ಮದುವೆಯಾದವಳ ಜೊತೆ ಯುವಕನ ದೈಹಿಕ ಸಂಬಂಧ| ಕ್ಷಣಿಕ ಸುಖಕ್ಕಾಗಿ ಆಂಟಿಯ ಸಂಬಂಧ ಮಾಡಿದ ಯುವಕನ ದುರಂತ ಅಂತ್ಯ!

ಇದೊಂದು ಅನೈತಿಕ ಸಂಬಂಧದ ವಿಷಯ. ಯುವಕನಿಗೆ ಆಂಟಿಯೊಬ್ಬಳ ಜೊತೆ ಲವ್. ಅದು ದೈಹಿಕ ಲವ್. ಆಕೆಗೋ ಮದುವೆ ಆಗಿದೆ. ಈತ ಇನ್ನೂ ಯುವಕ‌. ಆದರೆ ಇತ್ತೀಚೆಗೆ ಈ ಯುವಕ ಲೈವ್ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರಣ ಕೇಳಿದರೆ ನಿಮಗೆ ವ್ಯಥೆ ಅನಿಸುವುದು ಖಂಡಿತ. ಈ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ಕುಂದಲಗುರ್ಕಿ ಗ್ರಾಮದಲ್ಲಿ.

ಈ ಆಂಟಿಗೆ ಮೊದಲೇ ಮದುವೆ ಆಗಿದೆ. ಆದರೂ ಆಕೆ ಯುವಕನೊಬ್ಬನ ಜತೆ ಅಕ್ರಮ ಸಂಬಂಧ ಬೆಳೆದಿತ್ತು. ಇದೀಗ ಆ ಆಂಟಿಯ ಕಿರುಕುಳ ತಾಳಲಾರದೆ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


Ad Widget

Ad Widget

Ad Widget

ಮುನಿಕೃಷ್ಣ(28) ಎಂಬಾತನೇ ಮೃತ ಯುವಕ. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಸಂಬಂಧ, ಬರಬರುತ್ತಾ ಏನಾಯ್ತೋ, ಮುನಿಕೃಷ್ಣ ಆಂಟಿಯಿಂದ ಅಂತರ ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದ.

ಈ ವಿಚಾರ ಆಂಟಿಗೆ ಗೊತ್ತಾಗುತ್ತಿದ್ದಂತೆ ಯುವಕನ ಬೆನ್ನತ್ತಿದ ಆಕೆ, ನೀನು ನನಗೇ ಬೇಕು. ಯಾರಿಗೂ ನಾನು ಬಿಟ್ಟುಕೊಡಲ್ಲ ಎಂದು ಪಟ್ಟು ಹಿಡಿದಿದ್ದಳು.

ಪ್ರೇಯಸಿಯ ಕಿರುಕುಳ ತಾಳಲಾರದೇ ಯುವಕ ದುರಂತ ಅಂತ್ಯ ಕಂಡಿದ್ದಾನೆ. ಪರಸ್ತ್ರೀ ಜತೆಗಿನ ಸಲ್ಲಾಪ ಯುವಕ ಪ್ರಾಣವನ್ನೇ ಬಲಿ ಪಡೆದಿದೆ.

ಇತ್ತೀಚಿಗೆ ಈತ ಬೇರೊಬ್ಬ ಯುವತಿ ಜತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದು ಆಂಟಿಯ ಕಿರುಕುಳಕ್ಕೆ ಕಾರಣವಾಗಿದೆ.

ಸೆಲ್ಫಿ ವಿಡಿಯೋ ಮಾಡಿಕೊಂಡು ಈ ಯುವಕ , ತಾನು ತಪ್ಪು ಮಾಡಿಬಿಟ್ಟೆ ಎಂಬಂತೆ ಬಿಕ್ಕಿಬಿಕ್ಕಿ ಅತ್ತಿದ್ದಾನೆ. ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷ ಸೇವಿಸುವ ದೃಶ್ಯ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!
Scroll to Top
%d bloggers like this: