ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಬಹುಭಾಷಾ ನಟಿ !

ಚಿತ್ರರಂಗದಲ್ಲಿ ಈಗ ಮದುವೆ ಸಂಭ್ರಮದ ಸೀಸನ್. ಎಲ್ಲಾ ಕಡೆ ಸೆಲೆಬ್ರಿಟಿಗಳು ಮದುವೆ, ಎಂಗೇಜ್ಮೆಂಟ್ ಗಳು ನಡೆಯುತ್ತಲೇ ಇದೆ. ಈ ಸಾಲಿಗೆ ಸೇರಿದ್ದಾರೆ ಈ ಬಹುಭಾಷಾ ನಟಿ. ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡ ಈ ನಟಿ ಟ್ವಿಟ್ಟರ್ ನಲ್ಲಿ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಬಹುಭಾಷಾ ನಟಿ ನಿಕ್ಕಿ ಗಲ್ರಾನಿಯೇ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನ ನಟಿ ಸಂಜನಾ ಗಲ್ರಾನಿ ಯ ತಂಗಿ ಕೂಡಾ ಆಗಿರುವ ಈ ನಟಿ ತನ್ನ ನಿಕ್ಕಿ ತನ್ನ ಬಹುಕಾಲದ ಗೆಳೆಯ ಆದಿ ಜೊತೆ ಎಂಗೇಜ್ ಆಗಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ನಿಕ್ಕಿ ಮತ್ತು ಆದಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರ್ಷಗಳ ಹಿಂದೆಯೇ ಸುದ್ದಿಯಾಗಿತ್ತು. ಆದರೆ ಆವಾಗ ಈ ಜೋಡಿ ಉತ್ತರ ನೀಡಿರಲಿಲ್ಲ. ಈಗ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.

2020ರಲ್ಲಿ ಆದಿ ಪಿನಿಸೆಟ್ಟಿ ಅವರ ತಂದೆ ರವಿ ರಾಜ ಪಿನಿಸೆಟ್ಟಿ ಜನ್ಮದಿನ ಸಮಾರಂಭದಲ್ಲಿ ನಿಕ್ಕಿ ಭಾಗಿಯಾಗಿದ್ದರು. ಆ ಬರ್ತ್‌ಡೇ ಸೆಲೆಬ್ರೇಷನ್‌ನಲ್ಲಿ ಕುಟುಂಬದವರಷ್ಟೇ ಇದ್ದರು. ಅವರ ಜೊತೆಗೆ ನಿಕ್ಕಿ ಇರುವ ಫೋಟೋಗಳು ಆವಾಗಲೇ ವೈರಲ್ ಆಗಿದ್ದವು. ಆಗಿನಿಂದಲೇ ಈ ಜೋಡಿಯ ಪ್ರೇಮ್ ಕಹಾನಿ ಬಗ್ಗೆ ವದಂತಿ ಇತ್ತು.

ತೆಲುಗು ಚಿತ್ರರಂಗದಲ್ಲಿ ನಿರ್ಮಾಪಕ, ನಿರ್ದೇಶಕರಾಗಿ ಗುರುತಿಸಿಕೊಂಡಿರುವ ರವಿ ರಾಜ ಪಿನಿಸೆಟ್ಟಿ ಅವರ ಪುತ್ರ ಆದಿ. 39ರ ಹರೆಯದ ಆದಿ 2006ರಲ್ಲಿ ತೆರೆಕಂಡ ‘ಓಕ ವಿ ಚಿತ್ರಂ’ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಹೀರೋ, ಪೋಷಕ ನಟ, ವಿಲನ್ ಹೀಗೆ ಬೇರೆ ಬೇರೆ ರೋಲ್‌ಗಳಲ್ಲಿ ಮಿಂಚಿರುವ ಅವರು, ‘ನಿನ್ನು ಕೋರಿ’, ‘ಅಜ್ಞಾತವಾಸಿ’, ‘ರಂಗಸ್ಥಲಂ’, ‘ಯು ಟರ್ನ್’, ‘ಸರೈನೋಡು’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ‘ದಿ ವಾರಿಯರ್’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ತಮಿಳು, ಮಲಯಾಳಂ ಭಾಷೆಯ ಚಿತ್ರರಂಗದಲ್ಲಿ ಸಖತ್ ಬ್ಯುಸಿ ಇರುವ ನಿಕ್ಕಿ, ಕಳೆದ ಏಳು ವರ್ಷಗಳಲ್ಲಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಪ್ರಸ್ತುತ ನಿಕ್ಕಿ ಕೈಯಲ್ಲಿ ಕೂಡಾ ಹಲವಾರು ಚಿತ್ರಗಳಿವೆ.

error: Content is protected !!
Scroll to Top
%d bloggers like this: