ನೂ ಕೆಲವೇ ದಿನ ಬದುಕುಳಿಯಲಿದೆ. ಈ ಹಿನ್ನೆಲೆಯಲ್ಲಿ ಬೆಕ್ಕಿಗೆ ವೈದ್ಯರು ತುರ್ತು ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಆದರೂ ಆ ಮಹಿಳೆಯ ಸತತ 17ವರ್ಷದ ಪ್ರಯತ್ನ ವ್ಯರ್ಥವಾಗಿಲ್ಲ. ಆ ಬೆಕ್ಕು ಕಣ್ಮುಚ್ಚುವ ಮುನ್ನ ತನ್ನ ಯಜಮಾನಿಯನ್ನು ಸೇರಿಕೊಂಡದ್ದು ಅದರ ಭಾಗ್ಯವೇ ಸರಿ.

Leave A Reply

Your email address will not be published.